ಹೆರು, ಹೆರು, ಹೆರುತ್ತಲೇ ಇರು...
ನಮ್ಮನ್ನು ಅನಾರೋಗ್ಯಕ್ಕೆ ದೂಡುವ ಆಕ್ಸಿಡೆಂಡ್ಗಳು ಅಥವಾ ವಿಷಾಣುಗಳು ಶರೀರದಲ್ಲಿ ಉತ್ಪತ್ತಿಯಾಗುವುದಾದರೂ ಹೇಗೆ? ಅವುಗಳ ಮೂಲವಾದರೂ ಎಲ್ಲಿ? ಆಕ್ಸಿಡೆಂಡ್ಗಳು ವಿವಿಧ ರೂಪಗಳಲ್ಲಿ ಜನ್ಮ ತಾಳುತ್ತವೆ. ಕೆಲವು ಆಕ್ಸಿಡೆಂಡ್ಗಳು ಶರೀರದಲ್ಲಿ ಸ್ವಾಭಾವಿಕವಾಗಿ ನಡೆಯುವ ಚಯಾಪಚಯ ಪ್ರಕ್ರಿಯೆಯಲ್ಲಿ ಹುಟ್ಟಿಕೊಳ್ಳುತ್ತವೆ. ಉಸಿರಾಟ, ರೋಗ ನಿರೋಧಕ ಪ್ರತಿಕ್ರಿಯೆಗಳಂತಹ ಸಹಜಾತಿಸಹಜ ಕ್ರಿಯೆಯಲ್ಲೂ ಇವು ಜನ್ಮ ತಳೆದಾವು. ಅವು ಅಷ್ಟು ಅನಾಹುತಕಾರಿಯಲ್ಲ. ಹೊರಗಿನಿಂದ ಬರುವ ಆಕ್ಸಿಡೆಂಡ್ಗಳು ಅತ್ಯಂತ ಅಪಾಯಕಾರಿಯಾದವು. ಯಾವುದೇ ಬಗೆಯ ವಿಕಿರಣಗಳು, ವಾಯು ಮಾಲಿನ್ಯ, ಕೈಗಾರಿಕೆ ತ್ಯಾಜ್ಯ, ರೈತರು ಬಳಸುವ ಕೀಟನಾಶಕಗಳು, ಧೂಮಪಾನ, ಡ್ರಗ್ಸ್ ಮೊದಲಾದವುಗಳು ಆಕ್ಸಿಡೆಂಟ್ಗಳನ್ನು ಅತ್ಯಂತ ಸಲೀಸಾಗಿ ನಮ್ಮ ಶರೀರಕ್ಕೆ ರವಾನೆ ಮಾಡುತ್ತಿರುತ್ತವೆ. ಒಂದು ಸಿಗರೇಟ್ ಸೇದುತ್ತೀರಿ ಅಂತಾದರೆ ನಿಮ್ಮನ್ನು ಅಪಾಯಕಾರಿ ರಾಸಾಯನಿಕಗಳಿಗೆ ಒಪ್ಪಿಸಿಕೊಂಡು ಅಪಾಯವನ್ನು ಆಹ್ವಾನಿಸಿದಂತೆಯೇ.
ಆಕ್ಸಿಡೆಂಟ್ಗಳು ಹೇಗೆ ಸೃಷ್ಟಿಯಾಗುತ್ತವೆ ಎನ್ನುವುದರ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ. ಹಲವಾರು ವಾದಗಳೂ ಹುಟ್ಟಿಕೊಳ್ಳುತ್ತಲೇ ಇವೆ. ಅವುಗಳ ಪೈಕಿ ಈವರೆಗಿನ ಸರ್ವಾನುತದಿಂದ ಒಪ್ಪಿತ ವಿಚಾರ ಎಂದರೆ ಆಮ್ಲಜನಕಮುಕ್ತ ಮೂಲಧಾತುಗಳೇ ಆಕ್ಸಿಡೆಂಟ್ಗಳನ್ನು ಹುಟ್ಟಿಹಾಕುತ್ತವೆ ಎನ್ನುವುದು. ಇಂಥ ಧಾತುಗಳು ಸಿಕ್ಕಾಪಟ್ಟೆ ಕ್ರಿಯಾಶೀಲವಾಗಿರುವುದು ಮಾತ್ರವಲ್ಲ, ತೊಂದರೆ ಕೊಡಲು ಕಾಯುತ್ತಿರುತ್ತವೆ. ಅಣು ಅಥವಾ ಧಾತುಗಳು ತಮ್ಮನ್ನು ರಾಸಾಯನಿಕವಾಗಿ ಸುಸ್ಥಿರವಾಗಿಡುವ ಎಲೆಕ್ಟ್ರಾನುಗಳನ್ನು