22ರ ತರುಣಿ. ಪಕ್ಕದ ಮನೆಯ ಅಂಕಲ್ ಮೇಲೆ ಕ್ರಷ್ ಆಗಿದೆ. ಅವರನ್ನು ಕೂಡುವ ಬಯಕೆ. ನನಗಾಗಿ ಅವರು ಹೆಂಡತಿ, ಮಗಳನ್ನು ಬಿಡಲೂ ಸಿದ್ಧರಿದ್ದಾರೆ. ಆದರೂ ಮನದಲ್ಲಿ ಒಂಥರಾ ತಲ್ಲಣ. ಏನು ಮಾಡಲಿ?
- ಪರಿಣಿತಿ ಎಸ್., ಮೈಸೂರು
ಹತ್ತಾರು ವರ್ಷ ಸಂಸಾರ ಸುಖ ನೀಡಿದವಳನ್ನು ನಿಮಗಾಗಿ ಬಿಡಲು ಸಿದ್ಧರಿರುವವರು ನಾಳೆ ನಿಮಗಿಂತ ಸಣ್ಣ ಪ್ರಾಯದ ಅಥವಾ ಸುಂದರ ಯುವತಿ ಸಿಕ್ಕರೆ ನಿಮ್ಮನ್ನೂ ಬಿಡುವುದಿಲ್ಲ ಎಂಬ ನಂಬಿಕೆ ಏನು? ನಿಮ್ಮಿಬ್ಬರ ಸಂಬಂಧವನ್ನು ಸಮಾಜವನ್ನು ಹೇಗೆ ಸ್ವೀಕರಿಸಬಲ್ಲದು ಯೋಚಿಸಿದ್ದೀರಾ? ಕ್ಷಣಿಕ ಸುಖದಿಂದ ಜೀವನಮಾನವಿಡೀ ನರಳಾಟ ಅಥವಾ ಮದುವೆಯಾಗಿ, ಗಂಡನೊಟ್ಟಿಗೆ ಬದುಕಿನುದ್ದಕ್ಕೂ ಸ್ವರ್ಗ ಸುಖ. ಆಯ್ಕೆ ನಿಮ್ಮದೇ.
-ಡಾ. ಸ್ಯಾಟಲೈಟ್
anekaby2@gmail.com
ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...