ಮೇ ತಿಂಗಳಲ್ಲಿ ನಿರುದ್ಯೋಗ ದರ 5.5%ಕ್ಕೆ ಏರಿಕೆ; 11 ತಿಂಗಳಲ್ಲೇ ಗರಿಷ್ಠ ಮಟ್ಟ

ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಆವರ್ತಕ ಕಾರ್ಮಿಕ ಶಕ್ತಿ ಸಮೀಕ್ಷೆ (ಪಿಎಲ್‌ಎಫ್‌ಎಸ್) ದತ್ತಾಂಶವು ಮೇ ತಿಂಗಳಲ್ಲಿ ಗ್ರಾಮೀಣ ಉದ್ಯೋಗ ದುರ್ಬಲಗೊಂಡಿದೆ.
Unemployment rate in India
ಭಾರತದಲ್ಲಿ ನಿರುದ್ಯೋಗ ದರtnie
Updated on

ನವದೆಹಲಿ: ಭಾರತದಲ್ಲಿ ನಿರುದ್ಯೋಗ ದರವು ಏಪ್ರಿಲ್ ತಿಂಗಳ 5.2%ರಿಂದ ಮೇ ತಿಂಗಳಲ್ಲಿ 5.5%ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.

ಇದು ಕಳೆದ 11 ತಿಂಗಳಲ್ಲೇ ದಾಖಲಾಗಿರುವ ಅತಿ ಹೆಚ್ಚು ನಿರುದ್ಯೋಗ ದರವಾಗಿದೆ. ಆದರೆ ಒಟ್ಟಾರೆ ನಗರ ನಿರುದ್ಯೋಗ ದರವು ಏಪ್ರಿಲ್‌ನ 4.6%ರಿಂದ ಮೇ ತಿಂಗಳಲ್ಲಿ 5.1%ಕ್ಕೆ ಏರಿಕೆಯಾಗಿದೆ.

ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಆವರ್ತಕ ಕಾರ್ಮಿಕ ಶಕ್ತಿ ಸಮೀಕ್ಷೆ (ಪಿಎಲ್‌ಎಫ್‌ಎಸ್) ದತ್ತಾಂಶವು ಮೇ ತಿಂಗಳಲ್ಲಿ ಗ್ರಾಮೀಣ ಉದ್ಯೋಗ ದುರ್ಬಲಗೊಂಡಿದೆ ಎಂದು ತೋರಿಸಿದೆ, ಆದರೆ ನಗರ ಉದ್ಯೋಗಾವಕಾಶಗಳು ಏಪ್ರಿಲ್‌ನಲ್ಲಿ 6.6% ರಿಂದ 6.4% ಕ್ಕೆ ಸ್ವಲ್ಪಮಟ್ಟಿಗೆ ಸುಧಾರಿಸಿದೆ.

Unemployment rate in India
RSS ನೋಂದಣಿ ಮಾಡಿಸಿ ಎಂಬ ಖರ್ಗೆ ಆಗ್ರಹಕ್ಕೆ ಮೋಹನ್ ಭಾಗ್ವತ್ ಪ್ರತಿಕ್ರಿಯೆ: ಇಲ್ಲಿದೆ ವಿವರ...

ಉದ್ಯೋಗ ಮಾರುಕಟ್ಟೆ ಮೇಲೆ ಹಲವು ಸವಾಲುಗಳ ಪರಿಣಾಮ

ಈ ವರದಿ ಪ್ರಕಟವಾಗಿರುವುದು ದೇಶದಾದ್ಯಂತ ಕೈಗಾರಿಕಾ ನಗರಗಳಿಂದ ಕಾರ್ಮಿಕರು ವಲಸೆ ಹೋಗುತ್ತಿರುವುದು, LPG ಬಿಕ್ಕಟ್ಟು ಮತ್ತು ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳ ಚುನಾವಣಾ ವಾತಾವರಣದ ನಡುವೆಯಾಗಿದೆ.

