ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ಎಂಬುದು ಹಳೇ ಮಾತು. ಈಗ ಇದು ಆಗಾಗ ಬರುವ ಅತಿಥಿಯಾಗಿದೆ!
-ನೇತ್ರಾವತಿ ಪಿ.
ಸುಧಾರಿಸುವುದು ಸಮಾಜ ತಿಳಿದುಕೊಂಡರೆ ನಿಮ್ಮ ಹೊಣೆ ಇಲ್ಲಾಂದ್ರೆ ಮತ್ತದೇ ಬವಣೆ!
- ದರ್ಶನ್ ಹೊಸಕೊಡಿಗೆ, ತೀರ್ಥಹಳ್ಳಿ
ವಿದ್ಯೆ ಇರೋರು, ವಿದ್ಯೆ ಇಲ್ಲದವರನ್ನು ಆರಿಸೋದು!
- ರಾಘವೇಂದ್ರ ಪವಾರ್
ಪುಢಾರಿಗಳಿಗೆ ಜನರೇ ದೇವರಾಗುವಂಥ ಸಮಯ!
- ಹೋ.ಶ್ಯಾ. ನಾಗರಾಜ, ಮಧುಗಿರಿ
ಐದು ವರ್ಷಗಳಿಗೊಮ್ಮೆ ಬರುವ ಜನಸಾಮಾನ್ಯರ ಸೋಲು ಈ ಚುನಾವಣೆ!
- ಪತಂಗಿ ಸಂಪತ್, ಬೆಂಗಳೂರು