ಖಾಸಗಿ ಪ್ರಯಾಣ ಸುರಕ್ಷಿತವಲ್ಲ...
ಪ್ರತಿಯೊಬ್ಬ ಪ್ರಯಾಣಿಕನ ಜೀವ ಬಹಳ ಮುಖ್ಯ. ಏಕೆಂದರೆ, ಪ್ರತಿಯೊಬ್ಬ ಪ್ರಯಾಣಿಸುವಾಗ ಸುರಕ್ಷಿತೆ ಬಹಳ ಮುಖ್ಯವಾಗಿರುತ್ತದೆ. ಆದರೆ, ಖಾಸಗಿ ಬಸ್ಸಿನ ಮಾಲೀಕರು ಕೇವಲ ಒಂದು ಬಸ್ ಓಡಿಸಲು ಪರವಾನಗಿ ಪಡೆದಿರುತ್ತಾರೆ. ಆ ಪರವಾನಗಿಯ ಮೇಲೆ ಎರಡು ಅಥವಾ ಮೂರು ಬಸ್ಗಳನ್ನು ಓಡಿಸುತ್ತಿರುತ್ತಾರೆ. ಒಂದೊಮ್ಮೆ ಖಾಸಗಿ ಬಸ್ ಪ್ರಯಾಣದ ವೇಳೆ ರಿಪೇರಿ ಬಂದರೆ, ಪ್ರಯಾಣಿಕರ ಯಾತನೆ ಹೇಳತೀರದು. ಅದೇ ಸರ್ಕಾರಿ ಬಸ್ ಒಂದೊಮ್ಮೆ ಕೆಟ್ಟು ನಿಂತರೆ, ಬೇರೆ ಸರ್ಕಾರಿ ಬಸ್ಗೆ ಪ್ರಯಾಣಿಕರನ್ನು ಹತ್ತಿಸಿ ಕಳುಹಿಸಿಕೊಡುತ್ತಾರೆ. ಮೇಲಾಗಿ ಅನಧಿಕೃತವಾಗಿ ಸಂಚರಿಸುವ ಖಾಸಗಿ ಬಸ್ಗಳಲ್ಲಿ ಪ್ರಯಾಣಿಸುವಾಗ ಒಂದೊಮ್ಮೆ ಅಪಘಾತವಾಗಿ ನಮ್ಮ ಪ್ರಾಣಪಕ್ಷಿ ಹಾರಿಹೋದರೆ, ವಿಮೆ ಹಣ ನಮ್ಮ ಕುಟುಂಬಕ್ಕೆ ತಲುಪುತ್ತದೆ ಎಂದು ಹೇಳುವುದು ಕಷ್ಟ. ಆದರೆ ಸರ್ಕಾರಿ ಬಸ್ಗಳಲ್ಲಿ ಸಂಚರಿಸಿದರೆ ತಡವಾಗಿಯಾದರೂ ವಿಮೆ ಹಣ ಕುಟುಂಬಕ್ಕೆ ತಲುಪುತ್ತದೆ. ಏನೇ ಆದರೂ ಸರ್ಕಾರಿ ಬಸ್ ಪ್ರಯಾಣ ಕ್ಷೇಮಕರ.
- ಪ್ರವೀಣ ಆರ್. ಶಿಂಧೆ., ಶಿರಸಿ.
