ಪ್ರಚುರಗೊಳ್ಳದ ಪ್ರಶಾಂತ ಗಾಳಿ

1958ರ ಹೊತ್ತಿಗೆ ಧಾರವಾಡದ ಕಲ್ಯಾಣನಗರದ ಸಸ್ಯ ಸಂಕುಲದಲ್ಲಿ ಮೊದಲು ತಲೆ ಎತ್ತಿದ್ದೇ ಸಾಹಿತಿ, ಶಿಕ್ಷಣ ತಜ್ಞ ಪ್ರೊ.ಸ.ಸ. ಮಾಳವಾಡರ 'ಪ್ರಶಾಂತ' ನಿವಾಸ. ಕರ್ನಾಟಕ ಕಾಲೇಜು ಪ್ರಾಚಾರ್ಯರಾಗಿದ್ದಾಗ ನೀಡಿದ್ದ ಆಕರ್ಷಣೀಯ ಪ್ರಿನ್ಸಿಪಾಲ್ ಬಂಗಲೆ ತ್ಯಜಿಸಿ 'ಪ್ರಶಾಂತ' ಮನೆ ಮಾಡಿದರು.
ಮಾಳವಾಡರನ್ನು ಕಾಣಲೆಂದು ಧಾರವಾಡಕ್ಕೆ ಬರುತ್ತಿದ್ದ ಕುವೆಂಪು 100x100 ಅಡಿ ವಿಸ್ತೀರ್ಣದ ಈ ಮನೆಯಲ್ಲಿ ತನ್ಮಯರಾಗಿ ಕಳೆಯುತ್ತಿದ್ದರು. ಒಂದಿಷ್ಟು ಆಧುನಿಕರಣಕ್ಕೆ ಒಳಗಾಗದ 'ಪ್ರಶಾಂತ' ಮನೆಯಲ್ಲಿ ಮಗ ಚನ್ನಬಸವ ಮಾಳವಾಡರು ನಿವೃತ್ತಿ ಜೀವನ ನಡೆಸುತ್ತಿದ್ದಾರೆ.
ಸಾಹಿತ್ಯ ದಂಪತಿ
ಮಾಳವಾಡರ ಊರು ಮೂಲತಃ ಬಾದಾಮಿಯ ಗೋವನಕೊಪ್ಪ. ಕರ್ನಾಟಕ ವಿವಿ ಸ್ಥಾಪನೆಯಲ್ಲಿ ಶಿ.ಶಿ. ಬಸವನಾಳ ಅವರೊಂದಿಗೆ ಮಾಳವಾಡರ ಪ್ರಯತ್ನ ಹಿರಿದು. ಕವಿವಿಯ ಮೊದಲ ಸಿಂಡಿಕೇಟ್ ಸದಸ್ಯರೂ ಹೌದು. ಸಾಹಿತಿ ಶಾಂತದೇವಿ ಮಾಳವಾಡರ ಪತ್ನಿ. ಶಾಂತಾದೇವಿ ಪತಿಯ ಒತ್ತಾಸೆಗೆ ಮನೆಯಲ್ಲೇ ಇಂಗ್ಲಿಷ್, ಹಿಂದಿ, ಪ್ರಾಚೀನ ಕನ್ನಡ ಸಾಹಿತ್ಯ ಹಾಗೂ ವಚನ ಸಾಹಿತ್ಯದ ಅಧ್ಯಯನ ಮಾಡಿದರು.
ಮಾಳವಾಡರು ಸಾಹಿತ್ಯ, ಸಂಸ್ಕೃತಿ, ಇತಿಹಾಸ ಹಾಗೂ ಅಧ್ಯಾತ್ಮ ಕುರಿತ 50ಕ್ಕೂ ಹೆಚ್ಚು ಪುಸ್ತಕ ಹಾಗೂ ಹತ್ತಾರು ಪ್ರಬುದ್ಧ ಲೇಖನ ಬರೆದಿದ್ದಾರೆ. 1972ರ ಕನ್ನಡ ಸಾಹಿತ್ಯ ಅಕಾಡೆಮಿ ಹಾಗೂ 1985ರ ರಾಜ್ಯೋತ್ಸವ ಪ್ರಶಸ್ತಿಗೆ ಸ.ಸ. ಮಾಳವಾಡ ಭಾಜನರು.
ಮರಾಠಿ ಪ್ರಾಬಲ್ಯ ಹೊಂದಿದ ಧಾರವಾಡದಲ್ಲಿ ಕನ್ನಡದ ದೀಪ ಹಚ್ಚಿದ ಸ.ಸ. ಮಾಳವಾಡರ ಬಗ್ಗೆ ಸಾಹಿತ್ಯ ಕ್ಷೇತ್ರದಲ್ಲಿ ಅಷ್ಟೊಂದು ಚಿಂತನೆ ನಡೆದಿಲ್ಲ. ಕವಿವಿ ಸ್ಥಾಪನೆಗೆ ಶ್ರಮಿಸಿದ್ದರೂ ಗೌರವ ಡಾಕ್ಟರೇಟ್ ನೀಡಿಲ್ಲ. ಮಾಳವಾಡರಿಗೆ ಸಂಬಂಧಿಸಿದ ಎಲ್ಲಾ ಕೃತಿಗಳನ್ನು ಒಟ್ಟುಗೂಡಿಸುವ ಪ್ರಯತ್ನ ನಡೆದಿಲ್ಲದಿರುವುದು ವಿಪರ್ಯಾಸ. ಕೆಲವು ಕೃತಿಗಳು ಮನೆಯಲ್ಲಿ, ಕವಿವಿ ಬಸವ ಪೀಠ, ಜೆಎಸ್ಸೆಸ್, ರಾಮದುರ್ಗದ ಬೆಂಬಳಗಿ ಕಾಲೇಜಿನ ಗ್ರಂಥಾಲಯದಲ್ಲಿ ಕಾಣಸಿಗುತ್ತಿವೆ.
- ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


