ಭೀಕರ ಅಪಘಾತದಲ್ಲಿ ಆರು ಬಾರಿ ಚಾಂಪಿಯನ್ ರೇಸರ್ ಮಾರ್ಕ್ವೆಜ್ ಬಲಗೈ ಮುರಿತಆರು ಬಾರಿಯ ಹಾಲಿ ಮೋಟೋ ಗ್ರ್ಯಾನ್ ಪ್ರಿ ಚಾಂಪಿಯನ್ ಮಾರ್ಕ್ ಮಾರ್ಕ್ವೆಜ್, ಸ್ಪ್ಯಾನಿಷ್ ಗ್ರ್ಯಾನ್ ಪ್ರಿ ರೇಸ್ ನಲ್ಲಿ ಸಂಭವಿಸಿದ ಅಪಘಾತದಲ್ಲಿ ಬಲಗೈ ಮುರಿದುಕೊಂಡಿದ್ದಾರೆ.
ಲಾ ಲೀಗಾ ಫುಟ್ಬಾಲ್: ರಿಯಲ್ ಮ್ಯಾಡ್ರಿಡ್ ಚಾಂಪಿಯನ್ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ರಿಯಲ್ ಮ್ಯಾಡ್ರಿಡ್ ತಂಡ, ಮೂರು ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಏರಿತು.
ಧ್ಯಾನ್ ಚಂದ್ ಪ್ರಶಸ್ತಿ ವಿಜೇತ ಫುಟ್ಬಾಲಿಗ ಎಸ್.ಎಸ್. ಹಕೀಮ್ ಗೆ ಕೊರೋನಾ ಸೋಂಕು ದೃಢಮಾಜಿ ಒಲಿಂಪಿಕ್ ಫುಟ್ಬಾಲ್ ಆಟಗಾರ ಮತ್ತು ಮಾಜಿ ರಾಷ್ಟ್ರೀಯ ಫುಟ್ಬಾಲ್ ತರಬೇತುದಾರ ಸೈಯದ್ ಶಾಹಿದ್ ಹಕೀಮ್ ಅವರಿಗೆ ಕೊರೋನಾ ಸೋಂಕು ತಗುಲಿದೆ. ಇದೀಗ ಕೋವಿಡ್ ಚಿಕಿತ್ಸೆಗಾಗಿ ಮಿಲಿಟರಿ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದ ಕಾರಣ 81 ವರ್ಷದ ಹಕೀಮ್ ಹೈದರಾಬಾದ್ ಹೋಟೆಲ್ ನಲ್ಲಿ ಕ್ವಾರಂಟೈನ್ ಆಗಿದ್ದಾರೆ.
ಫಿಫಾ ವಿಶ್ವಕಪ್ 2022 ವೇಳಾಪಟ್ಟಿ ಪ್ರಕಟ, ನವೆಂಬರ್ 21 ರಿಂದ ಪ್ರಾರಂಭಫಿಫಾ ವಿಶ್ವಕಪ್ ಫುಟ್ಬಾಲ್ ಕತಾರ್ 2022 ರ ವೇಳಾಪಟ್ಟಿ ಹೊರಬಿದ್ದಿದೆ. ದೋಹಾ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ನಡೆಯುವ 32 ತಂಡಗಳ ಪಂದ್ಯಾವಳಿ ನವೆಂಬರ್ 21, 2022ಕ್ಕೆ ಉದ್ಘಾಟನೆಯಾಗಲಿದೆ, ಮತ್ತು ಡಿಸೆಂಬರ್ 18 ರಂದು ಫೈನಲ್ಸ್ ನಡೆಯಲಿದೆ.
ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದ ಕಾಮನ್ವೆಲ್ತ್ ಪದಕ ವಿಜೇತ ಪರ್ದೀಪ್ ಸಿಂಗ್2018 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದ ರಾಷ್ಟ್ರೀಯ ಚಾಂಪಿಯನ್ ವೇಟ್‌ಲಿಫ್ಟರ್ ಪರ್ದೀಪ್ ಸಿಂಗ್ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ದೇಶೀ ಕ್ರೀಡಾಕೂಟದಲ್ಲಿ ರೈಲ್ವೆಯನ್ನು ಪ್ರತಿನಿಧಿಸುವ ಪರ್ದೀಪ್ ಸಿಂಗ್ ಅವರ ರಕ್ತದ ಮಾದರಿಯು ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ.
