ಡ್ರಾಪ್ ಬಳಿಕ ವಾಟ್ಸಾಪ್ ನಲ್ಲಿ 'Rapido Rider'ವಿಚಿತ್ರ ರೀತಿಯ ಮೇಸೆಜ್: ಸ್ಕ್ರೀನ್‌ಶಾಟ್ ಹಂಚಿಕೊಂಡ ಯುವತಿ! Video

ಡ್ರಾಪ್ ಮಾಡಿದ ಬಳಿಕ ತನನ್ನು ವಾಟ್ಸಾಪ್‌ನಲ್ಲಿ ಸಂಪರ್ಕಿಸಿದ ರಾಪಿಡ್ ರೈಡರ್, ವಿಚಿತ್ರವಾದ ರೀತಿಯಲ್ಲಿ ಮೇಸೆಜ್ ಮಾಡುತ್ತಿದ್ದ ಎಂದು ಅನುಷ್ಕಾ ಹೇಳಿದ್ದಾರೆ.
Anushka
ಅನುಷ್ಕಾ
Updated on

ಬೈಕ್ ಟ್ಯಾಕ್ಸಿ ರಾಪಿಡೋ ರೈಡರ್ ಕಿರುಕುಳದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರೈಡ್ ಮುಗಿದ ಬಳಿಕವೂ ವಾಟ್ಸಾಪ್‌ನಲ್ಲಿ ಯುವತಿ ಸಂಪರ್ಕಿಸಿದ, ರೈಡರ್ ಯಾವ ರೀತಿಯ ಸಂದೇಶ ಕಳುಹಿಸಿದ್ದಾನೆ ಎಂಬುದನ್ನು ಅನುಷ್ಕಾ ಎಂಬ ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಘಟನೆಯು ಬೈಕ್ ರೈಡರ್ ನಡವಳಿಕೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.

ಡ್ರಾಪ್ ಮಾಡಿದ ಬಳಿಕ ತನನ್ನು ವಾಟ್ಸಾಪ್‌ನಲ್ಲಿ ಸಂಪರ್ಕಿಸಿದ ರಾಪಿಡ್ ರೈಡರ್, ವಿಚಿತ್ರವಾದ ರೀತಿಯಲ್ಲಿ ಮೇಸೆಜ್ ಮಾಡುತ್ತಿದ್ದ ಎಂದು ಅನುಷ್ಕಾ ಹೇಳಿದ್ದಾರೆ. ಇದರ ಸ್ಕ್ರೀನ್ ಶಾಟ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವರು ಹಂಚಿಕೊಂಡಿದ್ದಾರೆ.

ಈ ಪೋಸ್ಟ್ ತ್ವರಿತಗತಿಯಲ್ಲಿ ವೈರಲ್ ಆಗಿದ್ದು, ಅನೇಕ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಬೈಕ್ ರೈಡರ್ ಹೇಗೆ ಮೊಬೈಲ್ ಸಂಖ್ಯೆ ಪಡೆದ ಎಂಬುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಕಂಪನಿ ಪ್ರತಿಕ್ರಿಯೆ: ಈ ಪೋಸ್ಟ್ ಬಳಿಕ ಕಂಪನಿಯು ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಅಂತಹ ನಡವಳಿಕೆಯನ್ನು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ. ಬೈಕ್ ರೈಡರ್ ನ ಅನುಚಿತ ವರ್ತನೆಗೆ ಕ್ಷಮೆಯಾಚಿಸುವುದಾಗಿ ರಾಪಿಡೋ ಹೇಳಿದೆ,

ಇದು ತನ್ನ ಸೇವಾ ಮಾನದಂಡಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ. ಬಳಕೆದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ರೈಡ್ ಐಡಿಯನ್ನು ನೇರ ಸಂದೇಶದ ಮೂಲಕ ಹಂಚಿಕೊಳ್ಳುವಂತೆ ವಿನಂತಿಸಿದೆ, ಇದರಿಂದಾಗಿ ಈ ವಿಷಯವನ್ನು ಆದ್ಯತೆಯ ಮೇರೆಗೆ ತನಿಖೆ ಮಾಡಬಹುದು ಮತ್ತು ಕಠಿಣ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದೆ.

Anushka
ಮೈಸೂರು: Rapido ಬೈಕ್ ಏರಿದ ಸವಾರನಿಗೆ ಆಟೋ ಚಾಲಕರಿಂದ ಹಲ್ಲೆ, Video Viral

ಸುರಕ್ಷತೆ ಬಗ್ಗೆ ಕಳವಳ: ಈ ಘಟನೆಯು ಬೈಕ್ ರೈಡಿಂಗ್ ಬಳಸುವಾಗ ಸುರಕ್ಷತೆ ಮತ್ತು ಡೇಟಾ ಗೌಪ್ಯತೆಯ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ. ರೈಡ್ ಮುಗಿದ ನಂತರ ಯಾರ ವೈಯಕ್ತಿಕ ಸಂಪರ್ಕ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಅನೇಕ ಬಳಕೆದಾರರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com