ಅತೀ ವೇಗ ಚಾಲನೆ
ನನ್ನ ಊರು ಬಾಗಲಕೋಟ. ಕೆಲಸದ ನಿಮಿತ್ತ ನಾನು ನನ್ನ 5 ವರ್ಷದ ಮಗನನ್ನು ಕರೆದುಕೊಂಡು ಖಾಸಗಿ ಬಸ್ಸಿನಲ್ಲಿ ಆಗಾಗ್ಗೆ ಬೆಂಗಳೂರಿಗೆ ಬಂದು ಹೋಗುತ್ತಿದ್ದೆ. ನನ್ನ ಅನುಭವದ ಪ್ರಕಾರ ನಾನು ಪ್ರಯಾಣಿಸುತ್ತಿದ್ದ ಖಾಸಗಿ ಬಸ್ನ ವೇಗ ತುಂಬಾ ಇರುತ್ತಿತ್ತು. ಈ ಬಗ್ಗೆ ಬಸ್ ಚಾಲಕನಿಗೆ ಮತ್ತು ಮಾಲೀಕನಿಗೆ ಹೇಳಿದರೂ ಏನೂ ಪ್ರಯೋಜನವಾಗಿರಲ್ಲಿಲ್ಲ. ಎಂದಿನಂತೆ ಚಾಲಕ ಬಸ್ಅನ್ನು ಅತಿವೇಗವಾಗಿ ಚಲಾಯಿಸುತ್ತಿದ್ದ. ಹೀಗೆಯೇ ಒಮ್ಮೆ ನಾನು ಮತ್ತು ನನ್ನ ಮಗ ಪ್ರಯಾಣಿಸುವಾಗ ಬಸ್ ಅಪಘಾತಕ್ಕೀಡಾಯಿತು. ಅದೃಷ್ಟವಶಾತ್ ಪ್ರಾಣಾಪಾಯದಿಂದ ನಾವು ಪಾರಾದೆವು. ಈ ಘಟನೆ ನಡೆದ ನಂತರ ಖಾಸಗಿ ಬಸ್ಗಳ ಸಹವಾಸವೇ ಬೇಡ ಎಂಬ ತೀರ್ಮಾನಕ್ಕೆ ಬಂದು, ಆಗಿನಿಂದಲೂ ಸರ್ಕಾರಿ ಬಸ್ ಅಥವಾ ರೈಲಿನಲ್ಲಿ ಸುರಕ್ಷಿತವಾಗಿ ಪ್ರಯಾಣ ಮಾಡುತ್ತಿದ್ದೇನೆ. ನಿಜಕ್ಕೂ ಸರ್ಕಾರಿ ಬಸ್ಗಳಲ್ಲಿ ಪ್ರಯಾಣ ಸುಖಕರವಾಗಿರುತ್ತದೆ.
- ಶ್ರೀಮತಿ ಗೌರಿ ಅಶೋಕ್, ಬಾಗಲಕೋಟೆ.
ನಿರ್ಲಕ್ಷ್ಯ ಧೋರಣೆ
ಖಾಸಗಿ ಬಸ್ ಪ್ರಯಾಣ ಸುರಕ್ಷಿತವಲ್ಲ ಎಂಬುದಕ್ಕೆ ಇತ್ತೀಚೆಗೆ ನಡೆಯುತ್ತಿರುವ ಬಸ್ ದುರಂತಗಳೇ ಜ್ವಲಂತ ಉದಾಹರಣೆಗಳು.
1. ಖಾಸಗಿ ಬಸ್ಗಳಲ್ಲಿ ನಿರ್ವಾಹಕರು ಪ್ರಯಾಣ ಆರಂಭಿಸುವ ಮುನ್ನ ಪ್ರಯಾಣಿಕರಿಗೆ ಸೌಲಭ್ಯದ ಮಾಹಿತಿಯನ್ನು ಸೂಚಿಸುವುದಿಲ್ಲ. 2. ಬಸ್ನಲ್ಲಿ ತುರ್ತು ನಿರ್ಗಮನ ಎಲ್ಲಿದೆ? ಎಂಬುದನ್ನು ತೋರಿಸದಿರುವುದು. 3. ತುರ್ತು ನಿರ್ಗಮನದ ಗಾಜು ಒಡೆಯಲು 'ಸುತ್ತಿಗೆ' ಎಲ್ಲಿದೆ ಎಂಬುದನ್ನು ತಿಳಿಸದಿರುವುದು. 4. ಕೆಲವು ಖಾಸಗಿ ಬಸ್ಗಳಲ್ಲಿ ತುರ್ತು ನಿರ್ಗಮನವೇ ಇರುವುದಿಲ್ಲ. 5. ಚಾಲಕರಿಗೆ ವಿಶೇಷ ತರಬೇತಿ ಅಗತ್ಯ. 6. ಮೋಟಾರ್ ವೆಹಿಕಲ್ ಕಾಯಿದೆಯಂತೆ ಒಬ್ಬ ಚಾಲಕ ಎಂಟು ಗಂಟೆ ಮಾತ್ರ ಕೆಲಸ ಮಾಡಬೇಕು. 7. ಎಂಟು ಗಂಟೆ ಮೇಲೆ ಪ್ರಯಾಣವಿದ್ದರೆ ಮತ್ತೊಬ್ಬ ಚಾಲಕನನ್ನು ನೇಮಿಸಬೇಕು.
ಇಂತಹ ಸುರಕ್ಷತಾ ಕ್ರಮಗಳನ್ನೂ ಪಾಲಿಸದೆ ಇರುವುದರಿಂದ ಅಪಘಾತಗಳು ಕಾರಣವಾಗುತ್ತವೆ.
- ಹುಲಿಕೆರೆ ಟಿ.ಎಸ್. ಆರಾಧ್ಯ, ಮೈಸೂರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

