ವಿಜ್ಞಾನ-ತಂತ್ರಜ್ಞಾನ

ಚೀನಾದ ಈ ಬಸ್ ಕೆಳಗೆ ಕಾರುಗಳು ಆರಾಮವಾಗಿ ಓಡಾಡಬಹುದು!

ತಂತ್ರಜ್ಞಾನದ ಕ್ಷೇತ್ರದಲ್ಲಿ ನಿರಂತರವಾಗಿ ಹೊಸತನ್ನು ಕಂಡು ಹಿಡಿಯುವುದಕ್ಕೆ ಪ್ರಸಿದ್ಧವಾಗಿರುವ ಚೀನಾ, ಈಗ ಸಾರಿಗೆ ಕ್ಷೇತ್ರದಲ್ಲಿ ವಿಶ್ವದಲ್ಲೇ ವಿನೂತನವಾದುದ್ದನ್ನು ಕಂಡುಹಿಡಿದೆ.

ಚೀನಾದ ಈ ಬಸ್ ಕೆಳಗೆ ಕಾರುಗಳು ಆರಾಮವಾಗಿ ಓಡಾಡಬಹುದು!
ಸ್ಟ್ರಾಡೆಲ್ ಬಸ್
Published On :

ಬೀಜಿಂಗ್: ತಂತ್ರಜ್ಞಾನದ ಕ್ಷೇತ್ರದಲ್ಲಿ ನಿರಂತರವಾಗಿ ಹೊಸತನ್ನು ಕಂಡು ಹಿಡಿಯುವುದಕ್ಕೆ ಪ್ರಸಿದ್ಧವಾಗಿರುವ ಚೀನಾ, ಈಗ ಸಾರಿಗೆ ಕ್ಷೇತ್ರದಲ್ಲಿ ವಿಶ್ವದಲ್ಲೇ ವಿನೂತನವಾದುದ್ದನ್ನು ಕಂಡುಹಿಡಿದೆ.
ಚೀನಾ ಕಂಡು ಹಿಡಿದಿರುವ ಬೃಹತ್ ಗಾತ್ರದ ಸ್ಟ್ರಾಡೆಲ್ ಬಸ್ ರೈಲಿನ ಮಾದರಿಯಲ್ಲಿ ಟ್ರ್ಯಾಕ್ ಮೇಲೆ ಸಂಚರಿಸಲಿದ್ದು 1,400 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಗಂಟೆಗೆ ಸುಮಾರು 60 ಕಿಮಿ ವೇಗದಲ್ಲಿ  ಸಂಚರಿಸುವ ಈ ವಾಹನದ ಕೆಳಗೆ ಕಾರ್, ದ್ವಿಚಕ್ರ ವಾಹನಗಳೂ ಸಂಚರಿಸಬಹುದಾಗಿರುವುದು ಸ್ಟ್ರಾಡೆಲ್ ಬಸ್ ನ ಮತ್ತೊಂದು ವಿಶೇಷತೆಯಾಗಿದೆ.
ಸ್ಟ್ರಾಡೆಲ್ ಬಸ್ ನ್ನು ಚೀನಾ ಈಗಾಗಲೇ ಉತ್ತರ ಚೀನಾದಲ್ಲಿ ಪರೀಕ್ಷಾರ್ಥವಾಗಿ ಚಾಲನೆ ಮಾಡಿದ್ದು, ವಿದ್ಯುತ್ ಚಾಲಿತ ಬಸ್ ಆಗಿರುವ ಸ್ಟ್ರಾಡೆಲ್ ಬಸ್ 22 ಮೀಟರ್ ಉದ್ದವಿದ್ದು 7.8 ಮೀಟರ್ ಅಗಲವಿದ್ದು ಇದನ್ನು ಲ್ಯಾಂಡ್ ಏರ್ ಬಸ್ ಅಂತಲೂ ಕರೆಯಲಾಗುತ್ತದೆ.
ಸ್ಟ್ರಾಡೆಲ್ ಬಸ್ ಬೀಜಿಂಗ್ ನ ಎಕ್ಸ್ ಪ್ಲೋರ್ ಬಸ್ ಎಂಬ ಸಂಸ್ಥೆಯ ಕಲ್ಪನೆಯಾಗಿದ್ದು 2 ಮೀಟರ್ ಗಳಷ್ಟು ಎತ್ತರವಿರುವ ಕಾರುಗಳು ಸುಲಭವಾಗಿ ಸ್ಟ್ರಾಡೆಲ್ ಬಸ್ ನ ಕೆಳಗೆ ಸಂಚರಿಸಬಹುದಾಗಿದ್ದು ರಸ್ತೆಯ ಜಾಗವನ್ನು ಉಳಿಸಬಹುದಾಗಿದೆ ಎಂದು ಬಸ್ ನ ವಿನ್ಯಾಸಗೊಳಿಸಿರುವ ಮುಖ್ಯ ಇಂಜಿನಿಯರ್ ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.