ಮಲೆನಾಡಿನ ಮಳೆಯ ಜತೆ ಹಲಸಿನಬೀಜದ ನಂಟು..

Updated on: 

ಹಲಸಿನ ಹಣ್ಣಿನಿಂದ ಮಾಡುವ ಮುಳಕ, ದೋಸೆಯೂ ಅದ್ಭುತ ರುಚಿ ಹೊಂದಿರುತ್ತದೆ. ಬಿಸಿಲು ಕಾಲದಲ್ಲಿ ಹಲಸಿನ ಹಣ್ಣಿನಿಂದ ಹಪ್ಪಳ ಮಾಡಿಟ್ಟುಕೊಳ್ಳುತ್ತಾರೆ. ಇದನು ಎಣ್ಣೆಯಲ್ಲಿ ಕರಿಯಲು ಅಥವಾ ಸುಡಲು ಬರುವುದಿಲ್ಲ. ಒಣಗಿಸಿದ ಸಿಹಿ ಹಪ್ಪಳವನು ಹಾಗೆಯೇ ತಿನಬೇಕು. ಇದನು ಸಣ್ಣ ಸಣ್ಣ ಚೂರುಗಳನಾಗಿ ಮಾಡಿ ಶೇಖರಿಸಿಟ್ಟುಕೊಳ್ಳುತ್ತಾರೆ, ಮಾವಿನಹಣ್ಣಿನ ಮಾಂಬಳದ ರೀತಿ. ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ, ಅಷ್ಟು ದೊಡ್ಡದಾಗಿದೆ ಹಲಸಿನ ತರಹೇವಾರಿ ತಿನಿಸಿನ ಪಟ್ಟಿ.
ಇನು ಹಲಸಿನ ಬೀಜ ರುಚಿಯಲ್ಲಿ ತಾನೇನು ಕಡಿಮೆ ಎನುತ್ತದೆ. ಹಲಸಿನ ಬೀಜದಲ್ಲಿ ಪ್ರೊಟೀನ್ ಅಂಶ ಹೆಚ್ಚಿರುವುದರಿಂದ ಎಲ್ಲ ವಯೋವಾನದವರೂ ಇದನು ತಿನುತ್ತಾರೆ. ಗರ್ಭಿಣಿಯರಿಗೂ ಇದನು ಹುರಿದು ಕೊಡುತ್ತಾರೆ.
ಹಲಸಿನ ಬೀಜಕ್ಕೆ ನಾಗರಪಂಚಮಿ ಹಬ್ಬದಲ್ಲಿ ವಿಶೇಷ ಸ್ಥಾನ. ನಾಗರಪಂಚಮಿ ಹಬ್ಬದಂದು ಅರಳಿನ ಜತೆ ಹುರಿದ ಹಲಸಿನ ಬೀಜವನು ಸೇರಿಸಿ ನಾಗಪ್ಪನಿಗೆ ನೈವೇದ್ಯ ಮಾಡಿ, ನಂತರ ಮನೆಯೆಲ್ಲ ಬೀರುವ ಸಂಪ್ರದಾಯವಿದೆ.
