ಚಿತ್ರ: ಅಗಸಿ ಪಾರ್ಲರ್, ಭಾಷೆ: ಕನ್ನಡ, ನಿರ್ದೇಶಕ: ಮಹಂತೇಶ್ ರಾಮ್‌ದುರ್ಗಾ, ಚಿತ್ರ ಕಥೆ: ಬಡ ಕ್ಷೌರಿಕ, ತನ್ನ ಮಗಳ ಮದುವೆಗಾಗಿ ಸಾಲ ಮಾಡಿ, ಅದರಿಂದ ಎದುರಿಸುವ ತೊಂದರೆಗಳನ್ನು ಚಿತ್ರ ತಿಳಿಸುತ್ತದೆ.
ಚಿತ್ರ: ಅಂಟು ದಿ ಡಸ್ಕ್, ಭಾಷೆ: ಮಲಯಾಳ, ನಿರ್ದೇಶಕ: ಸಾಜಿನ್ ಬಾಬು, ಚಿತ್ರ ಕಥೆ: ಸೆಂಟ್ ಫ್ರಾನ್ಸಿಸ್‌ನ ಮಾರ್ಗದಲ್ಲಿ ಸಾಗಲು ಹೆತ್ತವರ ಮತ್ತು ಸಂಬಂಧಿಕರ ಒತ್ತಡಕ್ಕೆ ಒಳಪಟ್ಟು, ನರಳಾಡುವ ಯುವಕನ ಕುರಿತ ಚಿತ್ರ
ಚಿತ್ರ: ಜ್ಞಾನ್, ಭಾಷೆ: ಮಲಯಾಳ , ನಿರ್ದೇಶಕ: ರಂಜಿತ್, ಚಿತ್ರ ಕಥೆ: ಕೆ.ಟಿ.ಎನ್.ಜೀವಿತಂ ಅವರ ಕಾದಂಬರಿಯನ್ನು ಆಧರಿಸಿದ, ಭಾರತ ಸ್ವಾತಂತ್ರ್ಯ ಹೋರಾಟದ ಚಿತ್ರ
ಚಿತ್ರ: ಅಲೀಫ್, ಭಾಷೆ: ಮಳಯಾಳ, ನಿರ್ದೇಶಕ: ಎನ್.ಕೆ. ಮೊಹಮ್ಮದ್ ಕೋಯ, ಚಿತ್ರ ಕಥೆ: ಅಲೀಫ್ ಎನ್ನುವುದು ಅರೆಬಿಕ್ ವರ್ಣಮಾಲೆಯ ಮೊದಲ ಅಕ್ಷರ. ಇದನ್ನು ಚಿತ್ರದ ಪ್ರಧಾನ ಪಾತ್ರವಾದ ಫಾತಿಮಾಳಿಗೆ ಸಮೀಕರಿಸಿ ಅವಳ ಬುದ್ಧಿವಂತಿಕೆ, ಸ್ತ್ರೀವಾದಿ ಹೋರಟಗಳನ್ನು ಬಿಂಬಿಸುವ ಚಿತ್ರ
ಚಿತ್ರ: ಕುಟ್ರಮ್ ಕಡಿತಲ್, ಭಾಷೆ: ತಮಿಳು, ನಿರ್ದೇಶಕ: ಬ್ರಮ್ಮ.ಜಿ, ಚಿತ್ರ ಕಥೆ: 24 ಗಂಟೆಗಳಲ್ಲಿ ನಡೆದ ಈ ಘಟನೆ ಹಲವರ ಬದುಕನ್ನು ಶಾಶ್ವತವಾಗಿ ಬದಲಾಯಿಸುತ್ತದೆ. ಈ ಅಪರಾಧಕ್ಕೆ ಎಂತಹ ಶಿಕ್ಷೆ ದೊರೆಯುತ್ತದೆ ಎಂಬುದರ ಕುರಿತ ಕಾಲ್ಪನಿಕ ಚಿತ್ರ.
