ರಾಜಕಾರಣಿಗಳು ಗಂಟಲು ಹರಿದುಕೊಂಡು ಮತದಾರರಿಗೆ ಪೊಳ್ಳು ಆಶ್ವಾಸನೆ, ಹುಸಿ ಭರವಸೆ ನೀಡಲು ಸಿಗುವ ವೇದಿಕೆ.
- ಗಂಗಾ ಹೆಗಡೆ, ಧಾರವಾಡ
ಪುಢಾರಿಗಳಿಗೆ ಜನರೇ ದೇವರಾಗುವಂಥ ಅಪರೂಪದ ಸಮಯ.
- ಹೋ.ಶ್ಯಾ. ನಾಗರಾಜ, ಮಧುಗಿರಿ
ಬೇಜವಾಬ್ದಾರಿ ಮತದಾರರು,
ಭ್ರಷ್ಟ ರಾಜಕಾರಣಿಗಳು ತುಂಬಿ ತುಳುಕುತ್ತಿರುವ ಈ ದೇಶಕ್ಕೆ ಇದು ಬೇಕೆ?
- ಅರಳಕುಪ್ಪೆ ಶ್ರೀನಿವಾಸ, ಬೆಂಗಳೂರು
ಮತದಾರ ಎಂಬ 'ಹರಕೆಯ ಕುರಿ'ಯ ಬಲಿದಾನವೇ ಈ ಚುನಾವಣೆ.
- ಪಿ.ಜಿ.ಎಸ್, ಮಂಡ್ಯ