ತೆಂಗಿನಮರ

ಪಾಮೇ ಸಸ್ಯ ಕುಟುಂಬದ ಕೋಕಾಸ್ ಜಾತಿಯಲ್ಲಿ ಬರುವ ಏಕೈಕ ಮರವಾಗಿದೆ. ಈ ಮರದ ಸಸ್ಯಶಾಸ್ತ್ರದ ಹೆಸರು ಕೋಕಸ್ ಲ್ಯೂಸಿಫೆರಾ.
ಇಂಡೋ-ಫೆಸಿಫಿಕ್ ಸಮುದ್ರ ಪ್ರಾಂತ, ಮಲೇಷ್ಯಾ ಅಥವಾ ದಕ್ಷಿಣ ಅಮೆರಿಕಾದಲ್ಲಿ ಮೊದಲು ಕಂಡುಬಂದಿತು ಎಂಬ ವಾದವಿದೆ.
ಭಾರತ ಮತ್ತು ಆಸ್ಟ್ರೇಲಿಯಾ ಸಂಗ್ರಹಿಸಿರುವ ಅತಿ ಪುರಾತನ ಪಾಳೆಯುಳಿಕೆಗಳ ಮೂಲಕ ಈ ಎರಡು ದೇಶಗಳೇ ಮೂಲ ಸ್ಥಾನ ಎಂದು ನಂಬಲಾಗಿದೆ.
ಕರಾವಳಿ ಪ್ರಾಂತ ಮತ್ತು ಸಮುದ್ರ ಮಟ್ಟಕ್ಕಿಂತ 900 ಮೀಟರ್ ಎತ್ತರದ ಪ್ರದೇಶಗಳಲ್ಲಿ ಬೆಳೆಯುತ್ತದೆ. ಕಲ್ಪವೃಕ್ಷ ಎಂದೂ ಕರೆಯುವುದುಂಟು.
ತೆಂಗಿನ ಮರದ ಜೀವನ ಕಾಲ 80ರಿಂದ 100 ವರ್ಷಗಳು. ಮರದಲ್ಲಿ 30 ಗರಿಗಳಿರುತ್ತವೆ. ಪ್ರತಿತಿಂಗಳೂ 1 ಹೊಸಗರಿ ಬಿಡುತ್ತದೆ. ಗರಿಯ ಜೀವನ ಕಾಲ 30 ದಿನ.
ಒಂದು ಮರದಿಂದ ವರ್ಷದಲ್ಲಿ 30 ರಿಂದ 60 ಕಾಯಿಗಳನ್ನು ಬಿಡುತ್ತದೆ. ಹೆಣ್ಣು ಹೂ ಹುಟ್ಟಿದ ನಂತರ ಕಾಯಿ ಆಗುವುದಕ್ಕೆ 1 ವರ್ಷ ಬೇಕು. ಒಂದು ಕಾಯಿ ಸುಮಾರು 1.5 ಕಿಲೋ ತೂಗುತ್ತದೆ.
ಕಾಯಿಯಿಂದ ಅಂಕುರ ಹೊರಬರಲು 3 ರಿಂದ 4 ತಿಂಗಳಾಗುತ್ತದೆ. ಒಣಗಿದ ಕಾಯಿಯಲ್ಲಿ ಶೇಕಡಾ 70 ಎಣ್ಣೆಯಾಂಶ ಇದೆ. ಭಾರತದಲ್ಲಿ ಇದೊಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