ಚಿತ್ರ: ಪನ್ನೈಯಾರುಂ ಪದ್ಮಿನಿಯುಂ, ಭಾಷೆ: ತಮಿಳು, ನಿರ್ದೇಶಕ: ಎಸ್.ಯು.ಅರುಣ್‌ಕುಮಾರ್, ಚಿತ್ರ ಕಥೆ: ಸ್ವಂತ ಕಾರನ್ನು ಹೊಂದಲು ಭೂಮಾಲೀಕನನ್ನು ಹೇಗೆ ಓಲೈಸುತ್ತದೆ ಎನ್ನುವುದನ್ನು ಚಿತ್ರ ಪ್ರತಿಮಾತ್ಮಕವಾಗಿ ಹೇಳಿದೆ.
ಚಿತ್ರ: ಅದೋಮ್ಯ, ಭಾಷೆ: ಅಸ್ಸಾಮಿ, ನಿರ್ದೇಶಕ: ಬಾಬಿ ಸರ್ಮಾ ಬರ್ಹು, ಚಿತ್ರ ಕಥೆ: ಏಡ್ಸ್‌ನಿಂದ ಸಾವನ್ನಪ್ಪಿದ ಪತಿಯನ್ನು ಕಳೆದುಕೊಂಡ ಪತ್ನಿ ಸಮಾಜದಿಂದ ಹೇಗೆ ಬಹಿಷ್ಕಾರಕ್ಕೆ ಒಳಗಾಗಿ ತೊಂದರೆಗಳನ್ನು ಅನುಭವಿಸುತ್ತಾಳೆ ಎಂಬುದರ ಕುರಿತ ಚಿತ್ರ.
ಚಿತ್ರ: ಏಕ್ ಫಾಲಿ ರೋದ್, ಭಾಷೆ: ಬಂಗಾಳಿ, ನಿರ್ದೇಶಕ: ಅತನು ಘೋಶ್, ಚಿತ್ರ ಕಥೆ: ವಿಜ್ಞಾನಿಯೊಬ್ಬ ಸಮಾಜದ ಮಾನವೀಯ ಸ್ವಭಾವನ್ನು ಅಧ್ಯಯನ ಮಾಡಲು ಹುಸಿ ಕಾಳಗ ಸೃಷ್ಟಿಸಿ, ಅದರಿಂದಾದ ದುಷ್ಪರಿಣಾಮಗಳ ಕುರಿತ ಚಿತ್ರ.
ಚಿತ್ರ: ಯೆಲ್ಲೋ, ಭಾಷೆ : ಮರಾಠಿ, ನಿರ್ದೇಶಕ: ಮಹೇಶ್ ಲಿಮಯೆ, ಚಿತ್ರ ಕಥೆ: ಡೌನ್‌ಸಿಂಡ್ರೋಮ್ ಕಾಯಿಲೆಗೆ ತುತ್ತಾದ ಬಾಲಕಿಯ ಚಿತ್ರ. ಕಾಯಿಲೆಯ ವಿಚಾರಗಳನ್ನು ಗಂಭೀರವಾಗಿ ಚರ್ಚಿಸುವ ಚಿತ್ರ.
ಚಿತ್ರ: ಮುನ್ನಾರಿಯಿಪ್ಪು, ಭಾಷೆ: ಮಲಯಾಳ, ನಿರ್ದೇಶಕ: ವೇಣು, ಚಿತ್ರ ಕಥೆ: ಕೊಲೆ ಆರೋಪದ ಮೇಲೆ ಜೈಲು ವಾಸ ಅನುಭವಿಸುತ್ತಿರುವ, ನಿರಪರಾಧಿಯ ಕುರಿತು ಪುಸ್ತಕ ಬರೆದು ಬಿಡುಗಡೆಗೊಳಿಸಲು ಪರದಾಡುವ ಪರ್ತಕರ್ತೆಯ ಕುರಿತು ಚಿತ್ರ.