ಇನು ಮಲೆನಾಡಿನ ಮಳೆಗೂ ಹಲಸಿನ ಬೀಜಕ್ಕೂ ಅವಿನಾಭಾವ ಸಂಬಂಧವಿದೆ. ಈ ಭಾಗಗಳಲ್ಲಿ ಮಳೆ ಹೆಚ್ಚು. ಅಂತಹ ಸಂದರ್ಭಗಳಲ್ಲಿ ಸಂಗ್ರಹಿಸಿಟ್ಟುಕೊಂಡ ಹಲಸಿನ ಬೀಜವನು ಹೊಡಸಲ ಬೆಂಕಿಯಲ್ಲಿ ಬೇಯಿಸಿ ತಿನುವ ಮಜವೇ ಬೇರೆ. ಹಲಸಿನ ಬೀಜವನು ಸಂಗ್ರಹಿಸುವ ಪದ್ಧತಿಯೂ ವಿಶೇಷವಾಗಿದೆ. ಹಣ್ಣಿನಿಂದ ಬೇರ್ಪಡಿಸಿದ ಬೀಜವನು ಚೆನಾಗಿ ತೊಳೆದು, ಒಂದೆರಡು ದಿನ ಒಣಗಿಸುತ್ತಾರೆ. ಒಣಗಿದ ಬೀಜಕ್ಕೆ ಹಸಿ ಮಣ್ಣನು ಹಚ್ಚಿ ನೆರಳಿನಲ್ಲಿ ಒಣಗಿಸಿ ತಾಮ್ರದ ಪಾತ್ರೆಗಳಲ್ಲಿ ಸಂಗ್ರಹಿಸಿಡುತ್ತಾರೆ. ಹೀಗೆ ಮಾಡುವುದರಿಂದ ಬೀಜ ಹೆಚ್ಚುದಿನ ಹಾಳಾಗದೆ ಉಳಿಯುತ್ತದೆ. ಹಲಸಿನ ಬೀಜವನು ಹುರಿದು, ಸಿಪ್ಪೆ ತೆಗೆದು, ಕುಟ್ಟಿ ಪುಡಿಮಾಡಿ, ಅದಕ್ಕೆ ಒಗ್ಗರಣೆ ಹಾಕಿ ಮಾಡುವ ಉಸುಳಿ ಕೂಡ ತುಂಬಾ ರುಚಿಯಾಗಿರುತ್ತದೆ.
ಹಲಸಿನ ಬೀಜದಿಂದಲೂ ಸಿಹಿ ತಿಂಡಿ ಮಾಡಬಹುದೆಂದರೆ ನಿಮಗೆ ಅಚ್ಚರಿಯಾಗದಿರದು. ಅದುವೇ ಹಲಸಿನ ಬೀಜದ 'ಬುಡ' (ಬ್ಯಾಳೆಬುಡ) ಆದರೆ ಇದು ಹೆಚ್ಚು ಶ್ರಮವನು ಬೇಡುತ್ತದೆ. ಹಲಸಿನ ಬೀಜದ ಮೇಲಿನ ಬಿಳಿ ಸಿಪ್ಪೆ ಹಾಗೂ ಬೀಜಕ್ಕೆ ಅಂಟಿಕೊಂಡಿರುವ ಕೆಂಪು ಸಿಪ್ಪೆಯನು ನೀಟಾಗಿ ತೆಗೆದು ಹಲಸಿನ ಬೀಜ ಶುಭ್ರ ಬಿಳಿ ಬಣ್ಣವಾಗಿ ಕಾಣಬೇಕು. ನಂತರ ಇದನು ಕುಕ್ಕರ್‌ನಲ್ಲಿ ಬೇಯಿಸಿ ಬೆಲ್ಲ, ಕಾಯಿತುರಿ ಹಾಕಿ ಕುದಿಸಬೇಕು. ನಂತರ ಹೋಳಿಗೆ ಹೂರ್ಣದ ಹದಕ್ಕೆ ರುಬ್ಬಿಕೊಳ್ಳಬೇಕು. ಈ ಹೂರ್ಣದ ಚಿಕ್ಕ ಚಿಕ್ಕ ಉಂಡೆಗಳನು ತೆಗೆದುಕೊಂಡು ಚಪ್ಪಟೆಯಾಗಿ ತಟ್ಟಿ ದೋಸೆ ಕಾವಲಿಯ ಮೇಲೆ ಹಾಕಿ ಎರಡೂ ಕಡೆ ಹೊಂಬಣ್ಣ ಬರುವಂತೆ ಬೇಯಿಸಿ. ಈಗ ಹಲಸಿನಬೀಜದ ಬುಡ ರೆಡಿ. ನಂತರ ತುಪ್ಪ ಹಾಕಿ ತಿಂದರೆ... ಮತ್ತೆ ಮತ್ತೆ ತಿನಬೇಕೆನಿಸುತ್ತದೆ.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com