ಅನುಷ್ಠಾನ ಕಾರ್ಯ ಶ್ರೇಷ್ಠ

Updated on: 

'ಕಾರ್ಯದ ಬಗ್ಗೆ ಬೇಕಾದಷ್ಟು ಮಾತನಾಡುವ ನಾವು ಅದನ್ನು ಕೈಗೊಳ್ಳುವ ಸಮಯ ಬಂದಾಗ ಅಲ್ಲಿಂದ ಕಾಲ್ತೆಗೆಯುತ್ತೇವೆ. ಇದು ಭಾರತೀಯರ ಸ್ವಭಾವವೇ ಆಗಿಬಿಟ್ಟಿದೆ. ಕಾರ್ಯಕ್ಕೆ ಬಳಕೆಯಾಗದ ನಮ್ಮ ಶಕ್ತಿ ಮಾತಿನಲ್ಲಿಯೇ ವ್ಯಯವಾಗುತ್ತಿದೆ. ನೂರು ಮಾತಿಗಿಂತ ಒಂದು ಕಾರ್ಯ ಶ್ರೇಷ್ಠ. ನಮ್ಮಿಂದ ಕಾರ್ಯಶೀಲರಾಗಲು ಆಗುತ್ತಿಲ್ಲವೆನಿಸಿದರೆ ಅದಕ್ಕೆ ಕಾರಣಗಳನ್ನು ಹುಡುಕಿ, ಕಾರ್ಯಶಕ್ತಿಯನ್ನು ಪ್ರೇರೇಪಿಸಿ.
ನೀವು ಸುಧಾರಣೆಯ ಬಗ್ಗೆ ಮಾತನಾಡುತ್ತೀರಿ. ಆದರೆ ಅನುಷ್ಠಾನದ ಪ್ರಶ್ನೆ ಬಂದಾಗ ಮಾತ್ರ ಅದರ ಸುಳಿವೇ ಕಾಣುವುದಿಲ್ಲ. ಅದಕ್ಕೆ ಕಾರಣ ನೀವು ದುರ್ಬಲರು, ನಿಮ್ಮ ದೇಹ ದುರ್ಬಲ, ಮನಸ್ಸು ದುರ್ಬಲ ಮತ್ತು ನಿಮ್ಮಲ್ಲಿ ಶ್ರದ್ಧೆಯಿಲ್ಲ. ಶಕ್ತಿಯೇ ನಮಗಿಂದು ಬೇಕಾಗಿರುವುದು. ಆ ಶಕ್ತಿ ಎಲ್ಲಿ ದೊರೆತೀತು? ಉಪನಿಷತ್ತುಗಳಲ್ಲಿ!
ಉಪನಿಷತ್ತುಗಳ ಪುಟಪುಟಗಳಲ್ಲೂ ಶಕ್ತಿಯೇ ಎದ್ದು ಕಾಣುತ್ತದೆ. ನಾನು ಕಲಿತ ಅತಿ ದೊಡ್ಡ ಪಾಠವೇ ಇದು. 'ಓ ಮಾನವ, ಶಕ್ತಿವಂತನಾಗು. ದೌರ್ಬಲ್ಯವನ್ನು ತೊರೆ'. ಇದೇ ಉಪನಿಷತ್ತು ಘೋಷಿಸುವ ಮಹಾವಾಣಿ.
ಸಮಸ್ತ ಸ್ತ್ರೀ-ಪುರುಷರನ್ನು ದೇವರೆಂದೇ ನೋಡಿ. ಇತರರ ಸೇವೆಯನ್ನು ಭಗವಂತನ ಪೂಜೆಯೆಂದು ಭಾವಿಸಿ. ದರಿದ್ರರಲ್ಲಿ ಭಗವಂತನನ್ನು ಕಾಣಬೇಕು.
ಈ ಲೋಕಕ್ಕೆ ಬೇಕಾದ ಬೆಳಕು ತನ್ನಿ, ಎಲ್ಲರಿಗೂ ಬೆಳಕು ತೋರಿ. ಉಳಿದುದನ್ನು ದೇವರಿಗೆ ಬಿಟ್ಟುಬಿಡಿ. ನಿನಗೆ ಕರ್ಮ ಮಾಡಲು ಮಾತ್ರ ಅಧಿಕಾರ, ಫಲಕ್ಕಲ್ಲ'.


-ಆನಂದ ಎಸ್.ಎನ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com