ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಸ್ಯಾಮ್ಸಂಗ್ A9 ಸರಣಿಯ ಮೊಬೈಲ್ ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.
ನ.20 ರಿಂದ A9 ಸರಣಿಯ ಫೋನ್ ಗಳಿಗೆ ಈಗಾಗಲೇ ಮುಂಗಡ ಬುಕ್ಕಿಂಗ್ ಪ್ರಾರಂಭವಾಗಿದ್ದು, 6 ಜಿಬಿ ರ್ಯಾಮ್, 128 ಜಿಬಿ ಸ್ಟೋರೇಜ್ ಹೊಂದಿರುವ ಸ್ಮಾರ್ಟ್ ಫೋನ್ ಗೆ 36,990 ರೂಪಾಯಿ ನಿಗದಿಪಡಿಸಲಾಗಿದ್ದರೆ 8 ಜಿಬಿ ರ್ಯಾಮ್ 128 ಜಿಬಿ ಸ್ಟೋರೇಜ್ ಹೊಂದಿರುವ ಮೊಬೈಲ್ ಬೆಲೆ 39,990 ರೂಪಾಯಿಯಾಗಿದೆ.
ಕ್ವಾಡ್ರುಪಲ್ ಪ್ರೈಮರಿ (ಹಿಂದಿನ) ಕ್ಯಾಮರಾ ವ್ಯವಸ್ಥೆ ಹೊಂದಿರುವುದು ಈ ಮೊಬೈಲ್ ನ ವಿಶೇಷತೆಯಾಗಿದ್ದು ನ.28 ರಿಂದ ಎಲ್ಲಾ ಶೋರೂಮ್ ಗಳಲ್ಲಿ ಲಭ್ಯವಿರಲಿದೆ. ಆನ್ ಲೈನ್ ನಿಂದ ಖರೀದಿಸುವ ಗ್ರಾಹಕರು ಅಮೇಜಾನ್ ಇಂಡಿಯಾ, ಪೇಟಿಎಂ ಮಾಲ್, ಫ್ಲಿಪ್ ಕಾರ್ಟ್ ನಿಂದ ನಲ್ಲಿ ಮೊಬೈಲ್ ನ್ನು ಬುಕ್ ಮಾಡಬಹುದಾಗಿದೆ.
4 ವರ್ಟಿಕಲ್ ಕ್ಯಾಮರಗಳಿದ್ದು, 8 ಎಂಪಿ ಅಲ್ಟ್ರಾ ವೈಡ್ ಸೆನ್ಸಾರ್, 24 ಎಂಪಿ ಮುಖ್ಯ ಸೆನ್ಸಾರ್ 5 ಎಂಪಿ ಡೆಪ್ತ್ ಸೆನ್ಸಾರ್ ಹಾಗೂ 10 ಎಂಪಿ ಟೆಲಿಫೋಟೊ ಸೆನ್ಸಾರ್ ಗಳನ್ನು ಹೊಂದಿರುವುದು ಈ ಮೊಬೈಲ್ ನ ಮತ್ತೊಂದು ವಿಶೇಷತೆಯಾಗಿದ್ದು, ಮುಂಭಾಗದಲ್ಲಿ 24 ಎಂಪಿ ಕ್ಯಾಮರಾ ಹೊಂದಿದೆ.