ಮಂಡ್ಯದ ಮದ್ದೂರು ತಾಲ್ಲೂಕಿನ ಡಿಎಕೆರೆ ಗ್ರಾಮದಲ್ಲಿ ನೂತನ ದೇವಾಲಯದ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅಂಬರೀಷ್ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಾವು ಮಂಡ್ಯಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಎಂದು ಹೇಳಿದರು. ಈ ವೇಳೆ ಕಾಂಗ್ರೆಸ್ ಪಕ್ಷದಿಂದ ನಟಿ ರಮ್ಯಾ ಅವರಿಗೆ ಟಿಕೆಟ್ ನೀಡುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಂಬರೀಷ್, ಪಕ್ಷದಿಂದ ರಮ್ಯಾ ಆಗಲಿ ಅಥವಾ ಮಾಜಿ ಶಾಸಕ ಮಹೇಶ್ ಚಂದ್ ಅವರಿಗಾಗಲಿ ಯಾರಿಗೇ ಟಿಕೆಟ್ ನೀಡಿದರು ಪಕ್ಷದ ವತಿಯಿಂದ ನಾನು ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.