ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಗೆ ಕೊರೋನಾ, ಮೊಹಾಲಿ ಆಸ್ಪತ್ರೆಗೆ ದಾಖಲುಪ್ರಸಿದ್ಧ ಭಾರತೀಯ ಅಥ್ಲೀಟ್, ಓಟಗಾರ ಮಿಲ್ಖಾ ಸಿಂಗ್ ಅವರಿಗೆ ಕೊರೋನಾ ದೃಢವಾಗಿದೆ. ಅವರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಮಗ ಮತ್ತು ಪ್ರಸಿದ್ದ ಗಾಲ್ಫ್ ಆಟಗಾರ ಜೀವ್ ಮಿಲ್ಖಾ ಸಿಂಗ್ ಈ ಬಗ್ಗೆ ಖಚಿತಪಡಿಸಿದ್ದಾರೆ.
ಕೊಲೆ ಪ್ರಕರಣ: ಸ್ಪೆಷಲ್ ಸೆಲ್ ಅಧಿಕಾರಿಗಳಿಂದ ರೆಸ್ಲರ್ ಸುಶೀಲ್ ಕುಮಾರ್ ಬಂಧನ; ದೆಹಲಿ ಪೊಲೀಸರುರೆಸ್ಲರ್ ಸಾಗರ್ ರಾಣಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪ ಎದುರಿಸುತ್ತಿರುವ ರೆಸ್ಲರ್ ಸುಶೀಲ್ ಕುಮಾರ್ ಅವರನ್ನು ಇನ್ನೂ ಬಂಧಿಸಿಲ್ಲ ಎಂದು ಹೇಳಿದ್ದ ದೆಹಲಿ ಪೊಲೀಸರು ಇಂದು ಅಧಿಕೃತವಾಗಿ ಬಂಧಿಸಿರುವುದಾಗಿ ಹೇಳಿದ್ದಾರೆ.
ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ಬಂಧನಕಿರಿಯ ಕುಸ್ತಿಪಟು ಸಾಗರ್ ರಾಣಾ ಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಒಲಿಂಪಿಯನ್ ಹಿರಿಯ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ತಂದೆ ಕೊರೋನಾಗೆ ಬಲಿಯಾದ ಕೆಲ ಗಂಟೆಗಳಲ್ಲೇ ಪುತ್ರಿ, ಶೂಟಿಂಗ್ ಕೋಚ್ ಮೊನಾಲಿ ಗೊರ್ಹೆ ಬ್ಲಾಕ್ ಫಂಗಸ್ ನಿಂದ ಸಾವುಭಾರತದ ಶೂಟಿಂಗ್ ಕೋಚ್ ಮತ್ತು ತಾಂತ್ರಿಕ ಅಧಿಕಾರಿ ಮೊನಾಲಿ ಗೊರ್ಹೆ(44) ಗುರುವಾರ ಬ್ಲಾಕ್ ಫಂಗಸ್ (ಮ್ಯೂಕೋರ್ಮೈಕೋಸಿಸ್) ನಿಂದ ನಿಧನರಾದರು. ಮೃತರು ಅವರ ತಾಯಿ ಮತ್ತು ಸಹೋದರಿಯರನ್ನು ಅಗಲಿದ್ದಾರೆ.
ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ23 ವರ್ಷದ ಮಾಜಿ ಕಿರಿಯ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ರಾಣಾ ಹತ್ಯೆಗೆ ಸಂಬಂಧಿಸಿ ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ಮಂಗಳವಾರ ವಜಾ ಮಾಡಿದೆ.
ಕುಸ್ತಿಪಟು ಕೊಲೆ ಪ್ರಕರಣ: ಸುಶೀಲ್ ಸುಳಿವು ನೀಡಿದವರಿಗೆ ದೆಹಲಿ ಪೊಲೀಸರಿಂದ 1 ಲಕ್ಷ ರೂ. ಬಹುಮಾನ ಘೋಷಣೆಕುಸ್ತಿಪಟು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಕುಸ್ತಿಪಟು ಸುಶೀಲ್ ಕುಮಾರ್ ಸುಳಿವು ನೀಡಿದವರಿಗೆ 1 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ದೆಹಲಿ ಪೊಲೀಸರು ಘೋಷಿಸಿದ್ದಾರೆ.
ಇಟಾಲಿಯನ್ ಓಪನ್ ಫೈನಲ್: ರೋಚಕ ಪಂದ್ಯದಲ್ಲಿ ಜೋಕೊವಿಚ್ ವಿರುದ್ಧ ನಡಾಲ್ ಗೆ ಗೆಲುವು!ಸ್ಟಾರ್ ಟೆನಿಸ್ ಆಟಗಾರರಾದ ಸರ್ಬಿಯಾದ ನೋವಾಕ್ ಜೋಕೊವಿಚ್ ಹಾಗೂ ರಫೇಲ್ ನಡಾಲ್ ಅವರು ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಫೈನಲ್ ಹಣಾಹಣಿಯಲ್ಲಿ ಸೆಣೆಸಿದ್ದು ನಡಾಲ್ ಸರ್ಬಿಯಾದ ವಿಶ್ವದ ನಂ .1 ಆಟಗಾರನನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಯುಎಸ್ಎ ಮೀಟ್: ತೇಜಶ್ವಿನ್ ಶಂಕರ್ ಗೆ ಚಿನ್ನಅಮೆರಿಕಾದ ಮ್ಯಾನ್ಹಟನ್ನಲ್ಲಿ ನಡೆದ ಬಿಗ್ 12 ಹೊರಾಂಗಣ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್ಶಿಪ್ನಲ್ಲಿ ಭಾರತದ ಹೈ ಜಂಪರ್ ತೇಜಶ್ವಿನ್ ಶಂಕರ್ ಚಿನ್ನದ ಪದಕ ಗೆದ್ದಿದ್ದಾರೆ.
