ನನ್ನ ಪ್ರಾಣಸ್ನೇಹಿತನೊಬ್ಬ ಹಣವನ್ನು ಸಾಲವಾಗಿ ಕೇಳಿದ್ದಾನೆ. ಆದರೆ ಅವನು ಅದನ್ನು ಹಿಂತಿರುಗಿಸದೆ ತಲೆತಪ್ಪಿಸಿಕೊಂಡು ಓಡಾಡುತ್ತಾನೆ ಎಂಬುದು ನನಗೆ ಗೊತ್ತು. ಹಾಗಂತ ಕೊಡದೇ ಇರಲೂ ಸಾಧ್ಯವಾಗುತ್ತಿಲ್ಲ. ಗೆಳೆಯನನ್ನು ಕಳೆದುಕೊಳ್ಳಲೂ ಇಷ್ಟವಿಲ್ಲ, ಸಾಲ ಕೊಡಲೂ ಇಷ್ಟವಿಲ್ಲ. ಏನು ಮಾಡಲಿ?
ಟ ಪತಂಗಿ ಮುರಳಿ, ಬೆಂಗಳೂರು
ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಹೆಚ್ಚು ಜನರು ಎದುರಿಸಿರುತ್ತಾರೆ. ಯಾವ ಕಾರಣಕ್ಕಾಗಿ ಸ್ನೇಹಿತನಿಗೆ ಹಣ ಕೊಡುತ್ತಿದ್ದೀರಿ ಎಂಬುದು ಮುಖ್ಯ. ಮಕ್ಕಳ ವಿದ್ಯಾಭ್ಯಾಸ ಅಥವಾ ತಾಯಿ ತಂದೆ ಚಿಕಿತ್ಸೆಯ ಕಾರಣವಾದರೆ 'ದಾನ' ಎಂದುಕೊಂಡು ಕೊಟ್ಟುಬಿಡಿ. ಅದಿಲ್ಲದೆ ಅವನ ಮೋಜು, ಜೂಜಿನ ಕಾರಣವಾದರೆ ಖಂಡಿತ ಹಣ ಕೊಡಬೇಡಿ. ಗೆಳೆತನ ಕಡಿದುಕೊಂಡರೂ ಪರವಾಗಿಲ್ಲ.
-ಡಾ. ಸ್ಯಾಟಲೈಟ್
anekaby2@gmail.com