ಕಳೆದುಕೊಳ್ಳುವ ಮೂಲಕ ಆಕ್ಸಿಡೆಂಟ್ಗಳು ಹುಟ್ಟಿಕೊಳ್ಳುತ್ತವೆ. ತಮ್ಮ ಸಂಗಾತಿಯ ಹುಡುಕಾಟದಲ್ಲಿ ಅವು ಎಲ್ಲಿಂದಲಾದರೂ ಆರೋಗ್ಯಶಾಲಿ ಕೋಶಗಳನ್ನು ಸೆಳೆದುಕೊಳ್ಳುತ್ತವೆ. ಹೀಗೆ ಆಮ್ಲಜನಕ ರಹಿತವಾದ ಮತ್ತಷ್ಟು ಕಣಗಳನ್ನು...ಅಲ್ಲಲ್ಲ...ಕಣಗಳ ಪಡೆಯನ್ನು ಸೃಷ್ಟಿಸುತ್ತಲೇ ಸಾಗುತ್ತವೆ. ಶಕ್ತಿಶಾಲಿ ಕೋಶವನ್ನು ದುರ್ಬಲಗೊಳಿಸುವುದು ಕ್ಷಣಮಾತ್ರದಲ್ಲಿ ನಡೆಯುವ ಪ್ರಕ್ರಿಯೆ. ಅಂಥ ಸರಣಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಡಾ.ಹೆಲ್ಮೆಟ್ ಪ್ರಕಾರ, 'ಹೆರು, ಹೆರು ಮತ್ತು ಹೆರುತ್ತಲೇ ಇರು' ಎನ್ನುವಂಥ ಕ್ರಿಯೆ ಇದು.
ಆಮ್ಲಜನಕ ಮುಕ್ತ ಧಾತುಗಳು ನಮ್ಮ ವಂಶವಾಹಿ ಅಂದರೆ ಡಿಎನ್ಎಯನ್ನೇ ವಿರೂಪಗೊಳಿಸಬಲ್ಲವು. ಡಿಎನ್ಎ ವಿರೂಪವೇ ಕ್ಯಾನ್ಸರ್ನ ಮೊದಲ ಹಂತ. ಇನ್ನೂ ಆತಂಕಕಾರಿ ಸಂಗತಿ ಏನೆಂದರೆ ಕೋಶಗಳ ಬಲಿಷ್ಠ ಪೊರೆಗಳನ್ನೂ ಇವು ಸುಲಭವಾಗಿ ನಿರ್ಮೂಲನೆ ಮಾಡಬಲ್ಲವು. ಕೋಶದ ಮೇಲ್ಭಾಗದಲ್ಲಿರುವ ಆ ಪೊರೆ ನಾಶವಾದಾಗಲೇ ದೇಹದೊಳಗಿನ ಆ ಅಂಗದಿಂದ ವಾಸನೆ ಬರಲು ಶುರುವಾಗುವುದು. ಅದನ್ನೇ ವೈದ್ಯಕೀಯವಾಗಿ ಪೆರಾಕ್ಸಿಡೈಸ್ಡ್ ಅನ್ನುತ್ತಾರೆ. ಈ ಪ್ರಕ್ರಿಯೆಗೆ ತುತ್ತಾದ ಕೋಶ ಟಾರ್ಚ್ ಥರ. ಅವು ಮತ್ತಷ್ಟು ಕೋಶಗಳನ್ನು ಪೆರಾಕ್ಸಿಡೈಸ್ಡ್ಗೆ ಒಳಪಡಿಸುವ ಸಾಮರ್ಥ್ಯ ಪಡೆದಿರುತ್ತವೆ. ದೇಹದಲ್ಲಿನ ಎಲ್ಲ ಆರೋಗ್ಯವಂತ ಅಣುಗಳನ್ನೂ ಈ ಕ್ರಿಯೆಗೆ ಒಳಪಡಿಸಿದ ನಂತರವಷ್ಟೇ ಆಮ್ಲಜನಿಕ ಮುಕ್ತ ಆಕ್ಸಿಡೆಂಟ್ಗಳ 'ಹೆರುವ ಪ್ರಕ್ರಿಯೆ'ಗೆ ಕೊನೆ ಬೀಳುವುದು. ಅಷ್ಟರಲ್ಲಿ ನಮ್ಮ ಆರೋಗ್ಯದ ಸ್ಥಿತಿ ಹೇಗಾಗಿರಬೇಡ?
ಮೊ.9900113699 (ಎಸ್ಎಂಎಸ್ಗೆ ಮಾತ್ರ)
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

