ಬೈಟುಕಾಫಿ

ಆರೋಪ ಪಟ್ಟಿ ಸಲ್ಲಿಸುವಿಕೆ

Published On :

ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ ನಂತರ 90 ದಿನಗಳೊಳಗೆ (3 ತಿಂಗಳೊಳಗೆ ತನಿಖೆ ಪೂರ್ಣಗೊಳಿಸಬೇಕು) ಪೊಲೀಸರು ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.
ಅಂದರೆ ದೂರು ದಾಖಲಿಸಿ ಆರೋಪಿ ಬಂಧನದ, ವಿಚಾರಣೆ ನಂತರ ಆತನ ವಿರುದ್ಧ ಆರೋಪ ಸಾಬೀತಾದಲ್ಲಿ ಹಾಗೂ ಅದಕ್ಕೆ ಸಂಬಂಧಿಸಿದ ಪೂರಕ ಸಾಕ್ಷಿಗಳ ಪಟ್ಟಿಯನ್ನು ಸಿದ್ಧಪಡಿಸಿ ನ್ಯಾಯಾಲಯಕ್ಕೆ ನೀಡುವುದೇ ಆರೋಪ ಪಟ್ಟಿ.
ಇದರಲ್ಲಿ ಆರೋಪಿಗಳ/ಯ ಹೆಸರು, ಅವರನ್ನು ಬಂಧಿಸಲಾಗಿದೆಯೇ ಇಲ್ಲವೇ?, ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆಯೇ, ಜೈಲಿನಲ್ಲಿದ್ದಾನೆಯೇ?, ಕಕ್ಷಿದಾರರು ಯಾರು ಎಂಬಿತ್ಯಾದಿ ಮಾಹಿತಿ ಹೊಂದಿರಬೇಕು. ಈ ಆರೋಪ ಪಟ್ಟಿಯನ್ನು ದೋಷಾರೋಪ ಪಟ್ಟಿ ಅಥವಾ ಇಂಗ್ಲೀಷ್ನಲ್ಲಿ ಚಾರ್ಜ್ಶೀಟ್ ಎಂದು ಕರೆಯುತ್ತಾರೆ.
ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸಿದ ನಂತರ ಪ್ರಕರಣ ಮುಕ್ತಾಯವಾಯಿತೆಂದು ಅರ್ಥವಲ್ಲ. ಒಂದು ವೇಳೆ ಅಗತ್ಯಬಿದ್ದಲ್ಲಿ ತನಿಖೆಯನ್ನು ಮತ್ತೆ ಮುಂದುವರೆಸಬಹುದು. ಅದಕ್ಕೂ ಮುನ್ನ ನ್ಯಾಯಾಧೀಶರ ಒಪ್ಪಿಗೆ ಅತ್ಯಗತ್ಯ.
ಚಾರ್ಜ್ ಶೀಟ್ ಸಲ್ಲಿಸಿದ ನಂತರ ನ್ಯಾಯಾಲಯದಲ್ಲಿ ವಿಚಾರಣೆ ಆರಂಭ ಮಾಡಬಹುದು. ಎಫ್ಐಆರ್ ದಾಖಲಾದ ನಂತರ ತನಿಖೆ ಆರಂಭ ಮಾಡಲು ಪೊಲೀಸರಿಗೆ ಅಧಿಕಾರವಿರುತ್ತದೆ. ಆರೋಪ ಪಟ್ಟಿ ಸಲ್ಲಿಸಿದ ನಂತರ ಅದು ವಿಚಾರಣೆಗೆ ಸಹಾಯ ಮಾಡುತ್ತದೆ.



-  ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.