ನಾಯಿಗಳ ಮೂಲ ವಿಕಸನವಾಗಿದ್ದು ನೇಪಾಳ ಮತ್ತು ಮಂಗೋಲಿಯಾದಲ್ಲಿ: ಸಂಶೋಧನೆ

೩೮ ದೇಶಗಳ ಸುಮಾರು ೫೪೯ ನಾಯಿಗಳ ಡಿ ಎನ್ ಎ ಅಧ್ಯಯನ ಮಾಡಿರುವ ಸಂಶೋಧಕರ ತಂಡ, ನಾಯಿಗಳು ಮೊದಲು ಹುಟ್ಟಿದ್ದು ಏಶಿಯಾದ ದೇಶಗಳಾದ ನೇಪಾಳ ಮತ್ತು ಮಂಗೋಲಿಯಾದಲ್ಲಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಲಂಡನ್: ೩೮ ದೇಶಗಳ ಸುಮಾರು ೫೪೯ ನಾಯಿಗಳ ಡಿ ಎನ್ ಎ ಅಧ್ಯಯನ ಮಾಡಿರುವ ಸಂಶೋಧಕರ ತಂಡ, ನಾಯಿಗಳು ಮೊದಲು ಹುಟ್ಟಿದ್ದು ಏಶಿಯಾದ ದೇಶಗಳಾದ ನೇಪಾಳ ಮತ್ತು ಮಂಗೋಲಿಯಾದಲ್ಲಿ ಎಂದು ತಿಳಿಸಿದೆ ಎಂದು ಮಾಧ್ಯಮವೊಂದು ಮಂಗಳವಾರ ವರದಿ ಮಾಡಿದೆ.

ಈ ಹಿಂದಿನ ಅಧ್ಯಯನಗಳ ಪ್ರಕಾರ ಮಾನವನ ನೆಚ್ಚಿನ ಗೆಳೆಯನಾದ ನಾಯಿ ಮೊದಲು ವಿಕಸಗೊಂಡಿದ್ದು ಚೈನಾ, ಮಧ್ಯ ಪ್ರಾಚ್ಯ ದೇಶಗಳು, ಸೈಬೀರಿಯಾ ಮತ್ತು ಯೂರೋಪ್ ನಲ್ಲಿ ೧೫೦೦೦ ವರ್ಷಗಳ ಹಿಂದೆ ಎಂದು ತಿಳಿಯಲಾಗಿತ್ತು.

ನ್ಯೂಯಾರ್ಕ್ ನ ಕಾರ್ನೆಲ್ ವಿಶ್ವವಿದ್ಯಾಲಯದ ಆಡಮ್ ಬೋಯ್ಕೋ ಅವರ ಮುಂದಾಳತ್ವದಲ್ಲಿ ನಡೆದಿರುವ ಈ ಸಂಶೋಧನೆ "ಪ್ರೊಸೀಡಿಂಗ್ಸ್ ಆಫ್ ದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್" ಎಂಬ ಜರ್ನಲ್ ನಲ್ಲಿ ಪ್ರಕಟವಾಗಿದೆ.

ಆಫ್ರಿಕಾ, ಅಮೇರಿಕಾ, ಏಶಿಯಾ, ಭಾರತ, ಮಧ್ಯ ಪ್ರಾಚ್ಯ ದೇಶಗಳು, ಆಸ್ಟ್ರೇಲಿಯಾ ಮತ್ತು ಉತ್ತರದ ದ್ವೀಪಗಳನ್ನು ಒಳಗೋಂದಂತೆ ೩೮ ರಾಷ್ಟ್ರಗಳ ೫೪೯ ನಾಯಿಗಳ ಡಿ ಏನ್ ಎ ಯನ್ನು ಈ ತಂಡ ಸಂಶೋಧನೆಗೆ ಬಳಸಿಕೊಂಡಿದೆ.

ಈ ಪ್ರಾಣಿಗಳು ಹಿಂದೆ ಸಾಕು ಪ್ರಾಣಿಗಳಾಗಿರಲ್ಲಿ ಬದಲಿಗೆ ಬೀದಿಗಳಲ್ಲಿ ತಿರುಗಾಡುತ್ತಿದ್ದವು ಎಂದು ಅಧ್ಯಯನ ತಿಳಿಸಿದೆ. ಆದರೆ ಮೊದಲ ಬಾರಿಗೆ ನಾಯಿಗಳು ವಿಕಸನಗೊಂಡ ಸಮಯವನ್ನು ಈ ಸಂಶೋಧನೆ ತಿಳಿಸಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com