ನೆಗಡಿ ಉಂಟಾಗಲು ಕಾರಣವೇನು?

Updated on: 

 ನೆಗಡಿಯಾದಾಗ ನಮಗೆ ವಾಸನೆ ಸರಿಯಾಗಿ ತಿಳಿಯುವುದಿಲ್ಲ ಏಕೆ? ಚಳಿಗಾಲದಲ್ಲಿ ನೆಗಡಿ ಬರುವುದೆಂದು ಜನಸಾಮಾನ್ಯರ ನಂಬಿಕೆ. ನೆಗಡಿ ಪದಕ್ಕೆ ಬದಲಾಗಿ ಶೀತ ಎಂಬ ಪದವನ್ನು ಸಹ ಉಪಯೋಗಿಸುತ್ತೇವೆ. 'ಬ್ರಿಟಿಷ್ ಮೆಡಿಕಲ್ ರಿಸರ್ಚ್ ಕೌನ್ಸಿಲ್‌' ಸಂಶೋಧನೆ ನಡೆಸಿ ಥಂಡಿಯಿಂದ ನೆಗಡಿ ಬರುತ್ತದೆ ಎಂಬುದಕ್ಕೆ ಆಧಾರ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದೆ. ಡಗ್ಲಾಸ್ ಮತ್ತು ಅವರ ಸಹ ಸಂಶೋಧಕರು 'ರ್ಹಿನೊವೈರಸ್ ಮಾದರಿ 15' ಎಂಬ ವೈರಸ್ ನೆಗಡಿಗೆ ಕಾರಣ ಎಂದು ತಿಳಿಸಿದರು. ಥಂಡಿ ಹವೆಯಿಂದ ಜನ ಮನೆಯಲ್ಲಿಯೇ ಹೆಚ್ಚಾಗಿ ಇರುತ್ತಾರೆ. ನೆಗಡಿಕಾರಕ ವೈರಸ್‌ಗಳು ಬೇಗ ಹರಡಲು ಶೀತ ಹವೆಅನುಕೂಲಕರವಾಗಿರುತ್ತದೆ. ಆದುದರಿಂದ ಥಂಡಿ ಕಾಲದಲ್ಲಿ ನೆಗಡಿ ಬರುವ ಸಾಧ್ಯತೆ ಹೆಚ್ಚು. ಥಂಡಿ ವಾತಾವರಣ ನೆಗಡಿಗೆ ನೇರ ಕಾರಣವಲ್ಲ.
ನೆಗಡಿಯಾದಾಗ ಘ್ರಾಣಶಕ್ತಿ ಕುಂಠಿತವಾಗುತ್ತದೆ. ಮೂಗಿನಲ್ಲಿ ಎರಡು ರಂಧ್ರಗಳಿವೆ. ಈ ರಂಧ್ರದ ಮೇಲ್ಭಾಗವು ವಾಸನೆಯನ್ನು ಗುರುತಿಸುವ ಸ್ಥಾನವಾಗಿದೆ. ಕೆಳಭಾಗದ ಮೂಲಕ ವಾಯು ಪ್ರವೇಶಿಸುವುದು, ಮೂಗಿನ ಒಳಭಾಗವೆಲ್ಲಾ ಶ್ಲೇಷ್ಮ ತ್ವಚೆಯಿಂದ ಆವರಿಸಿರುತ್ತದೆ. ಇದು ಯಾವಾಗಲೂ ಹಸಿಯಾಗಿರುತ್ತದೆ. ನೆಗಡಿಯಾದಾಗ, ನೀರಿನ ಅಂಶ ಹೆಚ್ಚಾಗುವುದರಿಂದ ಶ್ಲೇಷ್ಮ ತ್ವಚೆ ಹೆಚ್ಚು ದಪ್ಪವಾಗುವುದು. ಅದು ವಾಸನೆಯ ಅನಿಲದ ಬಾಷ್ಪವು ಶ್ಲೇಷ್ಮ ತ್ವಚೆಯಲ್ಲಿರುವ ಜ್ಞಾನವಾಹಿನಿ ನರಗಳಿಗೆ ತಲುಪುವುದಿಲ್ಲ. ಆದುದರಿಂದ ವಾಸನೆಯು ಸರಿಯಾಗಿ ತಿಳಿಯುವುದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com