ಒಲಂಪಿಕ್ ತರಬೇತಿಗೆ ಹಣವಿಲ್ಲದೆ ಬಿಎಂಡಬ್ಲ್ಯು ಕಾರ್ ಮಾರಲು ಮುಂದಾದ ದ್ಯುತಿ ಚಾಂದ್!ಕೊರೋನಾ ಜಾಗತಿಕ ಸಾಂಕ್ರಾಮಿಕದಿಂದಾಗಿ ಕ್ರೀಡಾಕೂಟಗಳು ನಡೆಯುತ್ತಿಲ್ಲ, ಕ್ರೀಡಾ ಪ್ರಾಯೋಜಕರು ಕಡಿಮೆಯಾಗಿದ್ದಾರೆ. ಇದರಿಂದಾಗಿ ಭಾರತದ ಮಹತ್ವದ ಅಥ್ಲೀಟ್ ದ್ಯುತಿ ಚಾಂದ್ ತನ್ನ ತರಬೇತಿಗಾಗಿ ಹಣ ಹೊಂದಿಸಲು ತನ್ನ ಅಮೂಲ್ಯವಾದ ಆಸ್ತಿ ಬಿಎಂಡಬ್ಲ್ಯು ಕಾರನ್ನು ಮಾರಾಟ ಮಾಡಲು ಸಿದ್ದವಾಗಿದ್ದಾರೆ
ಕ್ರೀಡೆಯಲ್ಲಿ ಯಶಸ್ಸನ್ನು ಕಂಡುಕೊಳ್ಳಲು ನನ್ನ ತಂದೆ ನನಗೆ 2 ವರ್ಷ ಟೈಂ ಕೊಟ್ಟಿದ್ದರು: ರೋಜರ್ ಫೆಡರರ್ಟೆನ್ನಿಸ್ ಅಗ್ರ ಶ್ರೇಯಾಂಕಿತರಲ್ಲಿ ಒಬ್ಬರಾದ ರೋಜರ್ ಫೆಡರರ್ ಗೆ ಅವರ ತಂದೆ ಕ್ರೀಡೆಯಲ್ಲಿ ಯಶಸ್ಸನ್ನು ಕಂಡುಕೊಳ್ಳಲು ಎರಡು ವರ್ಷಗಳ ಸಮಯ ನೀಡಿದ್ದರಂತೆ! ಹೀಗೆಂದು ಸ್ವತಃ ದಾಖಲೆಗಳ ವೀರ ಫೆಡರರ್ ಹೇಳಿಕೊಂಡಿದ್ದಾರೆ. ಫೆಡರರ್ ಅವರ ಬಾಲ್ಯದ ದಿನಗಳಲ್ಲಿ ವೃತ್ತಿಪರ ಟೆನ್ನಿಸ್ ಆಟಗಾರನಾಗಲು ಅವರ ಪೋಷಕರು ಸಾಕಷ್ಟು ಆರ್ಥಿಕ ಬೆಂಬಲ ನೀಡಿದ್ದರೂ ತಮ್ಮ ಮಗ ತೀವ್ರ ಸ್ಪರ್ಧಾತ್ಮಕ
ಹಾಕಿ ಇಂಡಿಯಾ ಅಧ್ಯಕ್ಷ ಅಹಮದ್ ರಾಜೀನಾಮೆ, ನೂತನ ಅಧ್ಯಕ್ಷರಾಗಿ ನಿಂಗೊಂಬಮ್ ನೇಮಕಹಾಕಿ ಇಂಡಿಯಾ ಅಧ್ಯಕ್ಷ ಸ್ಥಾನಕ್ಕೆ ಮೊಹಮ್ಮದ್ ಮುಷ್ತಾಕ್ ಅಹಮದ್ ಅವರು ರಾಜೀನಾಮೆ ನೀಡಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಹಿರಿಯ ಉಪಾಧ್ಯಕ್ಷ, ಮಣಿಪುರದ ಗ್ಯಾನೆಂದ್ರೊ ನಿಂಗೊಂಬಮ್ ಅವರನ್ನು ನೇಮಕ ಮಾಡಲಾಗಿದೆ.
25 ವರ್ಷಗಳ ನಂತರ ರಾಷ್ಟ್ರೀಯ ಅಥ್ಲೆಟಿಕ್ಸ್ ಮುಖ್ಯ ಕೋಚ್ ಬಹದ್ದೂರ್ ಸಿಂಗ್ ರಾಜೀನಾಮೆ25 ವರ್ಷಗಳ ಸುಧೀರ್ಘ ಸೇವೆಯ ನಂತರ ರಾಷ್ಟ್ರೀಯ ಮುಖ್ಯ ಕೋಚ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಬಹದ್ದೂರ್ ಸಿಂಗ್ ಅವರ ಬಗ್ಗೆ ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟ(ಎಎಫ್ಐ) ಮೆಚ್ಚುಗೆ ವ್ಯಕ್ತಪಡಿಸಿದೆ.
