ಬೈಟುಕಾಫಿ

ಗಾಳಿ ಬೆಳಕು ಸಿಗುತ್ತಿದೆ

Published On :

ವಾಸ್ತು ನಮಗೆ ಪರಿಚಯವಾಗಿ 25 ವರುಷಕ್ಕಿಂತ ಹೆಚ್ಚು ಸಮಯ ಕಳೆದಿದೆ. ಇದರ ಫಲದಿಂದ ಈಗ ಎಲ್ಲೆಲ್ಲೂ ಹೊಸ ಕಟ್ಟಡ ಕಟ್ಟುವವರು ವಾಸ್ತುವಿನ ಮೊರೆ ಹೋಗುತ್ತಿದ್ದಾರೆ. ವಾಸ್ತು ಅಳವಡಿಸುವುದರಿಂದ ನೆಮ್ಮದಿಯ ಜೀವನ, ಆರೋಗ್ಯ, ಅಧಿಕಾರ, ವ್ಯಾಪಾರ, ಆಸ್ತಿ ಖರೀದಿ ಮತ್ತು ಹೇರಳ ಹಣ ಸಂಪಾದಿಸಿ ಸುಖವಾಗಿ ಇರಬಹುದು ಎನ್ನುವ ನಂಬಿಕೆ. ವಾಸ್ತು ಶಾಸ್ತ್ರದಲ್ಲಿ ವಿಶೇಷ ಶಕ್ತಿ ಇದೆ. ವಾಸ್ತು ವೈಜ್ಞಾನಿಕವಾದದ್ದೇ ಆಗಿದೆ. ಅದರ ತತ್ವದ ಮೇಲೆಯೇ ಆಯ ಮಾಡಿಸುವುದು. ದಿಕ್ಕುಗಳನ್ನು ಗುರುತಿಸಿ ಉಪಯುಕ್ತ ಕೋಣೆ ಕಟ್ಟಿಸುವುದು, ಎತ್ತರ ಗೋಡೆ ನಿರ್ಮಾಣ, ಪರಿಸರ ಗುರುತಿಸಿ ಸೈಟು ಖರೀದಿ ಮಾಡುವುದು ಇತ್ಯಾದಿ. ವಾಸ್ತುವಿನ ಪರಿಣಾಮವಾಗಿ ಗಾಳಿ-ಬೆಳಕು ಯಥೇಚ್ಛವಾಗಿ ಸಿಗುವ ಹಾಗೆ ವಿವಿಧ ವಿನ್ಯಾಸದಲ್ಲಿ ಮನೆ ಕಟ್ಟುತ್ತಿದ್ದಾರೆ. ಅದರಿಂದ ವಾಸ್ತು ಖಂಡಿತಾ ಬೇಕು. ವಾಸ್ತು ಮೂಢನಂಬಿಕೆ ಖಂಡಿತಾ ಅಲ್ಲ. ಅದಕ್ಕೆ ವೈಜ್ಞಾನಿಕ ಹಿನ್ನೆಲೆ ಮತ್ತು ಕಾರಣಗಳು ಇವೆ. ನಾವು ಅದನ್ನು ಅರ್ಥಮಾಡಿಕೊಂಡು ಪಾಲಿಸಬೇಕು.
- ರಾಮಣ್ಣ ವಡ್ಡರ, ಮುದ್ದೇಬಿಹಾಳ

