Video: ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಚಲಿಸುತ್ತಿರುವ ರೈಲಿಗೆ ಕಲ್ಲು ತೂರಾಟ; ಮಹಿಳೆಯರು, ಮಕ್ಕಳ ಕಿರುಚಾಟ ಕ್ಯಾಮರಾದಲ್ಲಿ ಸೆರೆ

ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು ದರ್ಗಾಕ್ಕೆ ಉರ್ಸ್‌ಗೆ ಹೋಗುತ್ತಿದ್ದರು. ರೈಲು ದರ್ಗಾ ಬಳಿ ಬಂದ ತಕ್ಷಣ ಚೈನ್ ಎಳೆದು ರೈಲನ್ನು ನಿಲ್ಲಿಸಿ ಸುಮಾರು ಅರ್ಧ ಗಂಟೆ ರೈಲು ನಿಂತಿತು, ಆದರೆ ರೈಲು ಪ್ರಾರಂಭವಾದಾಗ ಈ ಜನರು ಏಕಾಏಕಿ ಕಲ್ಲು ತೂರಾಟ ನಡೆಸಿದರು.
Mob allegedly pelted stones at a passenger train in Maharashtra's Jalgaon
ಜಲಗಾಂವ್‌ನಲ್ಲಿ ಚಲಿಸುತ್ತಿರುವ ರೈಲಿಗೆ ಕಲ್ಲು ತೂರಾಟ
Updated on: 

ಜಲಗಾಂವ್‌: ಮಹಾರಾಷ್ಟ್ರದ ಜಲಗಾಂವ್ ನಲ್ಲಿ ಪ್ಯಾಸೆಂಜರ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ರೈಲಿನ ಹೊರಗೆ ನೂರಾರು ಮಂದಿ ನಿಂತಿದ್ದು, ರೈಲಿನ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಹಠಾತ್ ಕಲ್ಲು ತೂರಾಟದ ಘಟನೆಯು ರೈಲಿನೊಳಗಿನ ಪ್ರಯಾಣಿಕರಲ್ಲಿ ಭಯ ಉಂಟುಮಾಡಿದ್ದು, ವಿಡಿಯೋದಲ್ಲಿ ಮಹಿಳೆಯರು ಮತ್ತು ಮಕ್ಕಳ ಕಿರುಚಾಟ ಕೇಳಿಬರುತ್ತಿದೆ.

ಮೂಲಗಳ ಪ್ರಕಾರ ಈ ಘಟನೆ ಜುಲೈ 12 ರಂದು ನಡೆದಿದ್ದು, ಭೂಸಾವಲ್‌ನಿಂದ ನಂದೂರ್‌ಬಾರ್‌ಗೆ ಪ್ಯಾಸೆಂಜರ್ ರೈಲು ಹೋಗುತ್ತಿತ್ತು. ಈ ರೈಲು ಸುಮಾರು 11 ಗಂಟೆಗೆ ಅಮಲ್ನೇರ್‌ನಿಂದ ಮುಂದೆ ಸಾಗಿತು. ನಿಲ್ದಾಣ ದಾಟಿದ ಸುಮಾರು 10 ನಿಮಿಷಗಳ ನಂತರ ಕೆಲವರು ಚೈನ್ ಎಳೆದು ರೈಲನ್ನು ನಿಲ್ಲಿಸಿದರು. ರೈಲು ನಿಂತ ನಂತರ ನೂರಾರು ಮಂದಿ ರೈಲಿನಿಂದ ಇಳಿದರು.

ಕೆಳಗಿಳಿದ ಅದೇ ಗುಂಪು ರೈಲಿನ ಮೇಲೆ ಕಲ್ಲು ತೂರಾಟ ಆರಂಭಿಸಿತು. ಜನರು ಯದ್ವಾತದ್ವಾ ರೈಲಿನ ಕಿಟಕಿಗಳನ್ನು ಮುಚ್ಚಿ ಪ್ರಾಣ ಉಳಿಸಿಕೊಂಡರು. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಯಾವುದೇ ಸುದ್ದಿಯಿಲ್ಲ, ಆದರೆ ಸರ್ಕಾರಿ ಆಸ್ತಿ-ಪಾಸ್ತಿಗೆ ಹಾನಿಯಾಗಿದೆ.

ದರ್ಗಾಕ್ಕೆ ಉರ್ಸ್‌ಗೆ ಹೋಗೆ ಕಲ್ಲುತೂರಾಟ ಮಾಡಿದ ಕಿಡಿಗೇಡಿಗಳು

ಇನ್ನು ರಾಷ್ಟ್ರೀಯ ಸುದ್ದಿವಾಹಿನಿ ಜನಸತ್ತಾ ವರದಿ ಮಾಡಿರುವಂತೆ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು ದರ್ಗಾಕ್ಕೆ ಉರ್ಸ್‌ಗೆ ಹೋಗುತ್ತಿದ್ದರು. ರೈಲು ದರ್ಗಾ ಬಳಿ ಬಂದ ತಕ್ಷಣ ಚೈನ್ ಎಳೆದು ರೈಲನ್ನು ನಿಲ್ಲಿಸಿ ಸುಮಾರು ಅರ್ಧ ಗಂಟೆ ರೈಲು ನಿಂತಿತು, ಆದರೆ ರೈಲು ಪ್ರಾರಂಭವಾದಾಗ ಈ ಜನರು ಏಕಾಏಕಿ ಕಲ್ಲು ತೂರಾಟ ನಡೆಸಿದರು. ಕಲ್ಲು ತೂರಾಟದ ನಡುವೆ ಪ್ರಯಾಣಿಕರು ರೈಲಿನ ಗಾಜುಗಳನ್ನು ಮುಚ್ಚಿ ಪ್ರಾಣ ಉಳಿಸಿಕೊಂಡರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಬಿರ್ಭೂಮ್‌ನಲ್ಲೂ ಇಂತಹದ್ದೇ ಘಟನೆ ವರದಿ

ಈ ಹಿಂದೆ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಪಶ್ಚಿಮ ಬಂಗಾಳದ ಬಿರ್ಭೂಮ್‌ನಿಂದ ಬೆಳಕಿಗೆ ಬಂದಿತ್ತು. ಚಲಿಸುತ್ತಿದ್ದ ರೈಲಿನ ಮೇಲೂ ಕಲ್ಲು ತೂರಾಟ ನಡೆದಿದೆ. ರೈಲು ನಿಲ್ಲಿಸದ ಕಾರಣ ಆಕ್ರೋಶಗೊಂಡ ಜನರು ರೈಲಿಗೆ ಕಲ್ಲು ತೂರಿದ್ದಾರೆ ಎಂದು ಹೇಳಲಾಗುತ್ತಿದೆ. ದುಬ್ರಾಜ್‌ಪುರ-ಚಿನ್‌ಪೈ ರೈಲು ನಿಲ್ದಾಣದ ನಡುವೆ ಈ ಘಟನೆ ನಡೆದಿದೆ. ದಾಳಿಕೋರರು ಆಲಂ ಬಾಬಾನ ಜಾತ್ರೆಗೆ ತೆರಳುತ್ತಿದ್ದರು ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com