ಯಾವುದೇ ತ್ಯಾಗಕ್ಕೂ ಸಿದ್ಧ
ಸ್ವಾಮಿ ವಿವೇಕಾನಂದರು ಮಹಾರಾಜ ಮಂಗಳಸಿಂಗನ ಆಸ್ಥಾನದಲ್ಲಿದ್ದಾಗ ಹಲವಾರು ಜನ ಅವರನ್ನು ಕಾಣಲು ಬರಲಾರಂಭಿಸಿದರು. ಅವರಲ್ಲಿ ಒಬ್ಬ ವೃದ್ಧ ದಿನವೂ ಬಂದು 'ಸ್ವಾಮೀಜಿ, ತಾವು ನನ್ನ ಮೇಲೆ ಕೃಪೆ ಮಾಡಬೇಕು; ನನ್ನ ಮೇಲೆ ಕರುಣೆ ತೋರಬೇಕು' ಎಂದು ಕೇಳಿಕೊಳ್ಳುತ್ತಿದ್ದ. ಸ್ವಾಮೀಜಿ ಅವನಿಗೆ ಕೆಲವು ಸಾಧನಾವಿಧಾನಗಳನ್ನು ಅನುಸರಿಸುವಂತೆ ಸಲಹೆ ನೀಡುತ್ತಿದ್ದರು. ಆದರೆ ಆ ಸಲಹೆಗಳನ್ನು ಸುಮ್ಮನೆ ಕೇಳಿಸಿಕೊಂಡು ಹೋಗುತ್ತಿದ್ದ ವಿನಾ ಅವುಗಳನ್ನು ಅನುಷ್ಠಾನಕ್ಕೆ ತರುತ್ತಿರಲಿಲ್ಲ.
ಎಂದಿನಂತೆ ಬಂದ ಕೃಪಾಯಾಚನೆ ಮಾಡಿದ. ಆದರೆ ಸ್ವಾಮೀಜಿ ಒಂದೂ ಮಾತನಾಡಲಿಲ್ಲ. ಹೀಗೆ ಒಂದೂವರೆ ಗಂಟೆ ಕಳೆಯಿತು. ಮುದುಕನ ಕೋಪ ನೆತ್ತಿಗೇರಿತು. ಶಪಿಸುತ್ತ ಅಲ್ಲಿಂದೆದ್ದು ಹೊರಟುಹೋದ. ತಕ್ಷಣ ಸ್ವಾಮೀಜಿ ನಗಲಾರಂಭಿಸಿದರು. ಆಗ ಭಕ್ತರೊಬ್ಬರು 'ಸ್ವಾಮೀಜಿ, ನೀವು ಆ ಮುದುಕನ ವಿಷಯದಲ್ಲಿ ಅಷ್ಟೇಕೆ ಕಟುವಾಗಿ ನಡೆದುಕೊಂಡಿರಿ?' ಎಂದು ಕೇಳಿದ. 'ನೋಡಿ, ನಾನು ಯುವಕರಿಗಾಗಿ ನನ್ನ ಇಡೀ ಜೀವನವನ್ನೇ ತ್ಯಾಗ ಮಾಡಲು ಸಿದ್ಧ. ಏಕೆಂದರೆ ಯುವಕರಲ್ಲಿ ನನ್ನ ಆದೇಶಗಳನ್ನು ಕಾರ್ಯಗತಗೊಳಿಸುವ ಮನಸ್ಸು, ಸಾಮರ್ಥ್ಯ ಇರುತ್ತದೆ. ಆದರೆ ಈ ಮುದುಕನಲ್ಲಿ ಅವೆರಡೂ ಇಲ್ಲ. ಜೀವನದ ತೊಂಬತ್ತು ಭಾಗವನ್ನೆಲ್ಲ ಪ್ರಾಪಂಚಿಕ ಭೋಗವನ್ನು ಬೆನ್ನಟ್ಟುವುದರಲ್ಲೇ ಕಳೆದಿದ್ದಾನೆ. ಸತ್ಯ ಸಾಕ್ಷಾತ್ಕಾರಕ್ಕೆ ಬೇಕಾದುದು ಸ್ವಪ್ರಯತ್ನ. ಯಾವ ಪ್ರಯತ್ನವನ್ನೂ ಮಾಡದೆ ಸುಮ್ಮನೆ ಕುಳಿತಿರುವವನ ಮೇಲೆ ಭಗವಂತ ಹೇಗೆ ಕೃಪೆ ಮಾಡಿಯಾನು?' ಎಂದರು ಸ್ವಾಮೀಜಿ.
- ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

