'ಅರೆಬೆತ್ತಲಾಗಿ ತೀವ್ರ ಟೀಕೆಗೆ ಗುರಿಯಾಗಿದ್ದ ರೆಹನಾ ಫಾತಿಮಾ ವಿರುದ್ದ ಆಕೆಯ ತಾಯಿಯಿಂದಲೇ ದೂರು!

ಕಾರ್ಯಕರ್ತೆ ರೆಹನಾ ಫಾತಿಮಾ ವಿರುದ್ಧ ಆಕೆಯ ತಾಯಿಯೇ ದೂರು ನೀಡಿದ್ದಾರೆ. ರಹ್ನಾ ಫಾತಿಮಾ ಅವರ ತಾಯಿ ಪ್ಯಾರಿ ಅವರು ಅಲಪ್ಪುಳ ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರೆಹನಾ ಫಾತಿಮಾ
ರೆಹನಾ ಫಾತಿಮಾ
Updated on

ಅಲಪ್ಪುಳ: ಕಾರ್ಯಕರ್ತೆ ರೆಹನಾ ಫಾತಿಮಾ ವಿರುದ್ಧ ಆಕೆಯ ತಾಯಿಯೇ ದೂರು ನೀಡಿದ್ದಾರೆ. ರಹ್ನಾ ಫಾತಿಮಾ ಅವರ ತಾಯಿ ಪ್ಯಾರಿ ಅವರು ಅಲಪ್ಪುಳ ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ತನ್ನ ಮಗಳು ಮತ್ತು ಅಳಿಯ ಮಾನಸಿಕ ಮತ್ತು ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ. ಅಲ್ಲದೆ ಚಿತ್ರಹಿಂಸೆ ನಂತರ ತಾನು ಅಲಪ್ಪುಳದಲ್ಲಿರುವ ತನ್ನ ಸಂಬಂಧಿಕರ ಮನೆಗೆ ತೆರಳಿದ್ದು ಅಲ್ಲಿಯೂ ಬೆದರಿಕೆಗಳು ಮುಂದುವರಿದಿವೆ ಎಂದು ದೂರಿದ್ದಾರೆ.

ರೆಹನಾ ಫಾತಿಮಾ ತನ್ನ ಒಬ್ಬಳೇ ಮಗಳು. ಆಕೆ ತನ್ನ ಮಗನೊಂದಿಗೆ ಎರ್ನಾಕುಲಂನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಳು ಎಂದು ಪ್ಯಾರಿ ದೂರಿನಲ್ಲಿ ಹೇಳಿದ್ದಾರೆ. ಮಗಳು ಮತ್ತು ಅಳಿಯ (ರಹನಾ ಅವರ ಮಾಜಿ ಪತಿ ಮನೋಜ್ ಕೆ ಶ್ರೀಧರ್) ನಿರಂತರವಾಗಿ ತನಗೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ಯಾರಿ ಆರೋಪಿಸಿದ್ದಾರೆ. ತನಗೆ ಚಿತ್ರಹಿಂಸೆ ನೀಡಲಾಗಿದ್ದು, ಜೀವ ಬೆದರಿಕೆ ಬಂದಾಗ ಅಲ್ಲಿಂದ ಹೊರ ಬಂದಿದ್ದೇನೆ ಎಂದು ದೂರಿನಲ್ಲಿ ಪ್ಯಾರಿ ತಿಳಿಸಿದ್ದಾರೆ.

ದೂರಿನ ಪ್ರಕಾರ, ರೆಹನಾ ಫಾತಿಮಾ ಎರಡು ತಿಂಗಳಿನಿಂದ ಅಲಪ್ಪುಳದಲ್ಲಿ ತನ್ನ ಸಂಬಂಧಿಯೊಂದಿಗೆ ನೆಲೆಸಿದ್ದಾಳೆ. ಇನ್ನು ರೆಹನಾ ಫಾತಿಮಾ ತನ್ನ ಸಂಬಂಧಿಕರಿಗೆ ಫೋನ್ ಮೂಲಕ ಬೆದರಿಕೆ ಹಾಕುತ್ತಿದ್ದಾಳೆ. ಇನ್ನು ಮುಂದೆ ತನ್ನ ಮಗಳ ಜೊತೆ ಬಾಳುವ ಆಸಕ್ತಿ ಇಲ್ಲ, ಯಾವುದೇ ಸಂದರ್ಭದಲ್ಲೂ ಅಲ್ಲಿ ವಾಸಿಸುತ್ತಿರುವ ಕುಟುಂಬ ಸದಸ್ಯರಿಗೆ ತೊಂದರೆ ಕೊಡಬಾರದು ಎಂದು ತಾಯಿ ರಹನಾ ಫಾತಿಮಾಗೆ ಎಚ್ಚರಿಕೆ ನೀಡಲು ಬಯಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com