ಟೆಸ್ಟ್ : ಟೀಂ ಇಂಡಿಯಾಗೆ ವಿರಾಟ್ ನಾಯಕತ್ವ

ಮಂಗಳವಾರ ಅಡಿಲೇಡ್ ನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರಥಮ ಟೆಸ್ಟ್ ಪಂದ್ಯದಲ್ಲಿ ವಿರಾಟ್ ...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on: 

ಅಡಿಲೇಡ್: ಮಂಗಳವಾರ ಅಡಿಲೇಡ್ ನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರಥಮ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ.

ಹೆಬ್ಬೆರಳಿಗೆ ಗಾಯವಾಗಿರುವ ಕಾರಣ ಮಹೇಂದ್ರ ಸಿಂಗ್ ಧೋನಿಗೆ ವಿಶ್ರಾಂತಿ ನೀಡಲಾಗಿದೆ.

ಆದಾಗ್ಯೂ, ಫಿಲಿಪ್ ಹ್ಯೂಸ್ ನಿಧನದ ಹಿನ್ನೆಲೆಯಲ್ಲಿ ಅಡಿಲೇಡ್ ಟೆಸ್ಟ್ ಮುಂದೂಡಲ್ಪಟ್ಟಿತ್ತು.

ಸೋಮವಾರ ಅಡಿಲೇಡ್‌ನ ಓವಲ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೊಹ್ಲಿ,  ನಾನು ನಾಳೆ ಟೆಸ್ಟ್ ಪಂದ್ಯದ ನಾಯಕತ್ವವನ್ನು ವಹಿಸಲಿದ್ದೇನೆ ಎಂದಿದ್ದಾರೆ. ಅದೇ ವೇಳೆ ಮುಂದಿನ ಕೆಲವೇ ದಿನಗಳಲ್ಲಿ ಧೋನಿ 100 ಶೇ. ಗುಣಮುಖವಾಗಿ ಬರಲಿದ್ದಾರೆ ಎಂಬ ನಿರೀಕ್ಷೆ ನಮಗಿದೆ.
ಟೆಸ್ಟ್ ಕ್ರಿಕೆಟ್ ಆಡುವುದು ನನ್ನ ಕನಸಾಗಿತ್ತು, ಈಗ ನನಗೆ ಭಾರತದ ನಾಯಕತ್ವ ವಹಿಸುವ ಅವಕಾಶ ಸಿಕ್ಕಿದೆ. ನನಗೆ ಅತೀವ ಸಂತಸ ಕೊಡುವ ಕ್ಷಣಗಳಿವು ಎಂದು ಕೊಹ್ಲಿ ಹೇಳಿದ್ದಾರೆ.

ಭಾನುವಾರ ತರಬೇತಿ ನಡೆಸುತ್ತಿದ್ದ ವೇಳೆ ಪೇಸ್ ಬೌಲರ್ ಭುವನೇಶ್ವರ್ ಕುಮಾರ್ ಅವರ ಮೊಣಕಾಲಿಗೆ ಗಾಯವಾಗಿತ್ತು. ಮಂಗಳವಾರದ ವರೆಗೆ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಫಿಟ್ ಎಂದೆನಿಸಿದರೆ ಮಂಗಳವಾರದ ಟೆಸ್ಟ್‌ನಲ್ಲಿ ಭಾಗವಹಿಸುತ್ತಾರೆ ಎಂದಿದ್ದಾರೆ ಕೊಹ್ಲಿ.

ಅಡಿಲೇಡ್ ಪಂದ್ಯದ ನಂತರ ಬ್ರಿಸ್ಬೇನ್, ಮೆಲ್ಬರ್ನ್ ಮತ್ತು ಸಿಡ್ನಿಯಲ್ಲಿ ಪಂದ್ಯ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com