

ತಲೆಕೂದಲು ಹುಟ್ಟೋದೇ ಉದುರೋಕಾ? ಕೆಲವರ ತಲೆ ನೋಡಿದರೆ ಹಾಗೆನ್ನಿಸುತ್ತದೆ. ಆಧುನಿಕ ಜೀವನಶೈಲಿ ಒತ್ತಾಯಪೂರ್ವಕವಾಗಿ ಕೊಟ್ಟ ಗಿಫ್ಟ್‌ಗಳಲ್ಲಿ ಇದೂ ಒಂದು. ಈ ಉದುರುವಿಕೆಗೆ ಮಹಿಳೆ, ಪುರುಷನೆಂಬ ಬೇಧವಿಲ್ಲ.
ಮೊದಲು ಆಹಾರ, ಇತರೆ ಟೆನ್ಷನ್‌ಗಳಿಗೆ ಉದುರಲು ಶುರು. ನಂತರ 'ಅಯ್ಯೋ ನನ್ನ ತಲೆ ಬೋಳಾಗ್ತಿದೆ' ಎಂಬ ಕೂಗು. ಇದೊಂದೇ ಚಿಂತೆ ಸಾಕು ಅಳಿದುಳಿದ ಅವಶೇಷಗಳನ್ನು ತಲೆಯ ಮೇಲಿಂದ ಹೊತ್ತೊಯ್ಯಲು. ಅದರಲ್ಲೂ ಇತ್ತೀಚೆಗೆ ಗಂಡಸರಿಗೆ 25ರಿಂದಲೇ ಬೊಕ್ಕತಲೆಯ ಸಮಸ್ಯೆ ಬಿಟ್ಟೂಬಿಡದೇ ಕಾಡುತ್ತಿದೆ. ಇದು ಅಷ್ಟಕ್ಕೇ ನಿಲ್ಲದೆ ನಾನು ಚೆಂದವಿಲ್ಲ, ಹುಡುಗಿ ಸಿಗುವುದಿಲ್ಲ, ಕ್ಲೇಂಟ್‌ಗಳೊಂದಿಗೆ ಮಾತನಾಡುವಾಗ ಅವರು ನನ್ನ ತಲೆಯನ್ನೇ ನೋಡುತ್ತಿದ್ದರೆನಿಸಿ ಕೀಳರಿಮೆ ಎಂಬ ವ್ಯಾಧಿಯನ್ನು ಅಂಟಿಸಿಬಿಡುತ್ತದೆ. ಅದರಿಂದ ಹೊರಬರಲು ಸಿಕ್ಕಸಿಕ್ಕ, ಅವರಿವರು ಹೇಳಿದ್ದನ್ನೆಲ್ಲ ಪ್ರಯೋಗಿಸಿ ನಂತರ ಇರುವ ಕೂದಲನ್ನೇ ಸ್ವಲ್ಪ ಉದ್ದಗೆ ಬಿಟ್ಟು ಅಡ್ಡಡ್ಡ ಬಾಚಿ ಬಾಂಡಲಿಯನ್ನು ಮುಚ್ಚಿರುತ್ತೀರಿ. ಆದರೂ ಬಿಸಿಲಿನಲ್ಲೊಮ್ಮೆ ಇಣುಕಿ ಫಳಫಳನೆ ಹೊಳೆದು ನಕ್ಕಿರುತ್ತದೆ ನಿಮ್ಮ ಖಾಲಿ ತಲೆ!
