ಭಾರತ್ ಜೋಡೋ ಯಾತ್ರೆ: ಬಾಲಕಿ ಚಪ್ಪಲಿ ಧರಿಸಲು ನೆರವಾದ ರಾಹುಲ್ ಗಾಂಧಿ- ವಿಡಿಯೋ

ಭಾರತ್ ಜೋಡೋ ಯಾತ್ರೆ ವೇಳೆಯಲ್ಲಿ ಬಾಲಕಿ ಚಪ್ಪಲಿ ಧರಿಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೆರವಾಗಿರುವ ವಿಡಿಯೋ ಗಮನ ಸೆಳೆದಿದೆ.
ಬಾಲಕಿ ಚಪ್ಪಲಿ ಹಾಕಲು ನೆರವಾದ ರಾಹುಲ್
ಬಾಲಕಿ ಚಪ್ಪಲಿ ಹಾಕಲು ನೆರವಾದ ರಾಹುಲ್

ತಿರುವನಂತಪುರಂ: ಭಾರತ್ ಜೋಡೋ ಯಾತ್ರೆ ವೇಳೆಯಲ್ಲಿ ಬಾಲಕಿ ಚಪ್ಪಲಿ ಧರಿಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೆರವಾಗಿರುವ ವಿಡಿಯೋ ಗಮನ ಸೆಳೆದಿದೆ.

ಭಾರತ್ ಜೋಡೋ ಯಾತ್ರೆಯ 11 ದಿನವಾದ ಇಂದು ಕೇರಳದ ಹರಿಪಾಡ್ ನಿಂದ ರಾಹುಲ್ ಗಾಂಧಿ ಪಾದಯಾತ್ರೆ ಮುಂದುವರೆಸಿದ ರಾಹುಲ್ ಗಾಂಧಿ, ದಾರಿ ಮಧ್ಯೆ ಪುಟ್ಟ ಬಾಲಕಿ ಚಪ್ಪಲಿ ಧರಿಸಲು ನೆರವಾಗಿದ್ದಾರೆ. 

ಮಹಿಳಾ ಕಾಂಗ್ರೆಸ್ ನ ಹಂಗಾಮಿ ಅಧ್ಯಕ್ಷೆ ನೀಟಾ ಡಿಸೋಜಾ, ತಮ್ಮ ಟ್ವೀಟರ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿದ್ದು, ಇದು ರಾಹುಲ್ ಗಾಂಧಿ ಅವರ ಸರಳ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ ಎಂದು ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com