ಅವಳಿಗೆ ನಾನಂದ್ರೆ ಆಗಲ್ಲ

Updated on: 

ನಾನು ಪೊಲೀಸ್ ಇಲಾಖೆಯಲ್ಲಿದ್ದೇನೆ. ಮಾವನ ಮಗಳನ್ನೇ ಮದುವೆಯಾಗುವ ಆಸೆ. ನನಗೆ ಅಮ್ಮ ಇಲ್ಲ. ಹೀಗಾಗಿ ನನ್ನ ಮತ್ತು ಅವಳ ಮನೆಯವರು, ಬಂಧುಗಳಿಗೆಲ್ಲ ಈ ಸಂಬಂಧ ಖುಷಿ ಕೊಟ್ಟಿದೆ. ಆದರೆ ಅವಳಿಗೇ ನನ್ನನ್ನು ಕಂಡರೆ ಇಷ್ಟವಿಲ್ಲ. ನನಗೆ ಯಾವುದೇ ದುಶ್ಚಟಗಳಿಲ್ಲ. ಅವಳು ನನ್ನನ್ನು ಇಷ್ಟಪಡಲು ಏನು ಮಾಡಬೇಕು?
- ಸಂತೋಷ್, ದೊಡ್ಡಬಳ್ಳಾಪುರ
ನಿಮ್ಮನ್ನು ಬಾಲ್ಯದಿಂದಲೂ ನೋಡಿರುವ ಮಾವನ ಮಗಳಿಗೆ ನಿಮ್ಮ ಬಗ್ಗೆ ಆ ಥರದ ಯೋಚನೆ ಬಂದಿಲ್ಲ. ಹೀಗಾಗಿಯೇ ನೀವು ಅವಳನ್ನು ಮದುವೆಯಾಗುವ ಪ್ರಸ್ತಾಪ ಇಟ್ಟಾಗ ಸಿಟ್ಟಿಗೆದ್ದಿರುವುದು, ನೀವು ಇಷ್ಟವಿಲ್ಲ ಎಂದು ಹೇಳಿರುವುದು. ಅದೊಂಥರ ಆಘಾತ ಅವಳಿಗೆ. ಬಲವಂತದಿಂದ ಒಲಿಸಿಕೊಂಡ ಪ್ರೀತಿ ಹೆಚ್ಚು ದಿನ ಬಾಳುವುದೂ ಇಲ್ಲ. ಆದ್ದರಿಂದ ಅವಳನ್ನು ಒಲಿಸಿಕೊಳ್ಳುವ ಯೋಚನೆ ಬಿಟ್ಟುಬಿಡಿ. ಇಬ್ಬರ ಬದುಕೂ ಹಸನಾಗುತ್ತದೆ.


-ಡಾ. ಸ್ಯಾಟಲೈಟ್
anekaby2@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com