ಜೆಟ್ ವಿಮಾನಗಳು ಮತ್ತು ರಾಕೆಟ್‌ಗಳು ತಮ್ಮ ಚಲನೆಗೆ ಶಕ್ತಿ ಪಡೆಯುವುದು ಒಂದೇ ತತ್ವದ ಆಧಾರದ ಮೇಲೆ. ಎರಡೂ ಇಂಧನವನ್ನು ಉರಿಸಿ ಕುದಿಯುವ ಅನಿಲಗಳನ್ನು ಹೊರಹಾಕುತ್ತವೆ. ನ್ಯೂಟನ್ನನ ಚಲನೆ ಸಿದ್ಧಾಂತ, ಪ್ರತಿಯೊಂದು ಕ್ರಿಯೆಗೂ ಅದಕ್ಕೆ ಸರಿಸಮನಾದ ಮತ್ತು ವಿರುದ್ಧವಾದ ಒಂದು ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂಬುದು. ಇದೇ ತತ್ವದ ಆಧಾರದ ಮೇಲೆ ಎರಡೂ ಕೆಲಸ ನಿರ್ವಹಿಸಿಸುತ್ತವೆ.
ಆದರೆ ಎರಡರ ಕಾರ್ಯದಲ್ಲೂ ಒಂದು ಮುಖ್ಯವಾದ ವ್ಯತ್ಯಾಸವಿದೆ. ಜೆಟ್ ವಿಮಾನ ತನ್ನ ಇಂಧನವನ್ನು ದಹಿಸುವುದು, ಗಾಳಿಯಲ್ಲಿನ ಆಮ್ಲಜನಕವನ್ನು ಬಳಸಿಕೊಂಡು. ರಾಕೆಟ್ ಬಳಸುವುದು ತನ್ನೊಳಗೆ ಸಂಗ್ರಹಿಸಿಟ್ಟುಕೊಂಡಿರುವ ಆಮ್ಲಜನಕವನ್ನು. ಹೀಗೆ ಆಮ್ಲಜನಕ ಕೂಡ ಇಂಧನದ ಜತೆಯೇ ಇರುವುದರಿಂದಲೇ ರಾಕೆಟ್‌ಗಳು ಬಾಹ್ಯಾಕಾಶದಲ್ಲೂ ಕಾರ್ಯನಿರ್ವಹಿಸಬಲ್ಲವು. ಅಲ್ಲಿ ಗಾಳಿಯಿರದಿದ್ದರೂ ತೊಂದರೆಯಾಗುವುದಿಲ್ಲ. ಆದರೆ ಜೆಟ್ ವಿಮಾನ ವಾಯುಮಂಡಲ ಬಿಟ್ಟು ಎತ್ತರಕ್ಕೆ ಹಾರಲಾರದು.
-ಅರಳಕುಪ್ಪೆ ಶ್ರೀನಿವಾಸ.