ನೀರಿನ ಮೂಲ ಎರಡರಲ್ಲೂ ಒಂದೇ!

Updated on: 

ಭೂಮಿ ಮತ್ತು ಚಂದ್ರನ ನೀರಿನ ಮೂಲ ಒಂದೇ ಅಂತೆ. ಹೀಗಂತ ಹೊಸ ಸಂಶೋಧನೆ ಹೇಳಿದೆ. ಚಂದ್ರನಲ್ಲಿ ನೀರಿದೆಯೇ ಎಂಬ ಬಗ್ಗೆ ಸಂಶೋಧನೆ ನಡೆಸುತ್ತಿರುವ ವಿಜ್ಞಾನಿಗಳ ತಂಡ, ಚಂದ್ರನಲ್ಲೂ ಅಂತರ್ಜಲವಿರಬಹುದು ಎಂದು ಹೇಳಿದ್ದಾರೆ. ಭೂಮಿಯಲ್ಲಿ ಬಹುಪಾಲು ನೀರು ನೆಲದಾಳದಲ್ಲೇ ಸಿಗುತ್ತದೆ. ಅದೇ ರೀತಿ ಚಂದ್ರನಲ್ಲೂ ಒಡಲೊಳಗೆ ನೀರಿರಬಹುದು ಎಂದಿದ್ದಾರೆ.
ಇದುವರೆಗೆ ವಿಜ್ಞಾನಿಗಳ ನಂಬಿಕೆಯ ಪ್ರಕಾರ ಚಂದ್ರನಲ್ಲಿ ನೀರು ಇಲ್ಲ ಎಂದೇ ತಿಳಿಯಲಾಗಿತ್ತು. ಆದರೆ ಚಂದ್ರನ ಅಂತರಾಳವನ್ನು ಅಭ್ಯಸಿಸಿದಾಗ, ಭೂಮಿಯ ಕೆಲ ಹೋಲಿಕೆಗಳು ಕಂಡುಬಂದವು ಎಂದು ಹೇಳಿದ್ದಾರೆ. ಅಲ್ಲದೆ ನಮ್ಮ ಇಸ್ರೋ ಕೂಡ ಚಂದ್ರನ ಮೇಲ್ಮೈನಲ್ಲಿ ನೀರಿನ ಅಂಶವಿರುವುದು ಪತ್ತೆ ಮಾಡಿತ್ತು. ಇದನ್ನು ಗಣನೆಗೆ ತೆಗೆದುಕೊಂಡಿರುವ ವಿಜ್ಞಾನಿಗಳು, ಚಂದ್ರನ ಅಂತರಾಳದ ಬಗ್ಗೆ ಸಂಶೋಧನೆ ನಡೆಸಿ ಅಲ್ಲೂ ನೀರಿರಬಹುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com