ಮೋದಿ ಮತ್ತು ಟ್ರಂಪ್ ಮಧ್ಯೆ ಲಡಾಕ್ ಬಗ್ಗೆ ಮಾತುಕತೆ ನಡೆದಿಲ್ಲ: ಅಮೆರಿಕ ಅಧ್ಯಕ್ಷರ ಹೇಳಿಕೆ ತಳ್ಳಿಹಾಕಿದ ಸರ್ಕಾರ!

ಭಾರತ-ಚೀನಾ ಗಡಿ ಸಮಸ್ಯೆ ಬಗ್ಗೆ ಪ್ರಧಾನಿ ಮೋದಿ ಜೊತೆ ಮಾತನಾಡಿದ್ದೇನೆ, ಅಗತ್ಯಬಿದ್ದರೆ ಮಧ್ಯೆಪ್ರವೇಶಿಸಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗೆ ವ್ಯತಿರಿಕ್ತವಾದ ಹೇಳಿಕೆಯನ್ನು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ನರೇಂದ್ರ ಮೋದಿ-ಡೊನಾಲ್ಡ್ ಟ್ರಂಪ್
ನರೇಂದ್ರ ಮೋದಿ-ಡೊನಾಲ್ಡ್ ಟ್ರಂಪ್

ನವದೆಹಲಿ: ಭಾರತ-ಚೀನಾ ಗಡಿ ಸಮಸ್ಯೆ ಬಗ್ಗೆ ಪ್ರಧಾನಿ ಮೋದಿ ಜೊತೆ ಮಾತನಾಡಿದ್ದೇನೆ, ಅಗತ್ಯಬಿದ್ದರೆ ಮಧ್ಯೆಪ್ರವೇಶಿಸಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗೆ ವ್ಯತಿರಿಕ್ತವಾದ ಹೇಳಿಕೆಯನ್ನು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಉಭಯ ನಾಯಕರ ಮಧ್ಯೆ ಇತ್ತೀಚೆಗೆ ಯಾವುದೇ ಮಾತುಕತೆ ನಡೆದಿಲ್ಲ, ಇಬ್ಬರೂ ಇತ್ತೀಚೆಗೆ ಫೋನ್ ಮೂಲಕ ಸಂಪರ್ಕಿಸಿಲ್ಲ, ಮೋದಿ ಮತ್ತು ಟ್ರಂಪ್ ಮಧ್ಯೆ ಮಾತುಕತೆ ನಡೆದಿದ್ದು ಕೊನೆಯ ಬಾರಿಗೆ ಕಳೆದ ಏಪ್ರಿಲ್ 4ರಂದು. ಅದು ಕೊರೋನಾ ವೈರಸ್ ಗೆ ಔಷಧಿಯಾದ ಹೈಡ್ರಾಕ್ಸಿಕ್ಲೋರೋಕ್ವಿನ್ ಬಗ್ಗೆ ಎಂದು ಮೂಲಗಳು ಹೇಳಿವೆ.

ಸ್ಥಾಪಿತ ಕಾರ್ಯವಿಧಾನಗಳು ಮತ್ತು ರಾಜತಾಂತ್ರಿಕ ಸಂಪರ್ಕಗಳ ಮೂಲಕ ಚೀನಾ ಜೊತೆಗೆ ನೇರವಾಗಿ ವಿದೇಶಾಂಗ ಇಲಾಖೆ ಸಂಪರ್ಕ ಹೊಂದಿದ್ದು ಇದರಲ್ಲಿ ಮೂರನೇ ವ್ಯಕ್ತಿಯ ಮಧ್ಯಪ್ರವೇಶವನ್ನು ಕೇಳಿಲ್ಲ ಎಂದು ನಿನ್ನೆ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ನಿನ್ನೆ ಪ್ರತಿಕ್ರಿಯೆ ನೀಡಿದ್ದ ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾಸ್ತವ, ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಲು ಭಾರತ ಬದ್ಧವಾಗಿದೆ. ನಮ್ಮ ರಾಜತಾಂತ್ರಿಕ ನಿಲುವು ದೆಹಲಿ ಮತ್ತು ಬೀಜಿಂಗ್ ಮಧ್ಯೆ ಇದೆ. ಅದು ರಾಜತಾಂತ್ರಿಕ ಮತ್ತು ಮಿಲಿಟರಿ ಹಂತದಲ್ಲಿ ನಡೆಯುತ್ತಿದೆ. ಶಾಂತಿ ಮತ್ತು ಭಾತೃತ್ವ ಸ್ಥಾಪನೆಗೆ ಹಲವು ಒಪ್ಪಂದಗಳಿಗೆ ಎರಡೂ ದೇಶಗಳು ಸಹಿ ಹಾಕಿವೆ ಎಂದಿದ್ದರು.ಅದರ ಮುಂದುವರಿದ ಭಾಗವಾಗಿ ಗಡಿ ಸಮಸ್ಯೆಯನ್ನೂ ಬಗೆಹರಿಸಲು ನೋಡುತ್ತಿದ್ದೇವೆ ಎಂದಿದ್ದಾರೆ.

ಈ ಹಿಂದೆ ಕಾಶ್ಮೀರ ವಿವಾದದಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದನ್ನು ಭಾರತ ತಿರಸ್ಕರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com