ಬೈಟುಕಾಫಿ

ಖಾಸಗಿಯಲ್ಲಿ ಸೌಲಭ್ಯ ಹೆಚ್ಚು

Published On :

ಖಾಸಗಿ ಬಸ್‌ನಲ್ಲಿ ನಾವು ಹೋಗುವ ಸ್ಥಳಕ್ಕೆ ಬೇಗನೆ ತಲುಪಬಹುದು. ಬಸ್‌ನಲ್ಲಿ ಪ್ರಯಾಣ ಮಾಡುವಾಗ ಬೇಸರ ಕಳೆಯಲು ಸಂಗೀತ ಅಥವಾ ಸಿನಿಮಾ ನೋಡುವ ಅವಕಾಶ ಇರುತ್ತವೆ. ಆಸನಗಳು ಆರಾಮವಾಗಿ ಮತ್ತು ಸುರಕ್ಷತೆಯಿಂದ ಇರುತ್ತವೆ. ಪ್ರಯಾಣಿಕರ ಲಗೇಜ್‌ಗಳನ್ನು ಖಾಸಗಿ ಬಸ್‌ನಲ್ಲಿ  ಸಾಗಿಸುವಾಗ ಸಿಬ್ಬಂದಿ ಸಹಾಯ ಮಾಡುತ್ತಾರೆ. ಪ್ರಯಾಣಿಕರು ನಿದ್ರಿಸುತ್ತಿದ್ದರೆ ಇಳಿಯುವ ಸ್ಥಳ ಬಂದಾಗ ನೆನಪಿಸುತ್ತಾರೆ ಹಾಗೆಯೇ ಅನಿವಾರ್ಯ ಸಂದರ್ಭದಲ್ಲಿ ಹಣ ಕಡಿಮೆ ಇದ್ದರೂ ಸಹ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಾರೆ. ಚಿಲ್ಲರೆ ಹಣ ಸರಿಯಾಗಿ ವಾಪಸ್ಸು ನೀಡುತ್ತಾರೆ. ನಮಗೆ ಬೇಕಾದ ಸ್ಥಳದಲ್ಲಿ ಬಸ್ ನಿಲ್ಲಿಸುತ್ತಾರೆ. ಒಂದೇ ಶಬ್ದದಲ್ಲಿ ಹೇಳುವುದಾದರೆ ಪ್ರಯಾಣಿಕರ ಸ್ನೇಹಿಯಾಗಿದೆ. ಅದೇ ಸರ್ಕಾರಿ ಬಸ್‌ಗಳಲ್ಲಿ ಕೆಲವು ಸೌಲಭ್ಯ ಹೊರೆತು ಪಡಿಸಿದರೆ ಬೇರೆ ಯಾವುದೆ ಸೌಲಭ್ಯಗಳು ಇರುವುದಿಲ.್ಲ ನಿರ್ವಾಹಕರೂ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದಿಲ್ಲ.  ಹಾಗಾಗಿ ಖಾಸಗಿ ಬಸ್ ಪ್ರಯಾಣ ಸುಖಕರವಾಗಿರುತ್ತದೆ.
- ಜಿ.ಕೆ.ರಾಘವೇಂದ್ರ, ವೃಂದಾವನಹಳ್ಳಿ

