ಬೆಂಗಳೂರಿನ ಪ್ರತಿಷ್ಠಿತಸಂಗೀತ ಸಂಸ್ಥೆಯಾದ 'ಶ್ರೀ ಸದ್ಗುರು ಮ್ಯೂಸಿಕ್ ಅಕಾಡೆಮಿ' ತನ್ನ 20ನೆಯ ಸದ್ಗುರು ಸಂಗೀತೋತ್ಸವ ವನ್ನು ಹಮ್ಮಿ ಕೊಂಡಿದೆ. ಈ ಕಾರ್ಯಕ್ರಮವನ್ನು ಖ್ಯಾತ ಕವಿ ಎಂ.ಎನ್. ವ್ಯಾಸರಾವ್ ಉದ್ಘಾಟಿಸುವರು. ಪಂ. ವಿ.ಎಂ. ನಾಗರಾಜ್, ಪಂ. ಮೃತ್ಯುಂಜಯ ಶೆಟ್ಟರ್, ಲಹರಿವೇಲು ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಮನು ಬಳಿಗಾರ್ ವಹಿಸುವರು. ಇದೇ ಸಂದರ್ಭದಲ್ಲಿ ನಮ್ಮ ನಾಡಿನ ಖ್ಯಾತ ತಬಲಾ ವಾದಕರಾದ ಪಂ. ಎನ್.ಎಸ್ ಗುಂಡಾಶಾಸ್ತ್ರಿಯವರಿಗೆ 'ನಾದಶ್ರೀ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಈ ಸಂದರ್ಭದಲ್ಲಿ ಅಕಾಡೆಮಿಯ ವಿದ್ಯಾರ್ಥಿಗಳು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ತಬಲಾ ವಾದನ, ಕೀಬೋರ್ಡ್ ವಾದನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.
ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.
ರಸ್ತೆ, ಬೆಂಗಳೂರು.
ಸಮಯ: ಸಂಜೆ 4 ಗಂಟೆ.
ದಿನಾಂಕ: 13.04.2013 ಶನಿವಾರ