ನೋವಾಕ್ ಜೊಕೊವಿಚ್ ಮಾಡಿದ ತಪ್ಪಿನಿಂದ ನಾವೆಲ್ಲರೂ ಪಾಠ ಕಲಿಯಬೇಕು: ಗೈ ಫರ್ಗೆಟ್ಫ್ರೆಂಚ್ ಓಪನ್ ಸಂಘಟಕರು ಪ್ರತಿ ಹಂತದಲ್ಲೂ ಮುನ್ನೆಚ್ಚರಿಕೆ ವಹಿಸುತ್ತಿದ್ದು, ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ನೋವಾಕ್ ಜೊಕೊವಿಚ್ ಮಾಡಿದ ತಪ್ಪಿನಿಂದ ಪಾಠ ಕಲಿಯಬೇಕಿದೆ ಎಂದು ವರ್ಷದ ಎರಡನೇ ಗ್ರ್ಯಾನ್ ಸ್ಲ್ಯಾಮ್ ಫ್ರೆಂಚ್ ಓಪನ್ ಪಂದ್ಯಾವಳಿಯ ನಿರ್ದೇಶಕ ಗೈ ಫರ್ಗೆಟ್ ತಿಳಿಸಿದ್ದಾರೆ.
ಅಮಿತ್ ಪಂಘಾಲ್ ವಿಶ್ವದ ನಂ.1 ಬಾಕ್ಸರ್ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಮತ್ತು ವಿಶ್ವ ಚಾಂಪಿಯನ್ ಷಿಪ್ ಬೆಳ್ಳಿ ಪದಕ ವಿಜೇತ ಅಮಿತ್ ಪಂಘಾಲ್ ಅಮೆಚೂರ್ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) ನೂತನವಾಗಿ ಬಿಡುಗಡೆ ಮಾಡಿದ ವಿಶ್ವ ರಾಂಕಿಂಗ್ ನ 52 ಕೆ. ಜಿ ವಿಭಾಗದಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ.
ನಿವೃತ್ತಿ ಪ್ರಕಟಿಸಿದ ಬ್ಯಾಡ್ಮಿಂಟನ್ ದಿಗ್ಗಜಚೈನಾ ಬ್ಯಾಡ್ಮಿಂಟನ್ ಸೂಪರ್ ಸ್ಟಾರ್ ೩೬ ವರ್ಷದ ಲಿನ್ ಡಾನ್ ಕ್ರೀಡಾ ಬದುಕಿನಿಂದ ನಿವೃತ್ತಿಯಾಗುತ್ತಿರುವುದಾಗಿ ಶನಿವಾರ ಪ್ರಕಟಿಸಿದ್ದಾರೆ.
'ಟಿಕ್‌ಟಾಕ್’ಬ್ಯಾನ್ ಆಯ್ತು ಎಂದು ಸಂಭ್ರಮಿಸಿದ ಕಾಮನ್ವೆಲ್ತ್ ಚಿನ್ನದ ಪದಕ ವಿಜೇತೆ!ಎರಡು ಬಾರಿ ಕಾಮನ್‌ವೆಲ್ತ್ ಕ್ರೀಡಾಕೂಟ ಚಿನ್ನದ ಪದಕ ವಿಜೇತರಾಗಿದ್ದ ಹೀನಾ ಸಿಧು ಚೀನಾ ಮೂಲದ ಪ್ರಸಿದ್ಧ ಟಿಕ್ ಟಾಕ್ ಆ್ಯಪ್ ನಿಷೇಧಿಸಿದ ಭಾರತ ಸರ್ಕಾರದ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಭದ್ರತಾ ಕಾಳಜಿಯಿಂದಾಗಿ ಭಾರತ ಸರ್ಕಾರ ಸೋಮವಾರ ನಿಷೇಧಿಸಿದ 59 ಚೀನೀ ಅಪ್ಲಿಕೇಶನ್‌ಗಳಲ್ಲಿ ಟಿಕ್‌ಟಾಕ್ ಸಹ ಸೇರಿದೆ.
2027ರ ಎಎಫ್ ಸಿ ಏಷ್ಯನ್ ಕಪ್ ಆತಿಥ್ಯಕ್ಕೆ ಭಾರತ ಬಿಡ್ ಸಲ್ಲಿಕೆ2027ರ ಎಎಫ್ಸಿ ಏಷ್ಯನ್ ಕಪ್ ಟೂರ್ನಿಗೆ ಆತಿಥ್ಯ ವಹಿಸಲು ಭಾರತ ಸೇರಿದಂತೆ ಐದು ಸದಸ್ಯ ಸಂಸ್ಥೆಗಳು ಆಸಕ್ತಿ ತೋರಿವೆ ಎಂದು ಏಷ್ಯನ್ ಫುಟ್ಬಾಲ್ ಒಕ್ಕೂಟ(ಎಎಫ್ಸಿ) ಬುಧವಾರ ದೃಡಪಡಿಸಿದೆ.
ಲಿಯೋನೆಲ್ ಮೆಸ್ಸಿ ಮತ್ತೊಂದು ಮೈಲುಗಲ್ಲುಬಾರ್ಸಿಲೋನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಮಂಗಳವಾರ ತಮ್ಮ ವೃತ್ತಿ ಬದುಕಿನ 700ನೇ ಗೋಲಿನ ಸಂಭ್ರಮವನ್ನು ಆಚರಿಸುವ ಮೂಲಕ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!