ವಾಹನ ಸವಾರರ ಗಮನಕ್ಕೆ; ಏಪ್ರಿಲ್ 1 ರಿಂದ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಇಲ್ಲ!

ಏಪ್ರಿಲ್ ನಿಂದ ಸಂಪೂರ್ಣ ಡಿಜಿಟಲ್ ರಾಷ್ಟ್ರೀಯ ಹೆದ್ದಾರಿ ಟೋಲ್ ಪರಿಸರ ವ್ಯವಸ್ಥೆಯನ್ನು ರಚಿಸುವ ಪ್ರಸ್ತಾಪವಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ(MoRTH) ಶುಕ್ರವಾರ ತಿಳಿಸಿದೆ.
Bengaluru-Mysuru toll
ಬೆಂಗಳೂರು-ಮೈಸೂರು ಟೋಲ್
Updated on

ನವದೆಹಲಿ: ಏಪ್ರಿಲ್ 1 ರಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ(NHAI) ವ್ಯಾಪ್ತಿಯಲ್ಲಿರುವ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು ನಿಷೇಧಿಸಲು ಸರ್ಕಾರ ಸಜ್ಜಾಗಿದೆ.

ಏಪ್ರಿಲ್ ನಿಂದ ಸಂಪೂರ್ಣ ಡಿಜಿಟಲ್ ರಾಷ್ಟ್ರೀಯ ಹೆದ್ದಾರಿ ಟೋಲ್ ಪರಿಸರ ವ್ಯವಸ್ಥೆಯನ್ನು ರಚಿಸುವ ಪ್ರಸ್ತಾಪವಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ(MoRTH) ಶುಕ್ರವಾರ ತಿಳಿಸಿದೆ.

ವಾಹನ ಸವಾರರು ಡಿಜಿಟಲ್ ಅಥವಾ ಏಕೀಕೃತ ಪಾವತಿ ಇಂಟರ್ಫೇಸ್(UPI) ಮೋಡ್ ಮೂಲಕ ಮಾತ್ರ ಶುಲ್ಕವನ್ನು ಪಾವತಿಸಲು ಅನುಮತಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.

Bengaluru-Mysuru toll
ಜೇವರ್ಗಿ-ಬಳ್ಳಾರಿ ಮಾರ್ಗ ಸೇರಿ ರಾಜ್ಯದ 6 ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಅನುಮೋದನೆ

ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಪ್ರಯಾಣವನ್ನು ಸುಗಮಗೊಳಿಸುವ ಉದ್ದೇಶದಿಂದ ಪ್ರಯಾಣಿಕರು ಟೋಲ್‌ಗಳನ್ನು ಪಾವತಿಸಲು FASTag ಅಥವಾ UPI ಅನ್ನು ಬಳಸಬೇಕಾಗುತ್ತದೆ. ಇದು ಟೋಲ್ ವಹಿವಾಟುಗಳಲ್ಲಿ ಹೆಚ್ಚಿನ ಸ್ಥಿರತೆ ಮತ್ತು ಪಾರದರ್ಶಕತೆಯನ್ನು ತರುವ ಮೂಲಕ ಪ್ರಯಾಣವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

"ಸಂಪೂರ್ಣ ಡಿಜಿಟಲ್ ರಾಷ್ಟ್ರೀಯ ಹೆದ್ದಾರಿ ಟೋಲಿಂಗ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ, ಏಪ್ರಿಲ್ 1, 2026 ರಿಂದ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು NHAI ಚಿಂತನೆ ನಡೆಸುತ್ತಿದೆ. ಅನುಷ್ಠಾನದ ನಂತರ ಪ್ರಯಾಣಿಕರು ಟೋಲ್‌ಗಳನ್ನು ಪಾವತಿಸಲು FASTag ಅಥವಾ UPI ಅನ್ನು ಬಳಸಬೇಕಾಗುತ್ತದೆ" ಎಂದು ಸಚಿವಾಲಯ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com