ಹೃದಯಪೀಠವೇ ಧರ್ಮದ ಆಸನ

Updated on: 

ಧರ್ಮ ಸದ್ಗುಣಗಳೊಂದಿಗೆ ಅಭಿವ್ಯಕ್ತವಾಗಬೇಕಾದರೆ ಅದು ವ್ಯಕ್ತಿಯ ಹೃದಯದಲ್ಲಿ ನೆಲೆಸಿರಬೇಕು. ಆಗ ಧರ್ಮ ತೋರಿಕೆಯ ಆಚರಣೆಗಳಲ್ಲಿ ಮಾತ್ರ ಉಳಿಯದೆ ನಮ್ಮ ನಡೆ-ನುಡಿ-ಚಿಂತನೆಗಳಲ್ಲಿ ಅಭಿವ್ಯಕ್ತವಾಗುತ್ತದೆ. ಮತಾಂಧತೆ, ಪರಸ್ಪರ ದ್ವೇಷ, ಕಾದಾಟಗಳಿಗೆ ಆಗ ಅವಕಾಶವೇ ಇರುವುದಿಲ್ಲ. 'ಯಾರ ಹೃದಯ ದುರ್ದೈವಿಗಳಿಗಾಗಿ ಮರುಗುವುದೋ ಅವನೇ ಮಹಾತ್ಮ'.
ನೀವು ಸಾವಿರ ಸುಧಾರಕ ಸಂಘಗಳನ್ನೂ, ರಾಜಕೀಯ ಪಂಗಡಗಳನ್ನೂ ಸೇರಬಹುದು. ಆದರೆ ಅವುಗಳಿಂದ ನಾವು ಉದ್ಧಾರವಾಗಲಾರೆವು. ಎಲ್ಲಿಯವರೆಗೆ ನಿಜವಾದ ಸಹಾನುಭೂತಿ, ಪ್ರೀತಿ, ಎಲ್ಲರಿಗಾಗಿ ಮರುಗುವ ಅಂತಃಕರಣ ನಮ್ಮಲ್ಲಿ ಉಂಟಾಗುವುದಿಲ್ಲವೋ, ಅಲ್ಲಿಯವರೆಗೆ ಬುದ್ಧನ ಹೃದಯವು ಮತ್ತೆ ಭರತಖಂಡದಲ್ಲಿ ಆವಿರ್ಭವಿಸುವುದಿಲ್ಲವೋ, ಎಲ್ಲಿಯವರೆಗೆ ಶ್ರೀಕೃಷ್ಣನ ಬೋಧನೆಗಳು ಅನುಷ್ಠಾನಕ್ಕೆ ಬರುವುದಿಲ್ಲವೋ ಅಲ್ಲಿಯವರೆಗೂ ನಮಗೆ ಯಾವುದೇ ಭವಿಷ್ಯವಿಲ್ಲ, ಮನುಷ್ಯನಲ್ಲಿ, ಮನುಷ್ಯತ್ವದಲ್ಲಿ ನಂಬಿಕೆಯಿದ್ದರೆ ಭಗವಂತನಲ್ಲಿ ನಂಬಿಕೆ ತಾನಾಗಿಯೇ ಉಂಟಾಗುತ್ತದೆ.
ಮೊದಲು ಅನ್ನ, ಆಮೇಲೆ ಆಧ್ಯಾತ್ಮ. ನೀವು ಸಾವಿರ ಸಿದ್ಧಾಂತಗಳನ್ನು ಹರಡಬಹುದು, ಲಕ್ಷ ಪಂಥಗಳನ್ನು ಸೃಜಿಸಬಹುದು. ಆದರೆ ಎಲ್ಲಿಯವರೆಗೆ ನಿಮ್ಮಲ್ಲಿ ಇತರರಿಗಾಗಿ ಮರುಗುವ ಹೃದಯವಿಲ್ಲವೋ, ಅಲ್ಲಿಯವರೆಗೆ ನಿಮ್ಮ ಸಿದ್ಧಾಂತ ಬೋಧನೆಯೂ, ಮತಪ್ರಚಾರವೂ ಕೆಲಸಕ್ಕೆ ಬರುವುದಿಲ್ಲ.

-ಆನಂದ ಎಸ್.ಎನ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com