ಪಕ್ಷಗಳಿಗೆ ಸೂಕ್ತ ವ್ಯಕ್ತಿಯ ಹುಡುಕಾಟ, ರಾಜಕಾರಣಿಗಳಿಗೆ ಮಂಗನಂತೆ ಪಕ್ಷದಿಂದ ಪಕ್ಷಕ್ಕೆ ಜಿಗಿದಾಟ. ಮತದಾರರಿಗೆ ಯಾರಿಗೆ ಮತಹಾಕಬೇಕೆಂಬ ಪ್ರಾಣಸಂಕಟ!
- ಎಚ್.ಎಸ್. ರಾಜ್
ರಾಜಕಾರಣಿಗಳ ಬಲ ಪ್ರದರ್ಶನ. ಸಾಮಾನ್ಯ ಜನರು ಕಾನೂನುಬದ್ಧವಾಗಿ ತಮ್ಮನ್ನು ತಾವೇ ಮಾರಿಕೊಳ್ಳುವ ವ್ಯವಸ್ಥೆ ಚುನಾವಣೆ!
- ಎ.ಎಂ. ಮಾಲಗತ್ತಿ
ಸ್ವತಂತ್ರ ಭಾರತದ ಪ್ರಜೆಗೆ ತಮ್ಮ ಹಕ್ಕನ್ನು ಚಲಾಯಿಸಲು ಇರುವ ಏಕೈಕ ಮಾರ್ಗ ಈ ಚುನಾವಣೆ.
- ಎನ್. ವಾದಿರಾಜ್
ಮತದಾರರನ್ನು ಕಾಡಿ ಬೇಡಿ ವೋಟು ಪಡೆದು, ತಮ್ಮ ಭವಿಷ್ಯ ನಿರ್ಧರಿಸಿಕೊಳ್ಳುವ ಜನಪ್ರತಿನಿಧಿಗಳ ಗೇಮ್ ಶೋ!
- ಶರಣ್ಯಲಿಖಿತ