ವಿಧವೆ. 37 ವರ್ಷ. 12 ವರ್ಷದ ಮಗನಿದ್ದಾನೆ. ಸ್ವಂತ ಬ್ಯುಸಿನೆಸ್ ಇದೆ. ಕೆಲ ತಿಂಗಳ ಹಿಂದೆ ಒಬ್ಬರ ಜತೆ ಪ್ರೇಮವಾಯಿತು. 7-8 ವರ್ಷ ಚಿಕ್ಕವರಾದ ಅವರು ನನ್ನ ವಿಷಯ ಎಲ್ಲ ಗೊತ್ತಿದ್ದೂ ಪ್ರೀತಿಸುತ್ತಿದ್ದಾರೆ. 'ಮದುವೆಯಾಗೋಣ' ಎಂದರೆ 'ಹೂಂ' ಎನ್ನುತ್ತಾರೆ, ಯಾವಾಗ ಎಂದರೆ 'ಗೊತ್ತಿಲ್ಲ' ಅನ್ನುತ್ತಾರೆ. ಮನೆಯವರ ಬಳಿ ವಿಷಯ ಹೇಳಬೇಡ ಅಂತಾರೆ. ಗೊಂದಲದಲ್ಲಿದ್ದೇನೆ.
- ಹೆಸರು ಬೇಡ, ಊರು ಬೇಡ.
ನಿಮ್ಮನ್ನು ಅವರು ನಿಜವಾಗಲೂ ಪ್ರೀತಿಸುತ್ತಿದ್ದು ಮದುವೆಯಾಗುವ ಮನಸ್ಸಿದ್ದರೆ ಮನೆಯವರ ಬಳಿ ವಿಷಯ ತಿಳಿಸಲು ಅಡ್ಡಿಯೇಕೆ? ಅವರಿಗೆ ಈ ಸಂಬಂಧವನ್ನು ತಮ್ಮ ಮನೆಯವರು ಒಪ್ಪುವ ಬಗ್ಗೆ ಸಂಶಯ ಅಥವಾ ನಿಮ್ಮಿಂದ ಸುಖವನ್ನಷ್ಟೇ ಬಯಸುತ್ತಿದ್ದಾರೆ. ಮದುವೆ ವಿಚಾರವಾಗಿ ನೀವು 'ಇತ್ಯರ್ಥವಾಗಲೇಬೇಕು' ಎಂಬ ಧಾಟಿಯಲ್ಲಿ ಮಾತನಾಡಿದರೆ ಅವರ ಇರಾದೆ ಅರ್ಥವಾಗುತ್ತದೆ.
-ಡಾ. ಸ್ಯಾಟಲೈಟ್
anekaby2@gmail.com