ಹತ್ಯೆ ಪ್ರಕರಣ: ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ವಿರುದ್ಧ ಜಾಮೀನು ರಹಿತ ವಾರಂಟ್23 ವರ್ಷದ ಮಾಜಿ ಕಿರಿಯ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ರಾಣಾ ಅವರ ಹತ್ಯೆಗೆ ಸಂಬಂಧಿಸಿದಂತೆ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಮತ್ತು ಇತರ 9 ಜನರ ವಿರುದ್ಧ ದೆಹಲಿ ನ್ಯಾಯಾಲಯ ಶನಿವಾರ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
2020 ಒಲಿಂಪಿಕ್ಸ್ ರದ್ದತಿಗಾಗಿ ಟೋಕಿಯೊ ಗವರ್ನರ್ ಗೆ ಅರ್ಜಿ!ಟೋಕಿಯೊ ಒಲಿಂಪಿಕ್ಸ್ 2020 ರದ್ದತಿಗೆ ಸಂಬಂಧಿಸಿದಂತೆ ಮೂರು ಲಕ್ಷ 51 ಸಾವಿರ ಜನರ ಸಹಿಯುಳ್ಳ ಆನ್ ಲೈನ್ ಅರ್ಜಿಯನ್ನು ಟೋಕಿಯೊ ಗವರ್ನರ್ ಯೂರಿಕೊ ಕೊಯಿಕೆ ಅವರಿಗೆ ಸಲ್ಲಿಸಲಾಗಿದೆ. ಈ ಅರ್ಜಿಯನ್ನು ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಸಮಿತಿಗಳ ಮುಖ್ಯಸ್ಥರಿಗೂ ಕಳುಹಿಸಲಾಗಿದೆ.
ಇಟಾಲಿಯನ್ ಓಪನ್: ಸೆಮಿಸ್ ಗೆ ಕಾಲಿಟ್ಟ ನಡಾಲ್, ಕ್ವಾರ್ಟರ್ ಫೈನಲ್ ಗೆ ಜೋಕೊವಿಚ್!ವಿಶ್ವದ ಮಾಜಿ ನಂಬರ್ ಒನ್ ಆಟಗಾರ ರಫೇಲ್ ನಡಾಲ್ ಅವರು ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ನಲ್ಲಿ ಜಯ ಸಾಧಿಸಿದ್ದಾರೆ.
ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಗಿ ರಮೇಶ್ ಪೊವಾರ್ ನೇಮಕಟೀಮ್ ಇಂಡಿಯಾದ ಹಿರಿಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಭಾರತದ ಮಾಜಿ ಆಫ್ ಸ್ಪಿನ್ನರ್ ರಮೇಶ್ ಪೊವಾರ್ ಅವರನ್ನು ಮತ್ತೆ ನೇಮಕ ಮಾಡಲಾಗಿದೆ.
ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತದ ಜೊತೆ ನಿಲ್ಲುತ್ತೇನೆ: ಎಂಎಂಎ ಫೈಟರ್ ಕಾನರ್ ಮ್ಯಾಕ್ಗ್ರೆಗರ್ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತದ ಜೊತೆ ನಿಲ್ಲುವುದಾಗಿ ಐರಿಶ್ ಮಿಶ್ರ ಮಾರ್ಷಲ್ ಆರ್ಟ್ಸ್ (ಎಂಎಂಎ) ಫೈಟರ್ ಕಾನರ್ ಮ್ಯಾಕ್ಗ್ರೆಗರ್ ಹೇಳಿದ್ದಾರೆ.
ಅರ್ಜುನ ಪ್ರಶಸ್ತಿ ವಿಜೇತ ಟೇಬಲ್ ಟೆನ್ನಿಸ್ ತಾರೆ ವಿ.ಚಂದ್ರಶೇಖರ್ ಕೊರೋನಾ ಸೋಂಕಿನಿಂದ ನಿಧನಮೂರು ಬಾರಿ ರಾಷ್ಟ್ರೀಯ ಟೇಬಲ್ ಟೆನ್ನಿಸ್ ಚಾಂಪಿಯನ್, ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದ ವಿ.ಚಂದ್ರಶೇಖರ್ ಚೆನ್ನೈನಲ್ಲಿ ಕೊರೋನಾ ಸೋಂಕಿನಿಂದ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.
ಬೆಲ್ಗ್ರೇಡ್ ನಲ್ಲಿ ಅ.26 ರಿಂದ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ಸರ್ಬಿಯಾದ ಬೆಲ್ಗ್ರೇಡ್ ನಲ್ಲಿ ಬರುವ ಅಕ್ಟೋಬರ್ 26 ರಿಂದ ನವೆಂಬರ್ 6ರವರೆಗೆ 2021ರ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) ತಿಳಿಸಿದೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!