ನಗಬೇಕು

Updated on: 

ಹೆರಿಗೆಗೆಂದು ತವರುಮನೆಗೆ ಬಂದಿದ್ದ ಅಕ್ಕನನ್ನು, ಅವಳ ಐದು ವರ್ಷದ ತಂಗಿ ಕೇಳಿದಳು; 'ಈಗ ನಿಂಗೆ ಎಂಟು ತಿಂಗಳಂತೆ ಹೌದಾ?'.
ಅಕ್ಕ: ಹೌದು ಕಣೇ. ನಿಂಗ್ಯಾಕೆ ಆ ವಿಷ್ಯ?
ತಂಗಿ: ಅಲ್ಲ ಅಕ್ಕಾ, ನಿಂಗೆ ಈಗ ಎಂಟು ತಿಂಗಳು ಅನ್ನುವುದಾದ್ರೆ ನೀನು ಅದು ಹೇಗೆ ನನಗೆ ಅಕ್ಕನಾಗಲು ಸಾಧ್ಯ?
=
ಪುಟ್ಟ: ಮಮ್ಮೀ, ಹಸುವಿನಿಂದ ಹಾಲು ಹೇಗೆ ಬರುತ್ತೆ?
ಅಮ್ಮ: (ಹೇಗೆ ಉತ್ತರ ಹೇಳಬೇಕೋ ಗೊತ್ತಾಗದೆ) ನಿಂಗೆ ಕಣ್ಣೀರು ಹೇಗೆ ಬರ್ತದೋ ಹಾಗೆ...
ಪುಟ್ಟ: ಹಾಗಾದ್ರೆ, ಹಸುವಿನಿಂದ ಹಾಲು ಪಡೆಯಬೇಕು ಅನ್ನುವಾಗ ಅದಕ್ಕೂ ಹೊಡೆಯಬೇಕೇನಮ್ಮಾ?
=
ಫೋಟೋ ಫ್ರೇಂ ಅಂಗಡಿಯೊಂದರ ಮುಂದೆ ಹೀಗೆ ಬರೆದಿತ್ತು: ನಮ್ಮಲ್ಲಿ ಖರೀದಿಸಿದ ಕನ್ನಡಿಗಳನ್ನು 100 ಅಡಿ ಮೇಲಿನಿಂದ ಕೆಳಕ್ಕೆಸೆದರೂ, 99 ಅಡಿ ತಲುಪುವವರೆಗೂ ಕನ್ನಡಿಗೆ ಏನೂ ಆಗುವುದಿಲ್ಲ!
=
ಗುಂಡ: ಡ್ಯಾಡೀ, ಸ್ವಲ್ಪ ಚಿಲ್ಲರೆ ಕಾಸು ಕೊಡಿ.
ತಂದೆ: ಇಷ್ಟು ದೊಡ್ಡವನಾಗಿದ್ದೀಯ, ಚಿಲ್ಲರೆ ಕಾಸು ಕೇಳಲು ನಿನಗೆ ನಾಚಿಕೆ ಆಗಲ್ವಾ?
ಗುಂಡ: ಸರಿ ಹಾಗಾದ್ರೆ, ನಂಗೆ ಒಂದಷ್ಟು ನೋಟುಗಳನ್ನೇ ಕೊಡಿ!
=
ನಿಂಗ: ಮಗನೇ, ಕಾಲೇಜಿನಲ್ಲಿ ಹೇಗೆ ಓದ್ತಾ ಇದೀಯ?
ಮಗ: ಅದಕ್ಕೆ ಕಣಪ್ಪಾ ನಂಗೆ ಕೋಪ ಬರೋದು. ನಾನೇನಾದ್ರೂ ನಿನ್ನನ್ನು- ಆಫೀಸಿನಲ್ಲಿ ನೀನು ಹೇಗೆ ಕೆಲ್ಸ ಮಾಡ್ತೀಯ ಅಂತ ಯಾವಾಗಲಾದ್ರೂ ಕೇಳ್ತಿನೇನು?

- ಎನ್. ಜ್ಞಾನಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com