ಯುವಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ವಿಭಿನ್ನ ಪರಿಕಲ್ಪನೆ ಹೊಂದಿರುವ ಸಂಸೆ 'ಸಂಕುಲ 3ಜಿ ಥಿಯೇಟರ್'. ಅನೇಕ ವರ್ಷಗಳಿಂದ ಸಂಸ್ಥೆಯು ವಿವಿಧ ಕೋರ್ಸ್ಗಳನ್ನು ನುರಿತ ತಜ್ಞರಿಂದ ನಡೆಸುತ್ತಿದೆ. ಈಗಾಗಲೇ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತರಬೇತಿಯನ್ನೂ ನೀಡಿದೆ.
ಸಂಸ್ಥೆಯು 6ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ 'ಆಧುನಿಕ ಥಿಯೇಟರ್' ಶಿಬಿರವನ್ನು ಬೆಂಗಳೂರಿನಲ್ಲಿ ನಡೆಸುತ್ತಿದೆ. ಸಂಕುಲ 3ಜಿ ಥಿಯೇಟರ್ ಶಿಬಿರವು ಸಂಗೀತ, ನೃತ್ಯ, ವಾದನ ಸಲಕರಣೆಗಳು, ನಾಟಕ, ಪ್ರದರ್ಶನ, ನಿರೂಪಣೆ, ವ್ಯಕ್ತಿತ್ವ ವಿಕಸನ, ಕ್ರೀಡೆ, ಕ್ವಿಜ್ ಮುಂತಾದವುಗಳನ್ನು ಒಳಗೊಂಡಿದೆ. ಯಾವುದೇ ಭಾಷೆಯ ಅಭ್ಯರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಹೆಸರು ನೋಂದಾಯಿಸಿಕೊಳ್ಳಲು ಕೊನೆಯ ದಿನ ಏ.3. ತರಬೇತಿ ಅವಧಿ: ಏ.15ರಿಂದ 19 (5 ದಿನ). ವೇಳೆ: ಬೆಳಗ್ಗೆ 9.30ರಿಂದ ಸಾಯಂಕಾಲ 4.30ರವರೆಗೆ. ಮಾಹಿತಿಗೆ: 9243422349/ 9341213345.
ಮೀನುಗಾರಿಕೆ ಶಿಬಿರ: ಹೆಬ್ಬಾಳದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮೀನುಗಾರಿಕೆ ವಿಭಾಗವು ಮೀನು ಸಾಕಣೆ ಕುರಿತ ಶಿಬಿರವನ್ನು ಏ.15ರಿಂದ 19ರವರೆಗೆ ನಡೆಸಲಿದೆ. ಗರಿಷ್ಠ 35 ಅಭ್ಯರ್ಥಿಗಳಿಗೆ ಅವಕಾಶ. ವಿವರಗಳಿಗೆ- 9448377863/080-23515644/bvkmurthyin@gmail.com . <