ಯುಗಾದಿ ಎಂಬುದು ಚೈತ್ರ ಮಾಸದ ಮೊದಲನೆ ದಿನ. ಹಿಂದೂ ಪಂಚಾಂಗದ ಮೊದಲನೆ ದಿನ.
ಯುಗ ಎಂದರೆ ಅದೊಂದು ಕಾಲ ಗಣನೆ. ಕಾಲದ ಒಂದು ಭಾಗ ಮತ್ತೆ ಆರಂಭವಾಗುತ್ತಿದೆ ಎಂಬುದರ ಸೂಚನೆ.
ವಸಂತ ಋತುವಿನಿಂದ ಆರಂಭಗೊಂಡ ಕಾಲಗಣನೆ ಶಿಶಿರದಲ್ಲಿ ಮುಕ್ತಾಯಗೊಂಡು ಮತ್ತೆ ವಸಂತ ಆರಂಭವಾಗುತ್ತಿರುವ ಸೂಚನೆ.
ಈ ದಿನ ಶ್ರೀರಾಮನು ರಾವಣನನ್ನು ಜಯಿಸಿ ಮರಳಿ ಅಯೋಧ್ಯೆಗೆ ಬಂದು ರಾಜ್ಯಭಾರ ಮಾಡಿದನೆಂದು ಪ್ರತೀತಿ.