ಮನಸ್ಸಿಗೆ ಅರ್ಥ ಮಾಡಿಸಿ
ಅದೇನು ಮಹಾ? ನಾನದನ್ನು ಮಾಡಿಯೇ ಮಾಡುತ್ತೇನೆ. ಅದು ನನ್ನಿಂದ ಖಂಡಿತಾ ಸಾಧ್ಯವಾಗುತ್ತದೆ. ಹೀಗೊಮ್ಮೆ ಹೇಳಿಕೊಳ್ಳಿ. ಮತ್ತೆ ಮತ್ತೆ ಅದನ್ನೇ ಹೇಳುತ್ತಾ ಇರಿ. ಅದೆಂಥದ್ದೇ ಸಾಹಸವಾಗಿರಬಹುದು. ನೀವದನ್ನು ಸಾಧಿಸದಿದ್ದರೆ ಕೇಳಿ. ಕೊನೇಪಕ್ಷ ಯಶಸ್ಸಿನ ಬಾಗಿಲಲ್ಲಿಯಾದರೂ ಬಂದು ನಿಂತಿರುತ್ತೀರಿ. ಗೆಲುವಿನ ಗುಟ್ಟೇ ಅದು. ಮೊದಲು ನಮ್ಮನ್ನು ನಾವು ಕನ್ವಿನ್ಸ್ ಮಾಡಿಸಿಕೊಳ್ಳಬೇಕು. ಅಷ್ಟಾದರೆ ಅರ್ಧ ಕೆಲಸ ಆದಂತೆಯೇ.
ನಮಗೆ ತಿಳಿಹೇಳಲು ನಮಗಿಂತ ಸಮರ್ಥ ವ್ಯಕ್ತಿ ಈ ಜಗತ್ತಿನಲ್ಲಿ ಬೇರಾರೂ ಇಲ್ಲ. ನಮಗೆ ನಾವೇ ವಿಷಯವನ್ನು ಅರ್ಥ ಮಾಡಿಸಬೇಕು. ಆಗ ಮಾತ್ರ ಅದರ ಒಳ ಹೊರಗನ್ನು ಸಂಪೂರ್ಣ ನಾವು ಅರಗಿಸಿಕೊಳ್ಳಲು ಸಮರ್ಥರಾಗುತ್ತೇವೆ. ಆಗಲೇ ಸೂಕ್ತವಾದುದೊಂದು ಯೋಜನೆ ಮನದಲ್ಲಿ ಮೂಡಲಾರಂಭಿಸುತ್ತದೆ. ಇದು ಅಂತಲೇ ಅಲ್ಲ. ಅದ್ಯಾವುದೇ ವಿಚಾರ ಇರಬಹುದು. ಮನಸ್ಸನ್ನು ಹೇಳಿದಂತೆ ಕೇಳಿಸುವುದು ನಮ್ಮ ಕೈಯಲ್ಲೇ ಇದೆ. ಮತ್ತೆ ಅದಕ್ಕಿರುವುದು ಏಕೈಕ ಮಾರ್ಗ. ಒಂದು ತಿಳಿದುಕೊಳ್ಳಿ, ಮನಸ್ಸೆಂಬುದು ಬಡ ಪೆಟ್ಟಿಗೆ ಬಗ್ಗುವ ಜಾಯಮಾನದ್ದಲ್ಲ. ಬಹುತೇಕ ವಿಚಾರಗಳು ಒಂದು ಬಾರಿ ಹೇಳಿದರೆ ಅದಕ್ಕೆ ಅರ್ಥವೂ ಆಗುವುದಿಲ್ಲ. ಹೀಗಾಗಿ ಮೇಲಿಂದ ಮೇಲೆ ಅದನ್ನು ಹೇಳುತ್ತಲೇ ಇರುತ್ತದೆ. ಅದರಲ್ಲೂ ಬೇರೆಯವರು ಹೇಳದ್ದಕ್ಕಿಂತ ನಾವು ಹೇಳಿದ್ದರ ಮೇಲೆಯೇ ಅದಕ್ಕೆ ಹೆಚ್ಚು ನಂಬಿಕೆ. ಹೀಗಾಗಿ ನಾವದಕ್ಕೆ ಮತ್ತೆ ಮತ್ತೆ ಹೇಳುತ್ತಲೇ ಇರಬೇಕಾಗುತ್ತದೆ. ಅದ್ಯಾವುದೋ ಗಳಿಗೆಯಲ್ಲಿ ಕೆಟ್ಟದೊಂದು ಅಭ್ಯಾಸ ನಮಗೆ ಅಂಟಿಕೊಂಡಿರುತ್ತದೆ. ಯಾವುದೋ ಕೆಟ್ಟ ಸ್ವಭಾವವನ್ನು ರೂಢಿಸಿಕೊಂಡಿರುತ್ತೇವೆ. ಎಂಥದ್ದೋ ದುರಭಿಪ್ರಾಯ ನಮ್ಮನ್ನು ಆವರಿಸಿ ಬಿಡುತ್ತದೆ. ನಮಗೆ ಗೊತ್ತು, ಅದು ಒಳ್ಳೆಯದಲ್ಲ ಅಂತ. ಅದರಿಂದ ನಾವು ಹೊರಬರಲಾಗುತ್ತಲೇ ಇಲ್ಲ ಎಂದಿಟ್ಟುಕೊಳ್ಳಿ. ಅದಕ್ಕೊಂದು ಸುಲಭದ ಪರಿಹಾರವೆಂದರೆ ಅದರ ವಿರುದ್ಧ ಮೇಲಿಂದ ಮೇಲೆ ಮಾತನಾಡುತ್ತಲೇ ಇರುವುದು. ಇಲ್ಲ ನನಗೆ ಕತ್ತಲೆ ಕಂಡರೆ ಭಯವಿಲ್ಲ, ನಾನು ಕೋಪಿಷ್ಟನಲ್ಲ. ಯಾವುದೇ ಕಾರಣಕ್ಕೂ ನಾನು ಕೋಪ ಮಾಡಿಕೊಳ್ಳುವುದಿಲ್ಲ... ಹೀಗೆ ನಮ್ಮಲ್ಲಿರಬಹುದಾದ ದುರ್ಗುಣಗಳ ವಿರುದ್ಧ ನಮಗೆ ನಾವೇ ಹೇಳಿಕೊಳ್ಳುತ್ತ ಬಂದರೆ ನಮಗರಿವಿಲ್ಲದಂತೆಯೇ ನಾವು ಬದಲಾಗಿಬಿಟ್ಟಿರುತ್ತೇವೆ. ಅದನ್ನೇ ಮನಸ್ಸು ಎನ್ನುವುದು.
-ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

