ಅ.15ರಿಂದ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಪುನಾರಂಭ: ಮಾಸ್ಕ್'ನಿಂದ ಸ್ನ್ಯಾಕ್ಸ್ ವರೆಗೆ ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ

ಸಿನಿಮಾ, ಥಿಯೇಟರ್, ಮಲ್ಟಿಪ್ಲೆಕ್ಸ್'ಗಳು ಅ.15ರಿಂದ ಪುನರಾರಂಭಗೊಳ್ಳಲಿದ್ದು, ಪ್ರೇಕ್ಷಕರು ತಿಳಿಯಲೇಬೇಕಾದ ಮಾಹಿತಿಗಳು ಇಲ್ಲಿವೆ.
ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ ಗಳಿಗೆ ಬರುವ ಪ್ರೇಕ್ಷಕರು ಸಿನಿಮಾ ವೀಕ್ಷಿಸುವಷ್ಟೂ ಹೊತ್ತು ಮಾಸ್ಕ್‌ ಧರಿಸಿರುವುದು ಕಡ್ಡಾಯವಾಗಿದೆ.

Updated on
ಚಿತ್ರಮಂದಿರಗಳ ಸಾಮರ್ಥ್ಯದ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರವಾಗಿದೆ. ಒಂದು ಸಲಕ್ಕೆ ಒಂದೇ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಬೇಕು. ಒಂದು ಆಸನ ಬಿಟ್ಟು ಒಂದು ಆಸನದಲ್ಲಿ ಪ್ರೇಕ್ಷಕರನ್ನು ಕುಳ್ಳಿರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಚಿತ್ರಮಂದಿರದೊಳಗೆ ಜನರು ಎಲ್ಲಾ ಸಮಯದಲ್ಲೂ ಕನಿಷ್ಠ ಆರು ಅಡಿ ಸಾಮಾಜಿಕ

ಪ್ರತಿ ಪ್ರದರ್ಶನದ ನಂತರವೂ ಆಡಿಟೋರಿಯಂಗಳನ್ನು ಸ್ಯಾನಿಟೈಸ್‌ ಮಾಡಬೇಕು. ಪ್ರೇಕ್ಷಕರು ಆರೋಗ್ಯ ಸೇತು ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡಿರಬೇಕು. ಚಿತ್ರಮಂದಿರದ ಎಲ್ಲಾ ಪ್ರವೇಶ ದ್ವಾರಗಳಲ್ಲೂ ಹ್ಯಾಂಡ್‌ ಸ್ಯಾನಿಟೈಸರ್‌ ಇರಿಸಿರಬೇಕು. ಕ್ಯೂದಲ್ಲಿ ಜನರು ನಿಲ್ಲಲು ದೂರ-ದೂರ ಬಾಕ್ಸ್‌ ಗುರುತು ಮಾಡಿರಬೇಕು.

ಚಿತ್ರಮಂದಿರದ ಪ್ರವೇಶ ದ್ವಾರದಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯ. ಕೊರೋನಾ ಲಕ್ಷಣಗಳಿಲ್ಲದವರನ್ನು ಮಾತ್ರ ಒಳಗೆ ಬಿಡಬೇಕು.

ಸಾಧ್ಯವಾದಷ್ಟುಆನ್‌ಲೈನ್‌ ಟಿಕೆಟ್‌ ಬುಕಿಂಗ್‌ಗೆ ಪ್ರೋತ್ಸಾಹ ನೀಡಬೇಕು. ಆದರೂ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಟಿಕೆಟ್‌ ಮಾರಲು ಬಾಕ್ಸ್‌ ಆಫೀಸ್‌ಗಳು ತೆರೆಯಬಹುದು.

ಆಡಿಟೋರಿಯಂ ಒಳಗೆ ಆಹಾರ ತಿನಿಸುಗಳನ್ನು ಮಾರಾಟ ಅಥವಾ ಪೂರೈಕೆ ಮಾಡುವಂತಿಲ್ಲ. ಫುಡ್‌ ಕೌಂಟರ್‌ಗಳಲ್ಲಿ ಪೊಟ್ಟಣದ ಆಹಾರಗಳನ್ನು ಮಾತ್ರ ಮಾರಾಟ ಮಾಡಬೇಕು.

ಒಳಗೆ ಜನರು ಹೋಗುವಾಗ ಒಂದೊಂದೇ ಸಾಲಿನ ಪ್ರೇಕ್ಷಕರನ್ನು ಒಳಗೆ ಬಿಡಬೇಕು. ಮಲ್ಟಿಪ್ಲೆಕ್ಸ್‌ಗಳಲ್ಲಿ ಬೇರೆ ಬೇರೆ ಸ್ಕ್ರೀನ್‌ಗಳ ಪ್ರೇಕ್ಷಕರು ಒಂದೇ ಸಲ ಒಳಗೆ ಅಥವಾ ಹೊರಗೆ ಹೋಗದಂತೆ ಹಾಗೂ ಇಂಟರ್‌ವಲ್‌ನಲ್ಲಿ ಸಂಧಿಸದಂತೆ ನೋಡಿಕೊಳ್ಳಬೇಕು. ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಶೌಚಕ್ಕೆ ಹೋಗಿ-ಬರಲು ಇಂಟರ್‌ವಲ್‌ಗೆ

ಆಡಿಟೋರಿಯಂ ಒಳಗೆ ಎ.ಸಿ.ಯನ್ನು 24-30 ಡಿಗ್ರಿ ಸೆಲ್ಷಿಯಸ್‌ಗಿಂತ ಮೇಲೆ ಸೆಟ್‌ ಮಾಡಿರಬೇಕು.

ಸಿನಿಮಾ ಆರಂಭಕ್ಕೂ ಮುನ್ನ, ವಿರಾಮ ಹಾಗೂ ಸಿನಿಮಾ ಪೂರ್ಣಗೊಂಡ ಬಳಿಕ ಕೊರೋನಾ ಕುರಿತು ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡಬೇಕು.

ಚಿತ್ರಮಂದಿರದ ಆವರಣ, ಸುತ್ತಮುತ್ತಲಿನ ಯಾವುದೇ ಪ್ರದೇಶದಲ್ಲೂ ಜನರು ಉಗುಳಬಾರದು.

ಚಿತ್ರಮಂದಿರಕ್ಕೆ ಬರುವ ಪ್ರತೀಯೊಬ್ಬರ ಮೊಬೈಲ್ ಸಂಖ್ಯೆಯನ್ನು ದಾಖಲು ಮಾಡಿಕೊಳ್ಳಬೇಕು.

ಕಂಟೈನ್ಮೆಂಟ್ ಝೋನ್ ಗಳಲ್ಲಿನ ಚಿತ್ರಮಂದಿರಗಳಲ್ಲಿ ಚಿತ್ರಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com