ಇದಲ್ಲದೆ, ದೇಶದಲ್ಲಿ ಅತಿದೊಡ್ಡ ಉದ್ಯೋಗ ಸೃಷ್ಟಿ ಕ್ಷೇತ್ರವಾಗಿರುವ ಐಟಿ ವಲಯದಲ್ಲಿ ಮೇ ತಿಂಗಳಲ್ಲಿ ಸಕ್ರಿಯ ತಾಂತ್ರಿಕ ಉದ್ಯೋಗಗಳ ಬೇಡಿಕೆ ತಿಂಗಳ ಆಧಾರದ ಮೇಲೆ 2% ಇಳಿಕೆಯಾಗಿರುವುದಾಗಿ ಅಂದಾಜಿಸಲಾಗಿದೆ. ಆದರೆ Xpheno ವರದಿ ಪ್ರಕಾರ, ನಗರ ಕೇಂದ್ರಿತ ಐಟಿ ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಉದ್ಯೋಗ ಬೇಡಿಕೆ 5% ಏರಿಕೆಯಾಗಿದೆ.

ನಿರುದ್ಯೋಗ ಏರಿಕೆ

PLFS ವರದಿಯ ಪ್ರಕಾರ ಗ್ರಾಮೀಣ ಪುರುಷರ ನಿರುದ್ಯೋಗ ದರ ಏಪ್ರಿಲ್‌ನ 4.7%ರಿಂದ ಮೇನಲ್ಲಿ 5.2%ಕ್ಕೆ ಏರಿದೆ. ನಗರ ಪುರುಷರ ನಿರುದ್ಯೋಗ ದರ 5.9%ರಲ್ಲೇ ಸ್ಥಿರವಾಗಿದೆ. ಅಂತೆಯೇ ಮಹಿಳೆಯರ ವಿಷಯದಲ್ಲಿ ನಗರ ಪ್ರದೇಶಗಳಲ್ಲಿ ನಿರುದ್ಯೋಗ ದರ 8.5%ರಿಂದ 8.2%ಕ್ಕೆ ಇಳಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ 5.4%ರಿಂದ 5.6%ಕ್ಕೆ ಸ್ವಲ್ಪ ಏರಿಕೆಯಾಗಿದೆ.

ಕಾರ್ಮಿಕ ಶಕ್ತಿ ಭಾಗವಹಿಸುವಿಕೆ ದರ (LFPR)

15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಕಾರ್ಮಿಕ ಶಕ್ತಿ ಭಾಗವಹಿಸುವಿಕೆ ದರ (Labour Force Participation Rate - LFPR) ಮೇ 2026ರಲ್ಲಿ 54.4% ಆಗಿದೆ. ಇದು ಏಪ್ರಿಲ್ 2026ರ 55.0%ಕ್ಕಿಂತ ಕಡಿಮೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ LFPR: 56.6%ರಷ್ಟಿದ್ದು, ನಗರ ಪ್ರದೇಶಗಳಲ್ಲಿ LFPR: 49.8%ನಷ್ಟಿದೆ ಎನ್ನಲಾಗಿದೆ.

LFPR ಎಂದರೆ ಉದ್ಯೋಗದಲ್ಲಿರುವ ಅಥವಾ ಉದ್ಯೋಗಕ್ಕಾಗಿ ಸಕ್ರಿಯವಾಗಿ ಹುಡುಕುತ್ತಿರುವ ಮತ್ತು ಕೆಲಸ ಮಾಡಲು ಲಭ್ಯವಿರುವ ಜನರ ಪ್ರಮಾಣ.

ಉದ್ಯೋಗಿ-ಜನಸಂಖ್ಯೆ ಅನುಪಾತ (WPR) ಕುಸಿತ

15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಉದ್ಯೋಗಿ-ಜನಸಂಖ್ಯೆ ಅನುಪಾತ (Worker Population Ratio - WPR) ಗ್ರಾಮೀಣ ಹಾಗೂ ನಗರ ಎರಡೂ ಪ್ರದೇಶಗಳಲ್ಲಿ 0.3 ಶೇಕಡಾ ಅಂಕಗಳಷ್ಟು ಕುಸಿತ ಕಂಡಿದೆ.

