ಚುನಾವಣಾ ಸಮಯದಲ್ಲಿ ಜನಪ್ರತಿನಿಧಿಗಳು ತುಂಬಾ ಬ್ಯೂಸಿ. ಗೆದ್ದ ನಂತರ ಅವರು ನಾಟ್‌ರೀಚಬಲ್!
- ಹರಳಹಳ್ಳಿ ಪುಟ್ಟರಾಜು
ಪ್ರತಿಯೊಬ್ಬ ಭಾರತೀಯನ ಹಕ್ಕು, ಅಂದು ರಜೆ ಹಾಕುವುದು!
- ಅಭಿಜಿತ್ ಆರ್. ಶಾಸ್ತ್ರಿ, ಬೆಂಗಳೂರು
ದೇಶದ ಪ್ರಜೆಗಳು(ಮತದಾರರು) ರಾಜಕಾರಣಿಗಳಿಗೆ ನಡೆಸಿಕೊಡುವ ಪಂಚವಾರ್ಷಿಕ ಪರೀಕ್ಷೆ... ಚುನಾವಣೆ!
- ಅಬ್ಬಾಸಲಿ ಎಂ. ಮಾಲಗತ್ತಿ
ಜನರನ್ನು ವಂಚಿಸುವವರ, ದೋಚುವವರ ಕುರುಕ್ಷೇತ್ರವೇ ಚುನಾವಣೆ!
ಮತದಾನವೆಂಬ ಹರಕೆಯ ಕುರಿಯ ಬಲಿದಾನವೇ ಚುನಾವಣೆ
- ಗಾನಸುಮಾ ಪುಟ್ಟಸೋಮನಹಳ್ಳಿ