

ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಭರ್ಜರಿ ಜಯ ಗಳಿಸಿದೆ.
ಅಡಿಲೇಡ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಮಹಿಳಾ ತಂಡ ನಿಗದಿತ ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 140 ರನ್ ಪೇರಿಸಿತು. 141 ರನ್ ಗಳ ಬೆನ್ನಟ್ಟಿದ ಭಾರತ ಕೇವಲ 18.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿ ಭರ್ಜರಿ ಗೆಲುವು ದಾಖಲಿಸಿತು.
ಭಾರತ ಪರ ಮಿಥಲಿ ರಾಜ್ 4, ಸ್ಮೃತಿ ಮಂಧಾನಾ 29, ವೇದಾ ಕೃಷ್ಣಮೂರ್ತಿ 35, ಹರ್ಮನ್ ಪ್ರೀತ್ ಕೌರ್ 46, ಗೋಸ್ವಾಮಿ 5 ರನ್ ಗಳಿಸಿ ಔಟಾದರೆ ಅನುಕ ಪಾಟೀಲ್ ಅಜೇಯ 14 ಹಾಗೂ ಶಿಖಾ ಪಾಂಡೆ 4 ರನ್ ಗಳಿಸಿದ್ದಾರೆ.
ಆಸೀಸ್ ಪರ ಜೋನಾಸೆನ್ ಹಾಗೂ ಸ್ಕೂಟ್ ತಲಾ 2 ವಿಕೆಟ್ ಪಡೆದರೆ ಫರೇಲ್ 1 ವಿಕೆಟ್ ಪಡೆದಿದ್ದಾರೆ.
ಆಸ್ಟ್ರೇಲಿಯಾ ಪರ ಮೋನಿ 36, ಹ್ಯಾರೀಸ್ 0, ಲನ್ನಿಂಗ್ 12, ಫೇರ್ರಿ 19, ಜೋನಾಸೆನ್ 2 ರನ್ ಬಾರಿಸಿ ಔಟಾದರೆ ಬ್ಲಾಕ್ ವೆಲ್ ಅಜೇಯ 27 ಹಾಗೂ ಹೆಲಿ 41 ರನ್ ಗಳಿಸಿದ್ದರು.
ಭಾರತ ಪರ ಪೂನಂ ಯಾದವ್ 2, ಗೋಸ್ವಾಮಿ, ಪಾಂಡೆ, ಅನುಕ ಪಾಟೀಲ್ ತಲಾ 1 ವಿಕೆಟ್ ಪಡೆದಿದ್ದಾರೆ.