ದತ್ತಪ್ಪಚ್ಚಿ ಗ್ಯಾಲರಿ

ದತ್ತಪ್ಪಚ್ಚಿ ಗ್ಯಾಲರಿ
Updated on: 

ಅವರು ಯಕ್ಷಗಾನದಷ್ಟು ತಮ್ಮ ಹೆಂಡತಿಯನೂ ಹಚ್ಚಿಕೊಳ್ಳುವುದಿಲ್ಲ. ಹಾಗಂತ ಅವರೇನು ವೇಷಭೂಷಣ ಧರಿಸಿ ಥಕ ಥೈ ಅಂಥ ಕುಣಿಯುವ ಕಲಾವಿದರಲ್ಲ. ಅರ್ಥದಾರಿಕೆಯಲ್ಲಿ ತೊಡಗಿಕೊಂಡ ವಾಗ್ಮಿಯೂ ಅಲ್ಲ. ಭಾಗವತಿಕೆಯೋ... ಮೃದಂಗ ವಾದನವೋ... ಧಿಮ್‌ಥರಿಕಿಟ ಎಂದು ಚಂಡೆಯ ಅಬ್ಬರವನು ಮೊಳಗಿಸುವ ನುರಿತ ಹಿಮ್ಮೇಳದ ವಾದಕರೂ ಇವರಲ್ಲ.
ಆದರೂ, ದತ್ತಾತ್ರೇಯ ಸುಬ್ರಾಯ ಹೆಗಡೆ ಅವರಿಗೆ ಅವರೆಲ್ಲರಿಗಿಂತ ಯಕ್ಷಪ್ರೀತಿ ಒಂದು ಮುಷ್ಠಿ ಹೆಚ್ಚು! ಯಕ್ಷಗಾನ ಲೇಖನಗಳನು ಸಂಗ್ರಹಿಸುವ ಅವರ ಹುಮ್ಮಸ್ಸಿಗೆ ಸಲಾಂ ಅನಲೇಬೇಕು. ಶಿರಸಿ ತಾಲೂಕಿನ ಹುಳಗೋಳದ ನಿವಾಸಿಯಾದ ಇವರು ದತ್ತಪ್ಪಚ್ಚಿ ಎಂದೇ ಫೇಮಸ್ಸು. ವಿವಿಧ ಪತ್ರಿಕೆಗಳಲ್ಲಿ ಯಕ್ಷಸಂಬಂಧ 1970ರಿಂದ ಇದುವರೆಗೆ ಮೂಡಿಬಂದ ಲೇಖನಗಳನು, ಯಕ್ಷಗಾನ ಪ್ರದರ್ಶನದ ಹ್ಯಾಂಡ್‌ಬಿಲ್‌ಗಳನು ಜೋಪಾನವಾಗಿ ಸಂಗ್ರಹಿಸಿಟ್ಟುಕೊಂಡಿದ್ದಾರೆ.
ಇವರಿಗೆ ಚಿಕ್ಕಂದಿನಿಂದಲೂ ಯಕ್ಷಗಾನವನು ವೀಕ್ಷಿಸುವ ಹುಚ್ಚು. ಇಂಥ ಶ್ರೇಷ್ಠ ಕಲೆಗೆ ತನದೊಂದು ಕೊಡುಗೆ ಕೊಡಬೇಕೆಂದು ಈ ಸಂಗ್ರಹ ಹವ್ಯಾಸ ರೂಢಿಸಿಕೊಂಡರು. 'ಕನಡಪ್ರಭ', 'ಸಂಯುಕ್ತ ಕರ್ನಾಟಕ', 'ಪ್ರಜಾವಾಣಿ', 'ಶಿರಸಿ ಸಮಾಚಾರ', 'ಮುನಡೆ', 'ಜನಮಾಧ್ಯಮ', 'ಧ್ಯೇಯನಿಷ್ಠ ಪತ್ರಕರ್ತ', 'ಪ್ರಜಾಮತ' ಮುಂತಾದ ದಿನಪತ್ರಿಕೆಗಳಲ್ಲಿ ಪ್ರಕಟವಾದ ಯಕ್ಷಗಾನದ ಲೇಖನಗಳನು ಸಂಗ್ರಹಿಸಿದ್ದಾರೆ. ಶಂಭು ಹೆಗಡೆ, ಚಿಟ್ಟಾಣಿ, ಮಾಬ್ಲ ಹೆಗಡೆ, ಆ್ಯಕ್ಟರ್ ಜೋಶಿ, ಪರಮಯ್ಯ ಹಾಸ್ಯಗಾರ, ಕೃಷ್ಣ ಹಾಸ್ಯಗಾರ, ಕಾಳಿಂಗ ನಾವಡ, ಕೃಷ್ಣ ಭಾಗವತ ಕಡತೋಕ, ಉಪ್ಪೋಣಿ ನಾರಾಯಣ ಭಾಗವತ, ಸಾಲ್ಕೋಡ್ ಗಣಪತಿ ಹೆಗಡೆ, ಕುಂಜಾಲು ರಾಮಕೃಷ್ಣ... ಹೀಗೆ ಯಕ್ಷಲೋಕದ ಸುಪ್ರಸಿದ್ಧ ಕಲಾವಿದರ ಕುರಿತ ಬಣ್ಣನೆಯ ಆಲ್ಬಂ ಇವರಲ್ಲಿದೆ.
ದತ್ತಪ್ಪಚ್ಚಿ ಅವರ ಕಲಾಸಂಗ್ರಹವು ಮುಂದಿನ ಪೀಳಿಗೆಗೆ ಯಕ್ಷಕಲೆಯ ಪರಿಚಯಕ್ಕೂ ಸಹಕಾರಿಯಾಗಿದೆ.

- ಚಿತ್ರ, ಬರಹ- ಜಿ.ಎಸ್. ಹೆಗಡೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com