ಮಾನವೀಯತೆಯಿಂದ ಗೌರವ
ಸಾಮಾನ್ಯವಾಗಿ ಜೀವನದಲ್ಲಿ ಒಮ್ಮೆ ಮಾತ್ರ ನಿರ್ಮಾಣ ಮಾಡುವ ಕನಸಿನ ಅರಮನೆ ವಾಸ್ತುವಿನ ಕಾರಣದಿಂದ ಸೆರೆಮನೆಯಾಗಬಾರದು. ವಾಸ್ತು ಪ್ರಕಾರ ನಿರ್ಮಿಸಲು ಹೊರಟರೆ ಮನೆ ಮಧ್ಯ ಭಾಗಕ್ಕೆ ಬಚ್ಚಲು ಮನೆ ಬರಬಹುದು. ಮಲಗುವ ಕೋಣೆ ಮನೆಯ ಹಿಂಭಾಗಕ್ಕೆ ಬರಬಹುದು. ಅಡುಗೆ ಕೋಣೆ ಮನೆ ಪ್ರವೇಶಕ್ಕೇ ಸಿಗಬಹುದು. ಇದರಿಂದ ಜೀವನ ಪೂರ್ತಿ ಮಾನಸಿಕ ಹಿಂಸೆ ಅನುಭವಿಸಬೇಕಾಗಬಹುದು. ಆದ್ದರಿಂದ ವಾಸ್ತು ಪ್ರಕಾರ ನಿರ್ಮಾಣ ಮಾಡುವುದಕ್ಕಿಂತ ನಮಗೆ ಅನುಕೂಲವಾಗುವ ಹಾಗೆ ನಿರ್ಮಾಣ ಮಾಡುವುದು ಒಳ್ಳೆಯದು. ಈ ವಿಚಾರದಲ್ಲಿ ಬೇರೆಯವರ ಮಾತಿಗೆ ಬೆಲೆ ಕೊಡಬಾರದು. ಗೌರವ ತಂದುಕೊಡುವುದು ಕಟ್ಟಡವಲ್ಲ, ಅದರಲ್ಲಿರುವ ಮಾನವೀಯತೆಯ ಗುಣವಿರುವ ಮನುಷ್ಯರಿಂದ.
- ಕೆ.ಎಸ್. ಶ್ರೀಧರ, ಅರಕಲಗೂಡು

ಗುಡಿಸಲಲ್ಲೂ ನೆಮ್ಮದಿ ಇದೆ!
ವಾಸ್ತು ಬೇಕು ನಿಜ. ಆದರೆ ಎಲ್ಲರೂ ಕೂಡ ವಾಸ್ತು ಪ್ರಕಾರ ಮನೆ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಹಲವಾರು ಕಾರಣಗಳಿವೆ. ಹಣದ ಅಭಾವ, ಜಾಗದ ಕೊರತೆ ಇತ್ಯಾದಿ. ಆದ್ದರಿಂದ ಇರುವಷ್ಟರಲ್ಲಿಯೇ ಸರಳ ವಾಸ್ತುವನ್ನು ಅಳವಡಿಸಿಕೊಂಡು ನೆಮ್ಮದಿಯ ಜೀವನ ನಡೆಸಬೇಕು. ಏಕೆಂದರೆ ನಿವೇಶನ, ಕಟ್ಟಡದ ವಾಸ್ತುವಿಗಿಂತ ನಮ್ಮ ಮನಸ್ಸಿನ ವಾಸ್ತು ಮೊದಲು ಸರಿಯಾಗಿರಬೇಕು. ನಮ್ಮ ಮನಸ್ಸು ಒಳ್ಳೆಯದಾಗಿದ್ದು, ಜ್ಞಾನದಿಂದ ಶಕ್ತಿಯುತವಾಗಿದ್ದರೆ ನಾವು ಗುಡಿಸಲಿನಲ್ಲಿಯೂ ಆನಂದದಿಂದ ಇರಬಹುದು. ಪ್ರಗತಿ, ಉನ್ನತಿಯನ್ನು ಸಾಧಿಸಬಹುದು. ವಾಸ್ತುವಿನ ಬಗ್ಗೆ ಅತಿಯಾದ ವ್ಯಾಮೋಹ ಹಾಗೂ ಮೂಢನಂಬಿಕೆ ಬೇಡವೇ ಬೇಡ.
-ಸದಾನಂದ ಭೀ. ಸಾತ್ವರ, ಯಕ್ಸಾಂಬಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.