ನುಗ್ಗಿ ನಡೆ, ಏಕಾಂಗಿಯಾಗಿ!
ಸ್ವಾಮಿ ವಿವೇಕಾನಂದರು ಪರಿವ್ರಾಜಕರಾಗಿ ದಿಲ್ಲಿಯಲ್ಲಿ ಸುತ್ತಾಡುತ್ತಿದ್ದಾರೆ. 'ಭಾರತದ ಪುರಾತನ ರೋಮ್' ಎಂಬಂತೆ ಭಾಸವಾಗುವ ದಿಲ್ಲಿಯಲ್ಲಿ ಏಕಾಂಗಿಯಾಗಿ ಚಾರಿತ್ರಿಕ ಸ್ಥಳಗಳನ್ನು ನೋಡುತ್ತಾ ತಮ್ಮ ಕಲ್ಪನೆಯಲ್ಲಿ ಮುಳುಗಿದ್ದಾಗ, ಅನಿರೀಕ್ಷಿತವಾಗಿ ಸ್ವಾಮೀಜಿ ಮೀರತ್‌ನಲ್ಲಿ ಬೀಳ್ಕೊಟ್ಟಿದ್ದ ಗುರುಭಾಯಿಗಳನ್ನು ಭೇಟಿ ಮಾಡಿದರು. ಸ್ವಾಮೀಜಿಯನ್ನು ಕಂಡು ಅವರಿಗೆ ಸಂತೋಷವಾಯಿತು. ಆದರೆ ಅವರು ತಮ್ಮನ್ನು ಬೇಕೆಂದೇ ಹಿಂಬಾಲಿಸಿ ಬರುತ್ತಿದ್ದಾರೆ ಎಂದು ಭಾವಿಸಿದ ಸ್ವಾಮೀಜಿ, 'ನೋಡಿ, ನಾನಾಗಲೇ ನಿಮಗೆ ಸ್ಪಷ್ಟವಾಗಿ ಹೇಳಿದ್ದೇನೆ. ನಾನು ಮಾಡಬೇಕಾದ ಕೆಲಸವಿದೆ. ಆದ್ದರಿಂದ ಯಾರೂ ನನ್ನನ್ನು ಹಿಂಬಾಲಿಸಿ ಬರಬೇಡಿ. ನನ್ನಷ್ಟಕ್ಕೆ ನನ್ನನ್ನು ಬಿಟ್ಟುಬಿಡಿ ಎಂದು. ಈಗ ನಾನು ದಿಲ್ಲಿಯಿಂದ ಹೊರಡುತ್ತಿದ್ದೇನೆ, ನನ್ನನ್ನು ನೀವು ಹಿಂಬಾಲಿಸಕೂಡದು. ಇಷ್ಟರ ಮೇಲೆ ಯಾರಾದರೂ ಹಿಂಬಾಲಿಸಿ ಬಂದದ್ದೇ ಆದರೆ ಅವರು ಅಪಾಯಕ್ಕೆ ಸಿದ್ಧರಾಗಿರಬೇಕಾಗುತ್ತದೆ, ಅಷ್ಟೆ. ನನ್ನ ಆತ್ಮ ಕರೆದೊಯ್ದಲ್ಲಿಗೆ ಹೋಗುತ್ತೇನೆ. ಅದು ಅರಣ್ಯವಾಗಿರಲಿ, ಮರುಭೂಮಿಯಾಗಿರಲಿ ಅಥವಾ ನಗರವಾಗಿರಲಿ... ನಾನು ಹೊರಟೆ' ಎಂದು ಛೇಡಿಸಿದರು. ವಿವೇಕಾನಂದರು ಗುರುಭಾಯಿಗಳಿಂದ ಬೀಳ್ಕೊಂಡು ಏಕಾಂಗಿಯಾಗಿ ರಜಪೂತರ ನಾಡಿನ ಕಡೆಗೆ ಹೊರಟರು. 'ಸ್ವಾಮೀಜಿಯ ಹೃದಯವು ತಾನು ಪೂರೈಸಬೇಕಾದ ದಿವ್ಯೋದ್ದೇಶದ ಸಾಧನೆಗಾಗಿ ತೀವ್ರ ವ್ಯಾಕುಲಗೊಂಡಿದೆ; ಜಗನ್ಮಾತೆಯ ಇಚ್ಛೆಯಂತೆ ಸ್ವಾಮೀಜಿಯನ್ನು ಅವರಷ್ಟಕ್ಕೆ ಬಿಟ್ಟುಬಿಡಬೇಕು' ಎಂಬುದು ಗುರುಭಾಯಿಗಳಿಗೆ ಮನವರಿಕೆಯಾಯಿತು. ಅವರು ಸಂತೋಷಚಿತ್ತರಾಗಿ, ಭಾರ ಹೃದಯದಿಂದ ಸ್ವಾಮೀಜಿಯನ್ನು ಬೀಳ್ಕೊಟ್ಟರು.
-ಆನಂದ ಎಸ್.ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

