ಮರೆವು ನಮ್ಮೆಲ್ಲರನು ಬಾಧಿಸುವ ಸಹಜ ಪ್ರಕ್ರಿಯೆ. ಅದನು ಬಾಧೆ ಎಂದೇಕೆ ಹೇಳುತ್ತೇವೆ? ಯಾಕೆಂದರೆ, ಅದು ಸರಿಯಾದ ಸಮಯದಲ್ಲೇ ನಮ್ಮನು ಅಟಕಾಯಿಸುತ್ತದೆ, ನಮಗೆ ಕೈಕೊಡುತ್ತದೆ. ಸೂಪರ್ ಎನಿಸಿಕೊಳ್ಳಬೇಕಾದೆಡೆ ಜೋಕರ್ ಎನಿಸಿಕೊಳ್ಳುಂತೆ ಮಾಡುತ್ತದೆ. ನೆನಪು ಭದ್ರವಾಗಬೇಕಾದರೆ ಏನು ಮಾಡಬೇಕು ಎಂಬುದು ಮರೆವಿನ ಹುದುಲಿನಲ್ಲಿ ಸಿಲುಕಿ ಒದ್ದಾಡುವ ಎಲ್ಲರ ಸಹಜ ಪ್ರಶೆ.
ಮೊದಲನೆಯದಾಗಿ ನೆನಪಿಡಬೇಕಾದ್ದು, ಮರೆವನು ಸಂಪೂರ್ಣ ನಾಶಮಾಡಲು ಯಾವ ಮಾರ್ಗಗಳೂ ಇಲ್ಲ. ಮರೆವು ನಮಗೆ ಪ್ರಕೃತಿ ಕೊಟ್ಟ ವರ. ಒಂದು ಕ್ಷಣ ಯೋಚಿಸಿ- ನಮಗೆ ಮರೆವೇ ಇಲ್ಲದಿದ್ದರೆ ಏನಾಗುತ್ತಿತ್ತು? ಬೇಕಾದ್ದು ಬೇಡವಾದ್ದು ಎಲ್ಲವೂ ತುಂಬಿಕೊಂಡು, ಮೆದುಳು ಗುಜರಿ ತೊಟ್ಟಿಯಂತಾಗುತ್ತಿರಲಿಲ್ಲವೇ? ಇಂದು ಮರೆತದ್ದು ಮುಂದೆಂದಾದರೂ ನೆನಪಾಗುತ್ತದೆ, ಹಾಗೆಯೇ, ಇಂದು ನೆನಪಿದ್ದದ್ದು ಶಾಶ್ವತವಾಗಿ ಹಾಗಿರಬೇಕಿಲ್ಲ.
ನೆನಪಿನ ಶಕ್ತಿ ಅಧಿಕವಾಗಿರುವವರು ನಮ್ಮ ವಿಸ್ಮಯಕ್ಕೆ ಕಾರಣವಾಗುವುದುಂಟು. ಅವರ ಸಾಮರ್ಥ್ಯ ದೈವದತ್ತವಾದ್ದು ಎಂದು ನಾವು ನಂಬುವುದುಂಟು. ಅದು ಪೂರ್ಣ ನಿಜವಲ್ಲ. ನಾವೂ ಅವರ ಹಾಗಾಗಬಲ್ಲೆವು ಎಂಬುದನು ಇಲ್ಲಿ ಉಲ್ಲೇಖಿಸಲೇಬೇಕು. ಅದಕ್ಕೆ ನಾವು ಮಾಡಬೇಕಾದದ್ದಿಷ್ಟೆ- ಮೂರು ಅಂಶಗಳ ಸೂತ್ರವನು ಪಾಲಿಸುವುದು. ಆ ಮೂರು ಅಂಶಗಳು- ಮೌನವಾಗಿರು, ಗಮನಿಸು, ಮನನ ಮಾಡು.
ನಮ್ಮಲ್ಲಿ ಬಹುತೇಕರಿಗೆ ಮೌನವಾಗಿರಲು ಸಾಧ್ಯವಾಗುವುದೇ ಇಲ್ಲ. ಯಾವಾಗಲೂ ಏನನಾದರೂ ಗಳುಹುತ್ತಲೇ ಇರಬೇಕು. ಅವರು ಏನನೂ ಕೇಳಿಸಿಕೊಳ್ಳುವುದೇ ಇಲ್ಲ. ತಮ್ಮ ಸಹಜೀವಿಗಳ ಬದುಕು- ಭಾವ, ಕಷ್ಟ- ಕೋಟಲೆ, ಪ್ರೀತಿ- ರೀತಿಗಳೆಲ್ಲ ಅವರಿಗೆ ಗೊತ್ತಾಗುವುದೇ ಇಲ್ಲ. ಕೇಳಿಸಿಕೊಂಡರೆ ತಾನೆ? ಮೌನದಲ್ಲಿ ಇಡೀ ಜಗತ್ತು ನಿಮ್ಮೊಂದಿಗಿರಲು ಬಯಸುತ್ತದೆ. ಅದು ಪ್ರೀತಿಯ ಕಂಪನಗಳನು ನಮ್ಮತ್ತ ಕಳಿಸುತ್ತದೆ. ಲೋಕದ ಪ್ರತಿ ಸದ್ದೂ ಯಾವುದೋ ಸಂದೇಶವನು ನಮ್ಮಲ್ಲಿ ಬಿತ್ತುತ್ತಿದೆ ಎಂದರ್ಥ.
ಮೌನವನು ನೀವು ರೂಢಿಸಿಕೊಂಡಿರೆಂದರೆ, ಜಗತ್ತನೂ ಗಮನಿಸಲು ನೀವು ಸಜ್ಜಾಗಿದ್ದೀರಿ ಎಂದರ್ಥ. ಮೌನವಾಗಿರುವುದರ ಮೂಲಕ ನಮ್ಮ ಗ್ರಹಿಕೆ ಚೂಪಾಗುತ್ತದೆ. ವಿವರವಾದ ಗಮನಿಸುವಿಕೆಯಿಂದ ನಮ್ಮ ತಿಳಿವಳಿಕೆಯ ಪರಿಧಿಗೆ ಬಂದದ್ದೆಲ್ಲವೂ ನಮ್ಮ ಮನಸ್ಸಿಗೆ ನಾಟುತ್ತದೆ. ಹಾಗೆ ನಾಟಿದಾಗಲೇ ಅದು, ನಮ್ಮ ನೆಪಿನಲ್ಲಿ ಉಳಿಯುವ ಸಾಮರ್ಥ್ಯ ಪಡೆಯುವುದು. ಹಸಿ ಗೋಡೆಗೆ ಕಲ್ಲನೆಸೆದರೆ ಅಂಟಿಕೊಳ್ಳುತ್ತದಲ್ಲವೆ? ನಮ್ಮ ಮನಸ್ಸು ಹಸಿಗೋಡೆಯಾಗಬೇಕು. ಮನನವು ಈ ಹಸಿಗೋಡೆಯ ಮೇಲಿನ ಚಿತ್ತಾರವನು ಮತ್ತಷ್ಟು ರಮ್ಯಗೊಳಿಸುವ ಪ್ರಯತವಾಗಿ ಜಾರಿಯಲ್ಲಿರಬೇಕು. ಆಗಲೇ ಉನತ ನೆನಪಿನ ಶಕ್ತಿ ನಮ್ಮದಾಗುವುದು.
- ಸಹನೆ