ಒಟ್ಟಾರೆ WPR ಮೇ 2026 ನಲ್ಲಿ ಶೇ. 51.4% ರಷ್ಟಿದ್ದರೆ. ಏಪ್ರಿಲ್ 2026ರಲ್ಲಿ 52.2% ರಷ್ಟಿತ್ತು. ಮೇ 2025ರಲ್ಲಿ ಈ ಪ್ರಮಾಣ ಶೇ. 51.7% ರಷ್ಟಿತ್ತು. ಈ ಪೈಕಿ ಗ್ರಾಮೀಣ ಪ್ರದೇಶಗಳಲ್ಲಿ ಮೇ 2026: 53.8% ಮತ್ತು ಏಪ್ರಿಲ್ 2026: 54.9% ರಷ್ಟಿತ್ತು. ಅಂತೆಯೇ ನಗರ ಪ್ರದೇಶಗಳಲ್ಲಿ ಮೇ 2026: 46.6% ಮತ್ತು ಏಪ್ರಿಲ್ 2026: 46.8% ರಷ್ಟಿತ್ತು.

Unemployment rate in India
ನಮ್ಮದು 'ಮಧ್ಯಮ ವರ್ಗದ ಸರ್ಕಾರ', 12 ವರ್ಷಗಳಲ್ಲಿ ಸಾಮಾನ್ಯ ಜನರ ಜೀವನ ಮಟ್ಟ ಸುಧಾರಿಸುವತ್ತ ಗಮನಹರಿಸಿದೆ: ಪ್ರಧಾನಿ ಮೋದಿ

ಉದ್ಯೋಗ ಮಾರುಕಟ್ಟೆ ಮೃದುಗೊಳ್ಳುತ್ತಿದೆ: NSO

NSO ತನ್ನ ವರದಿಯಲ್ಲಿ LFPR ಮತ್ತು WPR ದರಗಳಲ್ಲಿ ಕುಸಿತ ಕಂಡುಬಂದಿರುವುದರ ಜೊತೆಗೆ ನಿರುದ್ಯೋಗ ದರ (UR) ಏರಿಕೆಯಾಗಿದೆ. ಇದು ಕಾರ್ಮಿಕ ಮಾರುಕಟ್ಟೆಯ ಪರಿಸ್ಥಿತಿಗಳು ದುರ್ಬಲಗೊಳ್ಳುತ್ತಿರುವುದನ್ನು ಸೂಚಿಸುತ್ತದೆ. ಕಾರ್ಮಿಕ ಶಕ್ತಿ ಭಾಗವಹಿಸುವಿಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದರೂ, ಉದ್ಯೋಗಾವಕಾಶಗಳು ಇನ್ನಷ್ಟು ವೇಗವಾಗಿ ಕುಸಿದಿವೆ.

ಇದರ ಪರಿಣಾಮವಾಗಿ ಕಾರ್ಮಿಕ ಶಕ್ತಿಯೊಳಗಿನ ನಿರುದ್ಯೋಗಿಗಳ ಪ್ರಮಾಣ ಹೆಚ್ಚಾಗಿದೆ. ಮೇ 2026ರಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ಕಂಡುಬಂದ ಋತುಮಾನಿಕ ನಿಧಾನಗತಿಯು ಕಾರ್ಮಿಕ ಮಾರುಕಟ್ಟೆ ಸೂಚ್ಯಂಕಗಳ ಕುಸಿತಕ್ಕೆ ಕಾರಣವಾಗಿರಬಹುದು.

ಈ ಅಂಕಿಅಂಶಗಳು ಭಾರತದಲ್ಲಿ ಉದ್ಯೋಗ ಸೃಷ್ಟಿಯ ವೇಗ ಕುಂಠಿತವಾಗುತ್ತಿರುವುದು ಹಾಗೂ ಕಾರ್ಮಿಕ ಮಾರುಕಟ್ಟೆಯ ಮೇಲೆ ಆರ್ಥಿಕ ಮತ್ತು ಋತುಮಾನಿಕ ಒತ್ತಡಗಳು ಹೆಚ್ಚುತ್ತಿರುವುದನ್ನು ಸೂಚಿಸುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com