ಇದೇನು, ಮೊದಲೇ ನೊಂದಿದ್ದೇವೆ. ಮತ್ತಷ್ಟು ಅಣಕಿಸಿ ಮಜಾ ತೆಗೆದುಕೊಳ್ಳುತ್ತಿದ್ದಾಳೆ ಎಂದುಕೊಳ್ಳಬೇಡಿ. ಸಮಸ್ಯೆಗೆ ಪರಿಹಾರ ನೀಡಲು ಹೇರ್‌ಲೈನ್ ಇಂಟರ್‌ನ್ಯಾಷನಲ್ ಕ್ಲಿನಿಕ್ ಕಾದು ಕುಳಿತಿದೆ ಎಂಬುದನ್ನು ತಿಳಿಸಲೆಂದೇ ಈ ಪೀಠಿಕೆ. ಚರ್ಮರೋಗ ತಜ್ಞರು ಮತ್ತು ಸೌಂದರ್ಯ ತಜ್ಞರು ಮಾತ್ರ ತಲೆ ಕೂದಲಿಗೂ ಪರಿಹಾರ ಹೇಳುತ್ತಿದ್ದ ಸಂದರ್ಭದಲ್ಲಿ ಬಾನಿ ಆನಂದ್ ಎಂಬ ಮಹಿಳೆ ಒಂದು ಹೆಜ್ಜೆ ಮುಂದಿಟ್ಟು ಈ ರಂಗದಲ್ಲಿ ಹಲವು ಸಂಶೋಧನೆ ನಡೆಸಿ ಬೆಂಗಳೂರಿನಲ್ಲಿ ಜಯನಗರ, ಆರ್‌ಟಿ ನಗರ, ಇಂದಿರಾ ನಗರ, ವೈಟ್ ಫೀಲ್ಡ್ ಒಟ್ಟು 4 ಕಡೆ ಹೇರ್‌ಲೈನ್ ಎಂಬ ಕ್ಲಿನಿಕ್ ಸ್ಥಾಪಿಸಿಯೇ ಬಿಟ್ಟರು. ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ಆಕ್ಯುಪಂಕ್ಚರ್‌ನ ಮೆಥಡ್‌ಗಳನ್ನೇ ಬಳಸಿಕೊಂಡು ಉದುರುವ ತಲೆಕೂದಲಿಗೆ ಪರಿಹಾರ ನೀಡುವುದು ಈ ಕ್ಲಿನಿಕ್‌ನ ವಿಶೇಷ.
ಸದ್ಯ 30 ಮಂದಿ ಡೆರ್ಮಟಾಲಜಿ, ಟ್ರೈಕಾಲಜಿಯಲ್ಲಿ ಸ್ಪೆಶಲೈಜೇಶನ್ ಮಾಡಿದ ವೈದ್ಯರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿನ ಚಿಕಿತ್ಸಾ ಕ್ರಮವನ್ನು ಔಷಧಿ, ಸರ್ಜಿಕಲ್ ಮತ್ತು ನಾನ್ ಸರ್ಜಿಕಲ್ ಎಂದು ಮೂರು ವಿಭಾಗಗಳಾಗಿ ವಿಂಗಡಿಸಬಹುದು. ಒಬ್ಬೊಬ್ಬ ವ್ಯಕ್ತಿಗೆ ಒಂದೊಂದು ಕಾರಣಕ್ಕೆ ಕೂದಲು ಉದುರಬಹುದು. ಹಾಗಾಗಿ ಇಲ್ಲಿ ಚಿಕಿತ್ಸೆಗೆ ಬರುವ ಪ್ರತಿ ವ್ಯಕ್ತಿಯನ್ನೂ ಸಂಪೂರ್ಣ ಪರೀಕ್ಷೆಗೆ ಒಡ್ಡಲಾಗುತ್ತದೆ. ಲೇಸರ್ ಚಿಕಿತ್ಸೆ, ಹೇರ್ ರಿಪ್ಲೇಸ್‌ಮೆಂಟ್, ಹೇರ್ ಟ್ರಾನ್ಸ್‌ಪ್ಲಾಂಟ್, ಸ್ಟೆಮ್ ಸೆಲ್ ಥೆರಪಿ, ತಕ್ಷಣಕ್ಕೆ ಕೂದಲು ಉದ್ದಗೊಳಿಸುವುದು, ವಿಗ್ ಕೂರಿಸುವುದು ಸೇರಿದಂತೆ ಹತ್ತಾರು ಬಗೆಯ ಟ್ರೀಟ್‌ಮೆಂಟ್‌ಗಳಲ್ಲಿ ಒಂದಾದರೂ ನಿಮ್ಮ ಕೈ ಹಿಡಿಯದೇ ಇದ್ದೀತೇ? ಅದಾವುದೆಂದು ತಜ್ಞರು ನಿರ್ಧರಿಸಿ ಚಿಕಿತ್ಸೆ ಆರಂಭಿಸುತ್ತಾರೆ. ಕೇವಲ ಇಷ್ಟೇ ಅಲ್ಲದೆ ತೂಕ ಕಳೆದುಕೊಂಡು ಚಿಗರೆಯಂತಾಗಲು, ಚೆಂದದ ಹೊಳೆಯುವ ಚರ್ಮಕ್ಕಾಗಿಯೂ ಹೇರ್‌ಲೈನ್ ಕಡೆಗೆ ಮುಖ ಮಾಡಬಹುದು.
- ರೇಶ್ಮಾ ರಾವ್ ಸೊನ್ಲೆ