ಅಪಘಾತದಲ್ಲಿ ಹೆತ್ತವರನ್ನು ಕಳೆದುಕೊಂಡು ಅನಾಥೆಯಾಗಿದ್ದ ನನ್ನ ಮದುವೆ 2004ರಲ್ಲಿ ನಡೆಯಿತು. ಪತಿ ಮನೆಯವರು ಮೋಸದಿಂದ ಅಪಘಾತದ ಸೆಟ್ಲಮೆಂಟ್ನಲ್ಲಿ ಬಂದ 5.25 ಲಕ್ಷ ರು.ಗಳನ್ನೂ ಪತಿ ಜಾಣತನದಿಂದ ತಮ್ಮದಾಗಿಸಿಕೊಂಡರು. ಅದಕ್ಕಿಂತ ನೋವಿನ ವಿಷಯ ಎಂದರೆ ಅವರೊಬ್ಬ ಗೋಸುಂಬೆ. ಮನೆಯವರೊಂದಿಗೆ ಸೇರಿಕೊಂಡು ನನ್ನನ್ನು ಹಿಂಸಿಸುತ್ತಾರೆ. ಇವರಿಂದ ಬಿಡುಗಡೆ ಪಡೆಯುವುದು ಹೇಗೆ?
- ರುಕ್ಕು, ಬೆಂಗಳೂರು
1 ವರ್ಷ ಮೊದಲು ಈ ಬಗ್ಗೆ ಯೋಚಿಸಿದ್ದರೆ ಪತಿ ಮತ್ತು ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಬಹುದಿತ್ತು. ಈಗ ವಿಚ್ಛೇದನವೇ ದಾರಿ. ಕಾನೂನು ಪ್ರಕ್ರಿಯೆ ನೆರವಿಗಾಗಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಅಥವಾ ಮಹಿಳಾ ಆಯೋಗವನ್ನು ಸಂಪರ್ಕಿಸಿ. ಅಲ್ಲಿ ನಿಮಗೆ ಸೂಕ್ತ ನೆರವು, ಮಾರ್ಗದರ್ಶನ ನೀಡುತ್ತಾರೆ.
ಡಾ. ಸ್ಯಾಟಲೈಟ್
anekaby2@gmail.com