ಪುರಾಣ ಕಾಲದ ಅಪ್ರಿಯ ಸತ್ಯವಲ್ಲವೆ?
ಇದೆಂಥ ಮಾರ್ಗದರ್ಶನ?
ಪ್ರತಿಯೊಬ್ಬ ಪುರುಷ ಹಾಗೂ ಸ್ತ್ರೀಯರಿಗೆ ಲೈಂಗಿಕ ಬಯಕೆ ಇರುವುದು ಸಹಜ. ಬಯಕೆ ಇದೆ ಎಂದು ಬಿಡಾಡಿ ನಾಯಿಗಳ ಹಾಗೆ ವಿವಾಹ ಪೂರ್ವ ಲೈಂಗಿಕ ಸಂಪರ್ಕ ಹೊಂದುವುದು ಮಹಾ ಅಪರಾಧವೇ ಎಂದರೂ ತಪ್ಪಲ್ಲ. ಅಲ್ಲ ಸ್ವಾಮಿ, ವಿದ್ಯೆ ಕಲಿಯಲು, ಬುದ್ಧಿ ಪಡೆಯಲು ತಂದೆ ತಾಯಿ ಕಾಲೇಜುಗಳಿಗೆ ಕಳುಹಿಸಿದರೆ ಸಂಘ ದೋಷದಿಂದ ಮೋಜಿಗಿಳಿದು 'ಮಜಾಕ ಮಜಾಕ ಮೆ ರಜಾಕ ಮರ್ಯಾ' ಎನ್ನುವ ಹಾಗೆ ಮೋಜಿನ ಮದದಲ್ಲಿ ವಿವಾಹಪೂರ್ವ ಲೈಂಗಿಕ ಸಂಪರ್ಕ ಹೊಂದಿ ಸಮಾಜದ ಮುಂದೆ ಇಡೀ ಕುಟುಂಬ ತಲೆ ಬಾಗುವ ಹಾಗೆ ಮಾಡುವ ಈ ಸಂಸ್ಕೃತಿ ನಮಗೆ ಬೇಡ. ಈ 21 ನೇ ಶತಮಾನದಲ್ಲಿ ಹದ ಇದ್ದಾಗ ಕದ ಬಡಿದು ತಮ್ಮ ಬಯಕೆಯನ್ನು ತೀರಿಸಿಕೊಳ್ಳುವ ಪುರುಷ ಮತ್ತು ಸ್ತ್ರೀ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗದಿರುವುದೇ ಕ್ಷೇಮ.
-ಶಫೀಅಹ್ಮದ ಅಂಕಲಗಿ, ಬೈಲಹೊಂಗಲ
ಆಗಲೂ ಇರಲಿಲ್ಲವೆ?
ಸನಾತನ ಸಂಸ್ಕೃತಿಯಲ್ಲಿ ನಿಷೇಧದ ಭೀತಿಯಿದ್ದರೂ ವಿವಾಹ ಪೂರ್ವ ಲೈಂಗಿಕತೆಯೆನ್ನುವುದು ಪುರಾಣ ಕಾಲದಿಂದಲೂ ಕಾಣಸಿಗುವ ಅಪ್ರಿಯ ಸತ್ಯ. ವಿವಾಹ ಪೂರ್ವ ಲೈಂಗಿಕತೆಯು ಹದಿಹರಯದಲ್ಲಿ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದ್ದರೂ ಸ್ವೇಚ್ಛೆಯಲ್ಲೇ ಜೀವನ ಧನ್ಯತೆ ಕಾಣುವ ಆತುರ ಯುವ ಪೀಳಿಗೆಯ ಮನಸ್ಥಿತಿಯಾಗಿರುವುದು ದುರಂತ. ವಿವಾಹ ಪೂರ್ವ ಲೈಂಗಿಕತೆ, ವಿವಾಹೇತರ ಸಂಬಂಧಗಳು ಬಹಿರಂಗವಾದಾಗ ಖಂಡಿತವಾಗಿಯೂ ಕುಟುಂಬ ವ್ಯವಸ್ಥೆಯನ್ನು ನುಚ್ಚುನೂರುಗೊಳಿಸುತ್ತದೆ. ಹಾಗೆಲ್ಲಾ ಆಗಲೇ ಬಾರದೆಂದಾದರೆ ಮೊದಲು ನೈತಿಕ ಶಿಕ್ಷಣವನ್ನು ನಾವು ಇಷ್ಟಪಟ್ಟು ಕಲಿಯಬೇಕು ಮತ್ತು ನಮ್ಮ ಮನೆಯವರೂ, ನಮ್ಮ ಜತೆಗಾರರೂ ಇಷ್ಟ ಪಡುವಂತೆ ಪ್ರಯತ್ನಿಸಬೇಕು. ಆದರ್ಶ ಜೀವನ ನಡೆಸುತ್ತೇವೆ ಎಂದು ಸಂಕಲ್ಪಿಸಿ ನಡೆದರೆ ನಮಗೇ ಒಳಿತು.
-ಮಹೇಶ್ಮೂರ್ತಿ, ಸುರತ್ಕಲ್
ಈ ಪದ್ಧತಿ ತರವೆ?
ವಿವಾಹ ಪೂರ್ವ ಲೈಂಗಿಕತೆ ತರವಲ್ಲ. ಅದು ನಮ್ಮ ಸಂಸ್ಕೃತಿಗೆ ಒಗ್ಗುವುದಿಲ್ಲ. ಕಾಮದ ಹಸಿವೆಯನ್ನು ತೀರಿಸಿಕೊಳ್ಳಲೆಂದೇ ವಿವಾಹವೆಂಬ ವ್ಯವಸ್ಥೆಯನ್ನು ನಮ್ಮ ಹಿರಿಯರು ಮಾಡಿದ್ದು. ಯಾವುದೇ ಹೆಣ್ಣು-ಗಂಡು ಒಪ್ಪಿಗೆ ಇದ್ದರೆ ವಿವಾಹಕ್ಕೂ ಮುನ್ನ ಲೈಂಗಿಕ ಕ್ರೀಡೆಯಲ್ಲಿ ತೊಡಗಬಹುದು ಎಂದು ನಮ್ಮ ನ್ಯಾಯಾಲಯಗಳೇ ಸಮ್ಮತಿ ಸೂಚಿಸಿದರೂ ಕೂಡ ಭಾರತೀಯ ಸಂಸ್ಕೃತಿಗೂ, ನಮ್ಮ ಆಚಾರ-ವಿಚಾರಗಳಿಗೂ,ನಂಬಿಕೆಗಳಿಗೂ ವಿವಾಹ ಪೂರ್ವ ಲೈಂಗಿಕತೆ ಸಮಂಜಸವಾದುದಲ್ಲ. ಅದು ಹೆಣ್ಣಿರಲಿ, ಗಂಡಿರಲಿ. ಮದುವೆಗೂ ಮುನ್ನವೇ ಹಾಸಿಗೆ ಹಂಚಿಕೊಂಡವರು ಮದುವೆಯ ನಂತರ ಪರಸ್ಪರ ನಿಷ್ಠೆಯಿಂದಿರುವುದು ಅನುಮಾನ. ಆದರೆ ಈ ಪದ್ಧತಿ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಇದೂ ರೂಢಿಗೆ ಬರುತ್ತಿರುವುದು ವಿಪರ್ಯಾಸ.
-ಬಿ.ಸೋಮಶೇಖರ್, ಸುರಪುರ
'ಜಗುಲಿ'ಯಲ್ಲಿ ಮುಂದಿನ ವಾರದ ವಿಷಯ 'ವಾಸ್ತು ಬೇಕೆ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