ಟಾಪ್‌ನಲ್ಲೂ ಪ್ರಯಾಣ!
ಖಾಸಗಿ ಬಸ್‌ಗಳ ವೇಗಕ್ಕೆ ಲಂಗುಲಗಾಮಿಲ್ಲ. ಅದೇ ಸರ್ಕಾರಿ ಬಸ್‌ಗಳಿಗೆ ವೇಗ ಮಿತಿಯನ್ನು ಅಳವಡಿಸಲಾಗಿದೆ ಮತ್ತು ನಿಗದಿತ ಸಮಯಕ್ಕೆ ಬರುತ್ತದೆ. ಕೆಲಮೊಮ್ಮೆ ಕೇವಲ ನಾಲ್ಕೈದು ಪ್ರಯಾಣಿಕರಿದ್ದರೂ ಸಂಚರಿಸಲೇಬೇಕು. ಏಕೆಂದರೆ ಲಾಭ-ನಷ್ಟದ ಹೊಣೆಯನ್ನು ಸರ್ಕಾರವೇ ನಿಭಾಯಿಸುತ್ತದೆ. ಖಾಸಗಿ ಬಸ್ಸುಗಳಲ್ಲಿ ಈ ಪದ್ದತಿ ಇಲ್ಲ. ಖಾಸಗಿ ಬಸ್‌ಗಳಲ್ಲಿ ನಿಯಮದ ಪ್ರಕಾರ ನಿಗದಿತ ಸೀಟ್‌ಗಳನ್ನಷ್ಟೇ ಹಾಕಬೇಕು ಆದರೆ, ನೀತಿನಿಯಮಗಳನ್ನೆಲ್ಲಾ ಧಿಕ್ಕರಿಸಿ ಕುರಿ ಮಂದೆಗಳಂತೆ ತುಂಬುವುದುಂಟು. ಟಾಪ್‌ನಲ್ಲಿ ಪ್ರಯಾಣಿಸುವುದಂತೂ ಸರ್ವೆಸಾಮಾನ್ಯವಾಗಿದೆ. ಸರ್ಕಾರಿ ಸಾರಿಗೆ ಹಾಗೂ ಖಾಸಗಿ ಸಾರಿಗೆಯನ್ನು ತುಲನೆ ಮಾಡಿ ನೋಡಿದರೆ ಖಾಸಗಿ ಬಸ್‌ಗಿಂತ ಸರ್ಕಾರಿ ಬಸ್‌ಪ್ರಯಾಣ ಸುರಕ್ಷಿತ ಎನ್ನುವುದರಲ್ಲಿ ಅನುಮಾನವಿಲ್ಲ.
- ಕೆ.ಎಂ.ಮುತ್ತುಸ್ವಾಮಿ, ಚಿತ್ರದುರ್ಗ

ಸಿಬ್ಬಂದಿ ಕಿರಿಕಿರಿ!
ಖಾಸಗಿ ಬಸ್‌ಗಳಲ್ಲಿ ಮೂಲ ಸೌಕರ್ಯಗಳಾದ ಸೀಟುಗಳು, ಸ್ವಚ್ಚತೆ ಹಾಗೂ ಇನ್ನಿತರ ಸೌಲಭ್ಯಗಳು ಸರ್ಕಾರಿ ಬಸ್‌ಗಳಿಗಿಂತ ಉತ್ತಮವಾಗಿರುತ್ತವೆ, ಆದರೆ, ಏಜೆಂಟ್‌ಗಳು ಹಾಗೂ ನಿರ್ವಾಹಕರ ಕಾಟ ವಿಪರೀತವಾಗಿರುತ್ತದೆ. ಎಲ್ಲೆಂದರಲ್ಲಿ ಬಸ್‌ಗಳನ್ನು ನಿಲ್ಲಿಸುವುದು, ಪ್ರಯಾಣಿಕರೊಡನೆ ಏರುದನಿಯಲ್ಲಿ ಮಾತನಾಡುವುದು, ನಿಗದಿ ಪಡಿಸಿದಕ್ಕಿಂತ ಹೆಚ್ಚಿನ ದರ ವಸೂಲು ಮಾಡುವುದನ್ನು ಗಮನಿಸಿದರೆ ಇವರ ಮೇಲೆ ಬಸ್ ಮಾಲೀಕರ ಅಥವಾ ಸಾರಿಗೆ ಇಲಾಖೆಯ ಯಾವುದೇ ನಿಯಂತ್ರಣ ಇಲ್ಲವೆಂದು ತೋರುತ್ತದೆ. ಇತ್ತೀಚೆಗೆ ನಡೆದ ಅಪಘಾತದಲ್ಲಿ ಪ್ರಯಾಣಿಕರ ಸಂಖ್ಯೆಯೇ ನಿಖರವಾಗಿ ತಿಳಿಯದಿರುವುದಕ್ಕೆ ಕಾರಣ ಈ ಬಸ್‌ನ ಏಜೆಂಟರು. ಇವರ ಮೇಲೆ ನಿಯಂತ್ರಣ ಸಾಧಿಸಿ ಹತೋಟಿಯಲ್ಲಿ ಇಟ್ಟರೆ ಖಾಸಗಿ ಬಸ್‌ಗಳಲ್ಲೂ ಉತ್ತಮ ಸೇವೆಯನ್ನು ಪಡೆಯುವುದಕ್ಕೆ ಅವಕಾಶವಾಗುತ್ತದೆ.
- ಬಿ.ಶ್ರೀನಿವಾಸನಾಯಕ, ದಾವಣಗೆರೆ.

'ಜಗುಲಿ'ಯಲ್ಲಿ ಈ ಸಲದ ವಿಷಯ 'ಖಾಸಗಿ ಬಸ್ ಪ್ರಯಾಣ ಎಷ್ಟು ಸುರಕ್ಷಿತ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.